Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾರಂಗಕ್ಕೆ ಗುಡ್ ಬೈ

ಪವನ್ ಕಲ್ಯಾಣ್
, ಶುಕ್ರವಾರ, 14 ಮಾರ್ಚ್ 2014 (10:09 IST)
PR
ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊಸ ಪಕ್ಷವನ್ನು ನಿರ್ಮಿಸಿ ತಾವು ರಾಜಕೀಯದತ್ತ ನಡೆದಿದ್ದೇವೆ ಎಂದು ಅವರ ಅಭಿಮಾನಿಗಳಿಗೆ ಸ್ಪಷ್ಟ ಮಾಡಿದ್ದಾರೆ. ಅವರ ಈ ನಿರ್ಧಾರದಿಂದ ಅಭಿಮಾನಿಗಳ ಜೊತೆಗೆ ಚಿತ್ರ ನಿರ್ಮಾಪಕರುಗಳ ಎದೆ ಒಡೆದೆ ಹೋಗಿದೆ ಅಂತ ಹೇಳ ಬಹುದಾಗಿದೆ. ಪಾಲಿಟಿಕ್ಸ್ ಮತ್ತು ಸಿನಿಮಾರಂಗ ಎರಡರಲ್ಲೂ ತಮ್ಮನ್ನು ತೊಡಗಿಸಿ ಕೊಳ್ಳಲು ಸಾಧ್ಯವೇ ಪವನ್ ಎನ್ನುತ್ತಿದೆ ಅವರ ಆಪ್ತ ವಲಯ. ಅದು ಕಷ್ಟದ ಕೆಲಸ ಎನ್ನುವುದು ಎಲ್ಲರಿಗು ತಿಳಿದ ಸಂಗತಿ ಆಗಿದೆ.

ಪವನ್ ಅವರ ಕೈಲಿ ಈಗ ಗಬ್ಬರ್ ಸಿಂಗ್ 2 ಮತ್ತು ವೆಂಕಟೇಶ್ ಜೊತೆ ಮಲ್ಟಿ ಸ್ಟಾರರ್ ಚಿತ್ರಗಳಿವೆ. ಆದರೆ ಎರಡರಲ್ಲಿ ಮೊದಲುಗಬ್ಬರ್ ಸಿಂಗ್ 2 ಚಿತ್ರದ ಕೆಲಸ ಆರಂಭ ಆಗ ಬೇಕಿದೆ. ಅದು ಅನೇಕ ಕಾರಣಗಳಿಂದ ಮುಂದೂಡುತ್ತಾ ಬಂದಿದೆ. ಅದೇ ರೀತಿ ಹಿಂದಿಯ ಓ ಮೈ ಗಾಡ್ ಚಿತ್ರದಲ್ಲಿ ವೆಂಕಟೇಶ್ ಜೊತೆಯಲ್ಲಿ ನಟಿಸ ಬೇಕಾಗಿದೆ ಅದು ಸಹ ಈಗ ಆರಂಭ ಆಗುವ ಸಾಧ್ಯತೆಗಳು ತುಂಬಾ ಕಡಿಮೆ.ಒಟ್ಟಾರೆ ಈ ಎರಡು ಪ್ರಾಜೆಕ್ಟ್ ಗಳು ಮುಂದುವರೆಯುವುದಿರಲಿ ಆರಂಭ ಆಗುವ ಸಾಧ್ಯತೆ ತುಂಬಾ ಕಡಿಮೆ.

webdunia
PR
ಈಗ ವೆಂಕಟೇಶ್ ನಟಿಸುತ್ತಿರುವ ಚಿತ್ರದಲ್ಲಿ ಪವನ್ ಬದಲಾಗಿ ಬೇರೆಯ ನಟರನ್ನು ಆಯ್ಕೆ ಮಾಡುವ ಸಾಧ್ಯತೆ ಗಳು ಹೆಚ್ಚಾಗಿವೆ. ಗಬ್ಬರ್ ಸಿಂಗ್ 2 ಚಿತ್ರದ ಮುಹೂರ್ತ ಆಗಿ ಶೂಟಿಂಗ್ ಗೆ ಸಿದ್ಧ ಆಗುವಷ್ಟು ಮುಂದಡಿ ಇಟ್ಟಿದ್ದರು ಸಹ ರಾಜಕೀಯದ ಕಾರಣದಿಂದ ಪವನ್ ಅದರತ್ತ ಗಮನ ನೀಡಿಲ್ಲ. ಅಕಸ್ಮಾತ್ ಪವನ್ ಗೆ ರಾಜಕೀಯದಲ್ಲಿ ಯಶಸ್ಸು ಸಿಕ್ಕರೆ ಚಿತ್ರರಂಗದ ಕಡೆಗೆ ಅವರು ಖಂಡಿತ ಬರಲ್ಲ ಅನ್ನುವುದು ಶತ ಸಿದ್ಧ.

ಒಂದು ವೇಳೆ ನಿರೀಕ್ಷಿತ ಗೆಲುವು ದೊರಕದೆ ಹೋದಲ್ಲಿ ಜನ ಸೇವೆ ಮಾಡುತ್ತಾ ಬದುಕನ್ನು ಕಲಿಯುತ್ತೇನೆ ಎಂದಿದ್ದಾರಂತೆ ಪವನ್. ಒಟ್ಟಾರೆ ಸಿನಿಮಾದಿಂದ ಅವರು ಡೋರ್ ಇರುವತ್ತ ಗಮನ ನೆಟ್ಟಿದ್ದಾರೆ ಅನ್ನುವುದು ಸದ್ಯದ ಮಾಹಿತಿ. ಏನೇ ಆದರು ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಮನಸ್ಥಿತಿ ಅವರದ್ದಾಗಿದೆ ಎನ್ನುವುದು ಸದ್ಯದ ಸುದ್ದಿ..!

Share this Story:

Follow Webdunia kannada