ರಣಬೀರ್ ಕಪೂರ್ ಬೆಂಗಳೂರಿಗೆ ಬಂದಿದ್ಯಾಕೆ ಅಂದ್ರೆ!
, ಗುರುವಾರ, 13 ಫೆಬ್ರವರಿ 2014 (10:35 IST)
ಬಾಲಿವುಡ್ ಚಾಕೊಲೆಟ್ ಬಾಯ್ ರಣಬೀರ್ ಕಪೂರ್ ಬೆಂಗಳೂರಿನಲ್ಲಿ ಒಂದು ದಿನಗಳ ಮಟ್ಟಿಗೆ ಸೈಕಲ್ ನಲ್ಲಿ ಓಡಾಡಿಕೊಂಡಿದ್ದರು. ಅವರ ಮಾಜಿ ಪ್ರೇಯಸಿಯ ತವರಾದ ಬೆಂಗಳೂರಲ್ಲಿ ರಣಬೀರ್ ಗೆ ಏನ್ ಕೆಲಸ ಇತ್ತು ಎನ್ನಿಸುವುದು ಸಹಜ. ಅವರು ಇಲ್ಲಿ ಈಗ ನಡೆಯುತ್ತಿರುವ ಐ ಪಿ ಎಲ್ ಆಕ್ಷನ್ ನಲ್ಲಿ ಭಾಗಿಯಾಗಿದ್ದರು. ನಿರಂತರ ಕೆಲಸದ ನಡುವೆ ಅವರು ಹೋಟೆಲಿಗೆ ಬಂದು ಸೈಕ್ಲಿಂಗ್ ಮಾಡಿ ತಮ್ಮ ದೇಹಕ್ಕೆ ಬೇಕಾದ ವ್ಯಾಯಾಮ ನೀಡಿದರು.
ರಣಬೀರ್ ಅವರ ಇತ್ತೀಚಿನ ಚಿತ್ರ ಬೇಷರಂ ಬಾಕ್ಸಾಫೀಸಲ್ಲಿ ಹೇಳಿ ಕೊಳ್ಳುವಂತಹ ಗೆಲುವು ಸಾಧಿಸಲಿಲ್ಲ. ಈಗ ಅವರು ಅನುರಾಗ್ ಕಶ್ಯಪ್ ನಿರ್ದೇಶನದ ಬಾಂಬೆ ವೆಲ್ವೆಟ್, ಅಲ್ಲದೆ ಜಗ್ಗು ಜಾಸೂಸ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.ಸದ್ಯಕ್ಕೆ ಕತ್ರಿನ ಜೊತೆಗಿನ ಬಾಂಧವ್ಯದ ಮೇಲೆ ಸಣ್ಣ ಪ್ರಮಾಣದ ಬಿರುಕು ಉಂಟಾಗಿದೆ. ಏನಾಗಿದೆ ಎನ್ನುವ ಸತ್ಯ ಯಾರಿಗೂ ತಿಳಿದಿಲ್ಲ !