Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ಹೊಸ ಸಿನಿಮಾಗಳ ಸಂಖ್ಯೆ ಬಗ್ಗೆ ಸಣ್ಣ ಮಾಹಿತಿ ನಿಮಗಾಗಿ !

ರಜನಿ ಕಾಂತ್ ಹೊಸ ಸಿನಿಮಾಗಳ ಸಂಖ್ಯೆ ಬಗ್ಗೆ ಸಣ್ಣ ಮಾಹಿತಿ ನಿಮಗಾಗಿ !
, ಸೋಮವಾರ, 3 ಮಾರ್ಚ್ 2014 (11:10 IST)
PR
ರಜನಿಕಾನ್ ಅವರ ಸಿನಿಮಾಗಳು ಎಂದರೆ ಅದಕ್ಕೊಂದು ವಿಶೇಷವಾದ ವ್ಯಾಲ್ಯೂ ಇದೆ ಭಾರತೀಯ ಚಿತರಂಗದಲ್ಲಿ. ಅವರ ಸಿನಿಮಾಗಳು ರಿಲೀಸ್ ಆಗುತ್ತದೆ ಎಂದರೆ ಸಾಕು ಸಾಕಷ್ಟು ಖುಷಿಯ ಸಂಭ್ರಮ ಅವರ ಅಭಿಮಾನಿಗಳ ಮನೆಯಲ್ಲಿ. ಕಳೆದ ವರ್ಷ ಶೂಟಿಂಗ್ ಆರಂಭಿಸಿದ ಕೊಚ್ಚಾಡಿಯನ್ ಚಿತ್ರವೂ ಈಗ ಬಿಡುಗಡೆಗೆ ಸಿದ್ಧ ಆಗಿದೆ. ಇದರ ನಡುವೆ ಅವರು ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನುವುದು ತಾಜಾ ಸುದ್ದಿ ಆಗಿದೆ.

ಸದ್ಯದಲ್ಲೇ ಕೊಚ್ಚಾಡಿಯನ್ ಸಿನಿಮಾದ ಆಡಿಯೋ ಬಿಡುಗಡೆಯ ಕಾರ್ಯಕ್ರಮದ ಸಿದ್ಧತೆಯಲ್ಲಿ ಚಿತ್ರತಂಡ ಮಗ್ನರಾಗಿದ್ದಾರೆ. ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ಧ ಆಗುತ್ತಿದ್ದಾರೆ . ಅದಾದ ನಂತರ ಕೆ.ಎಸ್. ರವಿಕುಮಾರ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಮ್ಮತಿ ನೀಡಿದ್ದಾರೆ ಈ ಸೂಪರ್ ಸ್ಟಾರ್. ಒಟ್ಟಾರೆ ರಜನಿ ಎರಡು ಚಿತ್ರಗಳಲಿ ನಟಿಸಲು ಸಿದ್ಧ ಆಗಿದ್ದಾರೆ.

ಶಂಕರ್ ಮತ್ತು ರಜನಿ ಅವರ ಕಾಂಬಿನೇಶನ್ ನಿಂದ ತಯಾರಾಗುತ್ತಿರುವ ಚಿತ್ರ 2015ರಲ್ಲಿ ಬಿಡುಗಡೆಯಾಗುತ್ತದೆ. ಕೆ.ಎಸ್. ರವಿ ಕುಮಾರ್ ಅವರ ಚಿತ್ರ 2016ರಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿದೆ.

ಕೊಚ್ಚಾಡಿಯನ್ ಬಳಿಕ ಕೇವಲ ಒಂದು ಚಿತ್ರದಲ್ಲಿ ಮಾತ್ರ ರಜನಿ ನಟಿಸುತ್ತಾರೆ ಎಂದು ಅವರ ಅಭಿಮಾನಿಗಳು ತಿಳಿದಿದ್ದರು, ಆದರೆ ಅವರು ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎನ್ನುವ ಸಂಗತಿ ನಿಮಗೆ ತಿಳಿಸುತ್ತಿದ್ದೇವೆ.. ಎಪ್ಪಡಿ !
webdunia
PR

Share this Story:

Follow Webdunia kannada