ಬಾಲಿವುಡ್ ಬಾದ್ಷಾ ಸಲ್ಮಾನ್ ಖಾನ್ ಆದ್ರೆ ಬೇಗಂ ಕತ್ರಿನಾ ಕೈಫ್ ಹೇಗೆ ಅಂದ್ರೆ !
, ಬುಧವಾರ, 22 ಜನವರಿ 2014 (09:22 IST)
ಬಾಲಿವುಡ್ ನಲ್ಲಿ ಹೆಚ್ಚಾಗಿ ಹಣ ಸಂಪಾದಿಸುವ ಜೋಡಿ ಯಾರು ಎನ್ನುವ ಪ್ರಶ್ನೆಗೆ ಸಂಬಂಧಪಟ್ಟಂತೆ ನಡೆಸಿದ ಸರ್ವೆಯಲ್ಲಿ ಕಂಡು ಬಂದ ಹೆಸರು ಎರಡು. ಅವುಗಳನ್ನು ಕಂಡಾಗ ಇಡಿ ಬಾಲಿವುಡ್ ಆಶ್ಚರ್ಯ ಚಕಿತ ಆಯ್ತಂತೆ. ಅತಿ ಹೆಚ್ಚು ಹಣ ಸಂಪಾದನೆ ಮಾಡುವವರು ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಂತೆ. ಇವರಿಬ್ಬರಲ್ಲಿ ಯಾರೊಬ್ಬರನ್ನು ಮಾತನಾಡಿಸಿದರು ಹಣ ಹೂಡಿಕೆ ಮಾಡುವವರ ಜೇಬು ಖಾಲಿ ಆಗಿ ಬಿಡುತ್ತದೆ. ಅಷ್ಟೊಂದು ಡಿಮ್ಯಾಂಡ್ ಮಾಡುತ್ತಾರೆ ಅವರು, ಇತ್ತೀಚಿಗೆ ಒಂದು ಪ್ರಸಿದ್ಧ ಮ್ಯಾಗಜಿನ್ ತನ್ನ ಪತ್ರಿಕೆಯ ಮುಖ ಪುಟಕ್ಕಾಗಿ ಕತ್ರಿನಾಳ ಫೋಟೋ ಹಾಕಿದರೆ ಚಂದ ಎಂದು ನಿಶ್ಚಯಿಸಿ ಆಕೆಯ ಫೋಟೋ ಹಾಕಲು ಆಕೆಯನ್ನು ಕೇಳ್ದಾಗ ಅದಕ್ಕೆಂದು ಅವಳು ಮಾಡಿದ ಡಿಮ್ಯಾಂಡು ಇಪ್ಪತ್ತೈದು ಲಕ್ಷ ರೂಪಾಯಿಗಳು . ಕತ್ರಿನಾಳಂತಹ ಹೀರೋಯಿನ್ ಬದಲು ಸನ್ನಿ ಇಲ್ಲವೇ ವೀಣಾ ಮಲ್ಲಿಕ್ ರಂತಹ ನಟಿಯರನ್ನು ಬಳಸಿ ಪತ್ರಿಕೆಗಾಗಿ ಎನ್ನುವ ಸಲಹೆ ಆ ಮ್ಯಾನೇಜ್ಮೆಂಟ್ ಕಮಿಟಿಯಿಂದ ಬಂತಂತೆ. ಆದರೆ ಕತ್ರಿನಾಳಂತಹ ಹೀರೋಯಿನ್ ಗಾಗಿ ಅಷ್ಟೊಂದು ಖರ್ಚು ಮಾಡಲೇ ಬೇಕು ಎನ್ನುವುದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಸಂಗತಿ. ಇದು ಕತ್ರಿನಾ ಮಾತಾದರೆ, ಈಗ ಸಲ್ಮಾನ್ ಖಾನ್ ಏನು ಮಾಡಿದರು ಅದು ಟ್ರೇನ್ ಸೆಟ್ಟರ್ ಆಗಿದೆ. ಆತನಿಗಾಗಿ ಎಷ್ಟು ಹಣ ಬೇಕಾದರೂ ಸರಿಯೇ ಖರ್ಚು ಮಾಡಲು ಕಂಪನಿಗಳು ಸಿದ್ಧ ಆಗಿದೆಯಂತೆ.