ಅಲ್ಲಾರಿ ನರೇಶರ ಲಡ್ಡು ಬಾಬು ಚಿತ್ರೀಕರಣದ ವೇಳೆ ಪ್ರಖ್ಯಾತ ನಟಿ ಭೂಮಿಕಾ ಚಾವ್ಲಾ ಕೆಲವು ತಿಂಗಳ ಗರ್ಭಿಣಿಯಾಗಿದ್ದರು ಎಂದು ತುಂಬಾ ಜನರಿಗೆ ತಿಳಿದಿರಲಾರದು. ಇತ್ತೀಚಿಗೆ ತಾನು ಗಂಡು ಮಗುವನ್ನು ಹೆತ್ತಿದ್ದೇನೆ ಎಂಬುದನ್ನು ಭೂಮಿಕಾ ಬಹಿರಂಗ ಪಡಿಸಿದ್ದಾರೆ.
PTI
ಮಗುವನ್ನು ಪ್ರಥಮ ಸಲ ನೋಡಿದಾಗ ನಿಮ್ಮ ಅನುಭವ ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು "ನಾನು ತುಂಬ ಉತ್ಸುಕಳಾಗಿದ್ದೆ ಮತ್ತು ಭಾವನೆಗಳ ಮುದ್ದೆಯಾಗಿದ್ದೆ. ನನಗೆ ಮತ್ತು ಭರತ ಇಬ್ಬರಿಗೂ ಸಹ ಆನಂದಾಶ್ರುಗಳು ತುಂಬಿ ಬಂದವು. ಅದು ಅಮಿತಾನಂದದ ಕ್ಷಣವಾಗಿತ್ತು" ಎಂದರು.