Select Your Language

Notifications

webdunia
webdunia
webdunia
webdunia

ಮತ್ತೆ ಗರಿಗೆದರಿದ ಕರೀನಾ -ಕತ್ರಿನಾ ಜಗಳ್-ಬಂಧಿ

ಕರೀನಾ ಕಪೂರ್
, ಮಂಗಳವಾರ, 21 ಜನವರಿ 2014 (11:57 IST)
PR
ಬಾಲಿವುಡ್ ನಲ್ಲಿ ಸಾಮಾನ್ಯವಾಗಿ ಹೀರೋಯಿನ್ ಗಳ ನಡುವೆ ನಡೆಯುವ ಗಲಾಟೆಗಳು ಸಹ ಹೆಚ್ಚಿನ ಹೆಸರು ಪಡೆದಿದೆ. ಇಂತಹ ಗಲಾಟೆಗಳಲ್ಲಿ ಕರೀನ ಕಪೂರ್ ಮತ್ತು ಕತ್ರಿನಾ ಕೈಫ್ ನಡುವಿನ ಜಗಳವು ಸಹ ಒಂದು. ಅವರಿಬ್ಬರೂ ಒಬ್ಬನನ್ನೇ ಪ್ರೀತಿಸಿದ್ದರು ( ಬೇರೆಬೇರೆ ಕಾಲದಲ್ಲಿ) ಅದೂ ಎರಡು ವರ್ಷಗಳ ಕಾಲ. ಅದೇ ರೀತಿ ಅನೇಕ ಕಾರಣಗಳಿಂದ ಈ ಚೆಲುವೆಯರ ನಡುವೆ ಜಟಾಪಟಿ ಮತ್ತು ಲಟಾಪಟಿ.ಪಬ್ಲಿಕ್ ನಲ್ಲಿ ಒಬ್ಬರ ಮೇಲೊಬ್ಬರು ತಮಗೆ ತೋಚಿದ ಕಾಮೆಂಟ್ ಮಾಡಿಕೊಳ್ಳುತ್ತಾ ಬಿಟೌನ್ ಮಂದಿಯ ಬಾಯಿಗೆ ಸದಾ ಆಹಾರವಾಗಿದ್ದಾರೆ.

ಆದರೆ ಸೈಫ್ ಜೊತೆ ಮದುವೆಯಾದ ಬಳಿಕ ಕರೀನ ಮತ್ತು ಕತ್ರಿನ ನಡುವಿನ ಗಲಾಟೆ ದೂರವಾಗಿದೆ. ಈಗ ಮತ್ತೆ ಅದು ಆರಂಭವಾಗಿದೆ. ಸೈಫ್ ಅಲಿ ಖಾನ್ ಮತ್ತು ಕತ್ರಿನಾ ಕೈಫ್ ಒಟ್ಟಾಗಿ ನಟಿಸುತ್ತಿರುವ ಚಿತ್ರ ಏಕ್ತಾ ಟೈಗರ್ . ಇದನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚಿಗೆ ಸೈಫ್ ಮತ್ತು ಕತ್ರಿನಾ ಒಟ್ಟಾಗಿ ಒಂದು ರೆಸ್ಟೋರೆಂಟ್ ನಲ್ಲಿ ಡಿನ್ನರ್ಗೆ ಹೋಗಿದ್ದರಂತೆ.ಆ ಸಮಯದಲ್ಲಿ ಕತ್ರಿನಾ ಜೊತೆ ಸೈಫ್ ತುಂಬಾ ಕ್ಲೋಸ್ ಆಗಿದ್ದರಂತೆ, ತಾವಿಬ್ಬರು ಪಬ್ಲಿಕ್ ಪ್ಲೇಸ್ ನಲ್ಲಿ ಇದ್ದಿವಿ ಎನ್ನುವುದನ್ನು ಮರೆತು ಹೋಗಿ ಸಕತ್ ಎಂಜಾಯ್ ಮಾಡಿದರಂತೆ ಇವರಿಬ್ಬರು. ಈ ಸಂಗತಿ ಕರೀನಾ ಕಪೂರ್ ಗೆ ನಿಧಾನವಾಗಿ ತಿಳಿದು ಬಂದಿದೆ. ಕತ್ರಿನಾ ಕೈಫ್ ಜೊತೆ ಖಾಸಗಿಯಾಗಿ ಡಿನ್ನರ್ ಗೆ ಹೋಗಿದ್ದು ಕರೀನಾ ಪಿತ್ತ ನೆತ್ತಿಗೇರಿದೆ. ನೀವು ಮಾಡಿದ್ದು ಸರಿಯಲ್ಲ ಎಂದು ಗಂಡನ ಮೇಲೆ ಸಿಟ್ಟಾಗಿದ್ದಾಳೆ ಚೆಲುವೆ. ಅಲ್ಲದೆ ಕತ್ರಿನಾ ಮಾಡುತ್ತಿರುವ ಶೂಟಿಂಗ್ ಶೆಡ್ಯೂಲ್ ಗಳ ಸಮಯದ ಪಟ್ಟಿಯನ್ನು ನಿರ್ದೇಶಕ ಕಬೀರ್ ಖಾನ್ ಬಳಿ ತರಿಸಿತ್ತು ಕೊಂಡಿದ್ದಾಳಂತೆ. ಛೆ ಮದುವೆ ಆಗಿ ತಪ್ಪು ಮಾಡಿದೆ ಅಂತ ಸೈಫ್ ಬೇಜಾರಾಗಿದ್ದಾರಂತೆ !

Share this Story:

Follow Webdunia kannada