Select Your Language

Notifications

webdunia
webdunia
webdunia
webdunia

ಬಿಗ್ಬಾಸ್ 7ರಲ್ಲಿ ಶ್ರೀಶಾಂತ್. ಪೂನಂಪಾಂಡೆ?

ಬಿಗ್ಬಾಸ್ 7
ಮುಂಬೈ , ಸೋಮವಾರ, 31 ಮಾರ್ಚ್ 2014 (14:58 IST)
ಹಿಂದಿಯ ಬಿಗ್ಬಾಸ್ 7ಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಆ ಕುರಿತಾದ ಗುಸುಗುಸು ಸುದ್ದಿಗಳೂ ಹೆಚ್ಚಿವೆ. ಸಲ್ಲೂ ಸಂಭಾವನೆ 130ರ ಕೋಟಿ ಗಡಿ ದಾಟಿದೆಯಂತೆ ಎಂಬ ಸುದ್ದಿ ಓದಿ ಬೆರಗಾದವರಿಗೆ ಇಲ್ಲಿ ಮತ್ತೊಂದಷ್ಟು ಸಿಹಿ ಸಂಗತಿಗಳಿವೆ. ಆರನೇ ಸೀಸನ್ನಲ್ಲಿ ಅಲಗ್ ಛೇ ಎಂದು ಎಲ್ಲರನ್ನು ಮೋಡಿ ಮಾಡಿದ್ದ ಸಲ್ಮಾನ್ ಈ ಬಾರಿ ಡಬ್ಬಲ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂತಸ ನೀಡಿದೆಯಂತೆ.

ಬಿಗ್ಬಾಸ್ ಮನೆಯಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಿದವರು, ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡಿದವರು, ಗ್ಲಾಮರ್ ಜತೆಗೆ ನಂಟಿರುವವರು ಇಲ್ಲವೇ ತಲೆಹರಟೆ ಮಾಡುವ ವ್ಯಕ್ತಿತ್ವದವರು ಇರುವುದು ಸಾಮಾನ್ಯ. ಈ ಬಾರಿ ಮನೆಯಲ್ಲಿ ಯಾರು ಯಾರು ಇರುತ್ತಾರೆ ಎಂಬ ಪ್ರಶ್ನೆಗೆ ಕೊಂಚ ಮಟ್ಟಿನ ಉತ್ತರವೂ ಸಿಕ್ಕಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದಕ್ಕೆ ಕಾರ್ಯಕ್ರಮ ಆರಂಭವಾಗುವವರೆಗೆ ಕಾಯಲೇ ಬೇಕು.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಒಬ್ಬ ಕ್ರಿಕೆಟರ್ ಬಿಗ್ಬಾಸ್ ಮನೆಯಲ್ಲಿ ಇರುತ್ತಾರೆ. ಹರ್ಭಜನ್, ಯುವರಾಜ್ ಇಲ್ಲವೇ ಶ್ರೀಶಾಂತ್ ಈ ಮೂವರ ಪೈಕಿ ಒಬ್ಬರು ಈಬಾರಿ ಪಾಲ್ಗೊಳ್ಳುವುದು ಖಚಿತವಂತೆ. ಇತ್ತೀಚೆಗಷ್ಟೇ ನಶಾ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟಿರುವ ನಟಿ ಪೂನಂ ಪಾಂಡೆ ತಮ್ಮ ಚಿತ್ರಜೀವನಕ್ಕೆ ಹೊಸ ಆಯಾಮ ಸಿಗಲೆಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರಂತೆ.

ಉಳಿದಂತೆ, ಮನೀಶಾ ಕೊಯಿರಾಲಾ, ಧರ್ಮೇಂದ್ರ, ಶೆರ್ಲಿನ್ ಚೋಪ್ರಾ, ಏಕ್ತಾ ಕಪೂರ್, ಫರ್ಹಾ ಖಾನ್ ಪತಿ ಶಿರೀಶ್ ಕುಂದರ್ ಮೊದಲಾದವರ ಹೆಸರು ಕೇಳಿಬಂದಿದೆ.

Share this Story:

Follow Webdunia kannada