Select Your Language

Notifications

webdunia
webdunia
webdunia
webdunia

ನಾನು ದೀಪಿಕಾ ಜೊತೆ ನಟಿಸೋದಾ.. ಆಗಲ್ಲ .. ಖಂಡಿತಾ ಆಗಲ್ಲ ಅಂದ್ರಲ್ಲ ಸಲ್ಮಾನ್

ನಾನು ದೀಪಿಕಾ ಜೊತೆ ನಟಿಸೋದಾ.. ಆಗಲ್ಲ .. ಖಂಡಿತಾ ಆಗಲ್ಲ ಅಂದ್ರಲ್ಲ ಸಲ್ಮಾನ್
, ಸೋಮವಾರ, 24 ಫೆಬ್ರವರಿ 2014 (11:19 IST)
PR
ಬಾಲಿವುಡ್ ಯಶಸ್ವಿ ನಟಿ ದೀಪಿಕಾ ಪಡುಕೋಣೆ ಅಂದ್ರೆ ಎಂತೆಂತಹ ಹೀರೋಗಳು, ಸಿನಿಮಾ ನಿರ್ಮಾಪಕರು, ನಿರ್ದೇಶಕರು ಚಿತ್ರ ಮಾಡಲು ಮುಂದೆ ಬಂದಿದ್ದಾರೆ. ಸುಮಾರು ಐನೂರು ಕೋಟಿಗಳಷ್ಟು ಗಳಿಕೆಯನ್ನು ತನ್ನ ಚಿತ್ರಗಳಿಂದ ಮಾಡಿಕೊಟ್ಟಿರುವ ಈ ಚೆಲುವೆ ಅಂದ್ರೆ ಬಾಲಿವುಡ್ ಮಂದಿಯಲ್ಲಿ ಒಂದು ಬಗೆಯ ಆದರಾಭಿಮಾನ. ಆಕೆಯ ಲೆವೆಲ್ ಹೀಗಿರುವಾಗ, ತಾನು ಮಾತ್ರ ದೀಪಿಕಾ ಜೊತೆ ನಟಿಸಲ್ಲ ಎನ್ನುವ ಮಾತು ಹೇಳಿದ್ದಾರೆ ಇಲ್ಲಿನ ಸ್ಟಾರ್ ನಟ ಸಲ್ಮಾನ್ ಖಾನ್. ಈಕೆ ಜೊತೆ ನಟಿಸಲು ಹೀರೋಗಳು ಮನೆ ಮುಂದೆ ಕ್ಯೂ ನಿಂತಿರುವಾಗ ಇದೇನು ಸಲ್ಮಾನ್ ಕಥೆ ಹೀಗೆ ಎನ್ನುವ ಮಾತು ಎಲ್ಲರ ಬಾಯಲ್ಲೂ ಕುಣಿದಾಡುತ್ತಿದೆ.

ಸೂರಜ್ ಬರಜಾತ್ಯ ಚಿತ್ರದಲ್ಲಿ ನಟ ಸಲ್ಮಾನ್ ಇದ್ದಾರೆ. ಅವರ ಜೊತೆಗೆ ದೀಪಿಕಾಳನ್ನು ತರುವ ಯೋಜನೆ ಚಿತ್ರತಂಡದ್ದು. ಆದರೆ ಇದಕ್ಕೆ ಸಲ್ಮಾನ್ ಖಾನ್ ದೀಪಿಕಾ ಜೊತೆನಾ ನಾನು ನಟಿಸೋದು ನೋ ನೋ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada