Select Your Language

Notifications

webdunia
webdunia
webdunia
webdunia

ಬಾಲಿವುಡ್ ನಿರ್ದೇಶಕ ಸುಭಾಷ್ ಕಪೂರ್‌ಗೆ ನಟಿ ಗೀತಿಕಾ ಕಪಾಳಮೋಕ್ಷ

ಬಾಲಿವುಡ್ ನಿರ್ದೇಶಕ ಸುಭಾಷ್ ಕಪೂರ್‌ಗೆ ನಟಿ ಗೀತಿಕಾ ಕಪಾಳಮೋಕ್ಷ
, ಗುರುವಾರ, 20 ಫೆಬ್ರವರಿ 2014 (12:15 IST)
PR
PR
ಜಾಲಿ ಎಲ್‌ಎಲ್‌ಬಿ ಚಿತ್ರದ ನಿರ್ದೇಶಕ ಸುಭಾಷ್ ಕಪೂರ್ ಅವರಿಗೆ ನಟಿ ಗೀತಿಕಾ ತ್ಯಾಗಿ ಕಪಾಳಮೋಕ್ಷ ಮಾಡಿದ ದೃಶ್ಯ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ. 30 ನಿಮಿಷಗಳ ವಿಡಿಯೋವನ್ನು ಗೀತಿಕಾ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಬಾಲಿವುಡ್ ನಿರ್ದೇಶಕನಿಂದ ಲೈಂಗಿಕ ಕಿರುಕುಳ ಆರೋಪವನ್ನು ನಟಿ ಗೀತಿಕಾ ಮಾಡಿದ್ದಾಳೆ. ಗೀತಿಕಾಗೆ ಅವಕಾಶ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದಾಗ ಗೀತಿಕಾ ಕಪಾಳಮೋಕ್ಷ ಮಾಡಿದಳು ಮತ್ತು ಗೀತಿಕಾ ರೋಧಿಸುತ್ತಿದ್ದ ದೃಶ್ಯ ಯುಟ್ಯೂಬ್‌ನಲ್ಲಿ ಪ್ರಸಾರವಾಗಿದೆ.

ಆದರೆ ಘಟನೆ ನಡೆದು ಸುಮಾರು ಒಂದೂವರೆ ವರ್ಷಗಳ ನಂತರ ನಟಿ ಇದನ್ನು ಬಹಿರಂಗ ಮಾಡಿದ್ದು ಏಕೆನ್ನುವುದು ಯಕ್ಷಪ್ರಶ್ನೆಯಾಗಿದೆ. ಬಾಲಿವುಡ್‌ನಲ್ಲಿ ತಮ್ಮದೇ ಆದ ಇಮೇಜ್ ಸೃಷ್ಟಿಸಿಕೊಂಡಿದ್ದ ಸುಭಾಷ್ ಕಪೂರ್‌ ವರ್ಚಸ್ಸಿಗೆ ಈ ಆರೋಪದಿಂದ ತೀವ್ರ ಧಕ್ಕೆಯಾಗಿದೆ. ಈ ಕುರಿತು ತಾವು ಕಾನೂನಿನ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada