ಬಾಕ್ಸಾಫೀಸಲ್ಲಿ ಜೈ ಹೊ ಎಂದಿದೆ ಸಲ್ಮಾನ್ ಜೈ ಹೊ !
, ಬುಧವಾರ, 29 ಜನವರಿ 2014 (10:03 IST)
ಇಲ್ಲಿವರೆಗೂ ಜೈ ಹೊ ಎಪ್ಪತ್ತು ಕೋಟಿ ರೂಗಳನ್ನು ಗಳಿಕೆ ಮಾಡಿದೆ. ತೆಲುಗು ಚಿತ್ರ ಸ್ಟಾಲಿನ್ ರೀಮೇಕ್ ಆಗಿರುವ ಈ ಚಿತ್ರವೂ ಕಳೆದ ವಾರ ತೆರೆ ಏರಿತು. ಆರಂಭದಲ್ಲಿ ಗಳಿಕೆ ಪ್ರಮಾಣ ಕಡಿಮೆ ಅನ್ನಿಸಿದರು, ಆದರೆ ಈಗ ಅದರ ಓಟ ಹೆಚ್ಚಾಗಿದೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಅದು ಸುಮಾರು ಎಪ್ಪತ್ತು ಕೋಟಿಗಳಷ್ಟು ಗಳಿಕೆ ಮಾಡಿ ಬಾಕ್ಸಾಫೀಸ್ ಬಯಸಿದಷ್ಟೆ ಇದೆ ಎನ್ನುವ ಸಂಗತಿಯನ್ನು ತಿಳಿಸಿದೆ ಮಾಹಿತಿ.
ಈ ಗಳಿಕೆ ನೋಡಿದರೆ ಜೈ ಹೊ ಖಂಡಿತವಾಗಿ ಇನ್ನು ಕೋಟಿ ರೂಪಾಯಿಗಳನ್ನು ರೀಚ್ ಮಾಡುತ್ತದೆ ಎನ್ನುವ ಮಾಹಿತಿ ಹರಡಿದೆ. ಮೊದಲ ದಿನ ಹನಿನೆಳು ಕೋಟಿ ರೂಗಳನ್ನು ಗಳಿಕೆ ಮಾಡಿದ್ದ ಆ ಚಿತ್ರ ನಾಲ್ಕು ದಿನಗಳಲ್ಲಿ ಎಪ್ಪತ್ತು ಕೋಟಿಯ ಬಳಿಗೆ ಬಂದಿತ್ತು. ಆದರೆ ವಾರದಲ್ಲಿ ಅದರ ಕಲೆಕ್ಷನ್ ಸುಮಾರು ನೂರಾ ಇಪ್ಪತ್ತು ಕೋಟಿಯಬಾಗಿಲು ತಟ್ಟಿದೆ ಎನ್ನುತ್ತಿದೆ ಬಾಕ್ಸಾಫೀಸ್ ಮಾಹಿತಿ ಕೇಂದ್ರ. ಜೈ ಹೊ ಗಳಿಕೆ ವಿವರ ಇಂತಿದೆ. ಮೊದಲ ದಿನ - 17 ಕೋಟಿ ಗಳು, ಎರಡನೇ ದಿನ- 18 ಕೋಟಿಗಳು ,ಮೂರನೇ ದಿನ -20 ಕೋಟಿಗಳು ,ನಾಲ್ಕನೇ ದಿನ -15 ಕೋಟಿ ರೂಪಾಯಿಗಳು. ಒಟ್ಟು ನಾಲ್ಕು ದಿನಗಳ ಗಳಿಕೆ ಎಪ್ಪತ್ತು ಕೋಟಿ ರೂಪಾಯಿಗಳು .