ರಣಬೀರ್ -ಕತ್ರಿನಾ ಒಟ್ಟಿಗಿಲ್ವಾ ?
, ಶನಿವಾರ, 1 ಫೆಬ್ರವರಿ 2014 (10:06 IST)
ಬಾಲಿವುಡ್ ನಲ್ಲಿ ಪ್ರೀತಿಯನ್ನು ತೆರೆಯ ಮೇಲೆ ತೋರಿಸಿದಷ್ಟು ವಿಶೇಷವಾಗಿ ನಿಜ ಬದುಕಲ್ಲಿ ಮುಂದುವರೆಸುವುದಿಲ್ಲ. ಅನೇಕ ಜೋಡಿಗಳು ಸೇರಿದಷ್ಟೆ ಸುಲಭವಾಗಿ ಹೃದಯ ಮುರುಕೊಂಡು ಬಿಡ್ತಾರೆ. ಈಗ ರಣಬೀರ್ ಕಪೂರ್ ಮತ್ತು ಕತ್ರಿನ ಕೈಫ್ ಕಥೆಯು ಹೀಗೆ ಆಗಿದೆ. ಈ ಜೋಡಿಯು ಪ್ರೇಮ ಮಾಡುತ್ತಾ ತಾವೆಷ್ಟು ಪ್ರೇಮಿಗಳು ಎನ್ನುವ ಸಂಗತಿಯನ್ನು ಜಗತ್ತಿಗೆ ತೋರಿಸಿದ್ದರು. ಇನ್ನೇನು ಮಾಡುವೆ ಆಗಿಯೇ ಬಿಡುತ್ತಾರೆ ಎನ್ನುವುದನ್ನು ಸಹ ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಯಾವುದೇ ಸಂಗತಿ ನಡೆಯುವ ಸಾಧ್ಯತೆಯ ಪ್ರಮಾಣ ಕಡಿಮೆ ಆಗಿದೆ ಎನ್ನುತ್ತಿದೆ ಮಾಹಿತಿಗಳು. ಇತ್ತೀಚಿಗೆ ಅಮೀರ್ ಖಾನ್ ಅವರು ಏರ್ಪಡಿಸಿದ್ದ ಧೂಮ್3 ಯ ಸಕ್ಸಸ್ ಪಾರ್ಟಿಯಲ್ಲಿ ಈ ಜೋಡಿ ಬೇರ್ಬೆರೆಯಾಗಿ ಬಂದರು. ಈಗಾಗಲೇ ಇವರಿಬ್ಬರ ಬಿರುಕಿನ ಬಗ್ಗೆ ಅಪಸ್ವರ ಎದ್ದಿರುವ ಬಿ ಟೌನ್ ನಲ್ಲಿ ಈ ಘಟನೆ ಪುಷ್ಟಿ ಕೊಟ್ಟಿದೆ. ನ್ಯೂ ಇಯರ್ ಸೆಲಬ್ರೆಶನ್ ಬಳಿಕ ಈ ಜೋಡಿ ಬೇರೆಬೇರೆಯಾಗಿ ಭಾರತಕ್ಕೆ ಬಂದಿದ್ದರು. ಆಗಲೇ ಇವರ ಪ್ರೀತಿಯ ಬಗ್ಗೆ ಅಪಸ್ವರ ಎದ್ದಿದೆ ಎನ್ನುವ ಶಂಕೆ ಎಲ್ಲರಲ್ಲೂ ಬೇರೂರಿತ್ತು. ಅದೀಗ ಸ್ಪಷ್ಟವಾಗಿದೆ.. ಇನ್ನು ಮುಂದೆ ಅದರ ಸ್ವರೂಪ ಯಾವ ಮಟ್ಟಕ್ಕೆ ಬದಲಾಗುತ್ತದೆಯೋ ?