Select Your Language

Notifications

webdunia
webdunia
webdunia
webdunia

ರಜನಿಕಾಂತ್ ಅಭಿಮಾನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ.. ಯಾವ ಕಾರಣಕ್ಕೆ ಗೊತ್ತೆ?

ರಜನಿಕಾಂತ್
, ಶನಿವಾರ, 11 ಜನವರಿ 2014 (09:12 IST)
PR
ತಾವು ಅಭಿಮಾನಿಸುವ ನಟರ ಬಗ್ಗೆ ಒಂದು ಹೆಚ್ಹಿನ ಪ್ರೀತಿ ಇರುತ್ತದೆ ಬೇರೆ ಎಲ್ಲ ವಿಷಯಗಳಿಗಿಂತ. ಭಾರತದ ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್ ಒಬ್ಬರೇ ಎನ್ನ ಬಹುದು. ಅವರ ಸಾಧನೆಯು ಅಪಾರ ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ. ಈಗ ಹೇಳಲು ಹೋರಾಟ ವಿಷಯ ಅದಲ್ಲ. ಬೆಂಗಳೂರಿನ ಗವಿಪುರದಲ್ಲಿ ಇರುವ ಸರ್ಕಾರಿ ಮಾರಿ ಪ್ರಾಥಮಿಕ ಶಾಲೆಯಲ್ಲಿ ರಜನಿಕಾಂತ್ ಓದಿದ್ದು. ಅದರಲ್ಲಿ ಈಗ ಮೂರೂ ಕೊಠಡಿಗಳಿದ್ದು ಸುಮಾರು 500 ಜನ ಮಕ್ಕಳು ಓದುತ್ತಿದ್ದಾರೆ.

ಆ ಶಾಲೆಯು ಕಳೆದ ಎರಡು ವರ್ಷಗಳಿಂದ ನಿರ್ಮಾಣ ಕಾರ್ಯದಲ್ಲಿ ನಿರತ. ಸರ್ಕಾರಿ ಕೆಲಸ ದೇವರ ಕೆಲಸ ,ಆದ್ದರಿಂದ ಈ ಶಾಲೆಯ ಕೆಲಸವೂ ನಿಧಾನವಾಗಿ ನಡೆಯುತ್ತಿದೆ. ಈಗ ಅಲ್ಲಿರುವ ಮಕ್ಕಳು ಬಸವನ ಗುಡಿಯ ಶಾಲೆಯೊಂದರಲ್ಲಿ ಜಾಗ ಹಂಚಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಿಟ್ಟಾಗಿರುವ ಅವರ ಅಭಿಮಾನಿಗಳು, ಈ ಶಾಲೆಯ ಕೆಲಸ ಬೇಗ ಮುಗಿಸಿ ಇಲ್ಲದೆ ಇದ್ದಾರೆ ರಾಜ್ಯಾದಾದ್ಯಂತ ಧರಣಿ ಮಾಡ್ತೀವಿ ಎಂದು ವಾರ್ನ್ ಮಾಡಿದ್ದಾರೆ. ಇಂತಹ ಎಚ್ಚರಿಕೆಗಳಿಂದ ಒಂದಷ್ಟು ಸರ್ಕಾರಿ ಶಾಲೆಗಳಿಗೆ ಜೀವದಾನ ಆಗುತ್ತದೆ.

Share this Story:

Follow Webdunia kannada