ನೀವು ಧರಿಸುವ ಉಡುಪಿಗಿಂತ ನಿಮ್ಮ ವರ್ತನೆಯಿಂದ ಸ್ಟೈಲಿಶ್ ಆಗಿರಿ -ಕರೀನಾ ಕಪೂರ್
, ಶುಕ್ರವಾರ, 14 ಫೆಬ್ರವರಿ 2014 (09:47 IST)
ಅದನ್ನು ಬಳಸಿ , ಇದನ್ನು ಉಪಯೋಗಿಸಿ ಎಂದೆಲ್ಲ ಹೇಳಿ ರಾಶಿ ರಾಶಿ ದುಡ್ಡು ಮಾಡುವ ನಟಿ ಕರೀನ ಕಪೂರ್ ಮಾತ್ರ ತಮ್ಮ ಚರ್ಮಕ್ಕೆ ಏನನ್ನು ಹಚ್ಚುವುದಿಲ್ಲವಂತೆ , ಅದರಲ್ಲೂ ಕೆಮಿಕಲ್ ರಹಿತ ಮಾಯಿಶ್ಚರಿಸರ್ ಗಳ ತಂಟೆಗೆ ಆಕೆ ಹೋಗುವುದೇ ಇಲ್ಲವಂತೆ. ನನಗೆ ಇರೋದು ಡ್ರೈ ಸ್ಕಿನ್.ಆದ್ದರಿಂದ ನಾನು ಮುಖಕ್ಕೆ ರಾಸಾಯನಿಕ ವಸ್ತುಗಳ ಯಾವುದೇ ಉತ್ಪನ್ನಗಳನ್ನು ಬಳಸುವುದಿಲ್ಲ ಎನ್ನುವ ಮಾತನ್ನು ಆಕೆ ಹೇಳಿದ್ದಾರೆ. ಮುವ್ವತ್ಮೂರರ ಹರೆಯದ ಈ ಚೆಲುವೆ ಪ್ರತಿದಿನ ಎಣ್ಣೆಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಾಳಂತೆ. ಮುಖ, ಕೂದಲು , ಇಡಿ ದೇಹಕ್ಕೆ ಎಣ್ಣೆಯ ಮಸಾಜ್ ಕ್ರಿಯೆ ಸಾಮಾನ್ಯವಂತೆ. ಇದು ದೇಹಕ್ಕೆ ಆರಾಮ ಮತ್ತು ಆನದ ನೀಡುತ್ತದೆ ಎನ್ನುವ ಮಾತನ್ನು ಆಕೆ ಹೇಳಿದ್ದಾರೆ. ಯಾವುದೇ ಬಟ್ಟೆಗಳು ನನಗೆ ಹೆಚ್ಚಿನ ಇಂಪ್ರೆಸ್ ಮಾಡಿಲ್ಲ, ನನಗೆ ಟ್ರಾಕ್ - ಪ್ಯಾಂಟ್ ನಲ್ಲಿ ಇರೋದಕ್ಕೆ ಹೆಚ್ಚು ಆರಾಮದಾಯಕ. ನಾನು ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಪೈಆಮ್ ಕುರ್ತಾ ಇಲ್ಲವೇ ಜೀನ್ಸ್ ತೀ ಶರತ್ ನಲ್ಲಿ ಇರೋಕೆ ಆದ್ಯತೆ ನೀಡುತ್ತೇನೆ.ನಿಮ್ಮ ಸ್ಟೈಲ್ ನೀವು ಧರಿಸುವ ಬಟ್ಟೆಯಿಂದ ಬರುವಂತಹದ್ದಲ್ಲ, ನಿಮ್ಮ ವರ್ತನೆಯಿಂದ ಕಾಣ ಸಿಗುತ್ತದೆ ಎನ್ನುವ ಕಿವಿ ಮಾತು ಹೇಳಿದ್ದರೆ ಕರೀನಾ!