Select Your Language

Notifications

webdunia
webdunia
webdunia
webdunia

ಬಾಹುಬಲಿಯತ್ತ ಮಾತ್ರ ನನ್ನ ಚಿತ್ತ- ರಾಜಮೌಳಿ

ರಾಜಮೌಳಿ
, ಗುರುವಾರ, 27 ಮಾರ್ಚ್ 2014 (09:20 IST)
PR
ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ. ಆ ಚಿತ್ರದ ಬಗ್ಗೆ ಅನೇಕ ಕಲ್ಪನೆಗಳಿವೆ ಭಾರತೀಯ ಚಿತ್ರರಂಗಕ್ಕೆ. ಮುಖ್ಯವಾಗಿ ರಾಜಮೌಳಿ ಆ ಚಿತ್ರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ ಎಂದೇ ಹೇಳ ಬಹುದು. ಆದರೆ ಏತನ್ಮಧ್ಯೆ ಅವರು ಬೇರೆ ಪ್ರಾಜೆಕ್ಟ್ ಕೈಗೆ ಎತ್ತಿಕೊಂಡಿದ್ದಾರೆ.

ಅದರಲ್ಲಿ ನಾಯಕರಾಗಿದ್ದಾರೆ ಅಲ್ಲು ಅರ್ಜುನ್ ಎನ್ನುವ ಕಲ್ಪನಾ ಕಥೆಗಳು ಹರಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅವರು ಅಂತಹ ಯಾವುದೇ ಯೋಚನೆ ಮತ್ತು ಯೋಜನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನನಗೆ ಬನ್ನಿ ( ಅಲ್ಲು ಅರ್ಜುನ್ ) ಜೊತೆ ಕೆಲಸ ಮಾಡಲು ಸಿಕ್ಕಾಪಟ್ಟೆ ಇಷ್ಟ ಇದೆ. ಆದರೆ ಸದ್ಯಕ್ಕೆ ಅವರ ಜೊತೆ ಕೆಲಸ ಮಾಡುವುದಕ್ಕೆ ಆಗದಷ್ಟು ಕೆಲವಿದೆ. ಜೊತೆಗೆ ಅದರ ಬಗ್ಗೆ ಯೋಜಿಜನೆ ಮಾಡಿಲ್ಲ - ಯೋಚಿಸಿಲ್ಲ.

webdunia
PR
ಬಾಹುಬಲಿ ಪೂರ್ಣ ಆಗುವವರೆಗೂ ಬೇರೆ ಯಾವುದೇ ಹೊಸ ಪ್ರಾಜೆಕ್ಟ್ ಕಡೆಗೆ ಗಮನ ಹರಿಸಲಾರೆ ಎಂದು ತಮ್ಮ ಮನದ ಮಾತನ್ನು ಟ್ವೀಟ್ ಮಾಡಿ ಹೇಳಿದ್ದಾರೆ ಮಿ. ಮೌಳಿ.

ಬಾಹುಬಲಿ ಚಿತ್ರವೂ 2015ರಲ್ಲಿ ಬಿಡುಗಡೆ ಆಗಲಿದ್ದು , ಇದರಲ್ಲಿ ರಾಣ ದಗ್ಗು ಬಾಟಿ, ಪ್ರಭಾಸ್ ವರ್ಮ, ಅನುಷ್ಕಾ ಶೆಟ್ಟಿ, ತಮನ್ನ ಭಾಟಿಯ, ಸತ್ಯರಾಜ್ ಮತ್ತು ರಮ್ಯ ಕೃಷ್ಣನ್ ಮುಖ್ಯ ಪಾತ್ರ ವರ್ಗದಲ್ಲಿ ಇದ್ದಾರೆ. ಈ ಚಿತ್ರವನ್ನು ಶೋಭಾ ಯಾರ್ಲ ಗುಡ್ಡ, ಪ್ರಸಾದ್ ದೇವಿನೆನಿ ಮತ್ತು ಕೆ. ರಾಘವೇಂದ್ರ ಒಟ್ಟಾಗಿ ಸೇರಿ ನಿರ್ಮಿಸುತ್ತಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada