ನಾನು ಎಲ್ಲರ ಜೊತೆ ಅದೇ ಫೋರ್ಸ್ ನಲ್ಲಿ ಕೆಲಸ ಮಾಡ್ತೀನಿ-ಪ್ರಿಯಾಂಕ ಚೋಪ್ರಾ
, ಭಾನುವಾರ, 12 ಜನವರಿ 2014 (17:02 IST)
ಬಾಲಿವುಡ್ ನಲ್ಲಿ ತೆರೆಯ ಮೇಲೆ ಅನೇಕ ಜೋಡಿಗಳು ರೋಮಾನ್ಸ್ ಮಾಡಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಅವರೆಷ್ಟು ಪಾಪ್ಯುಲರ್ ಅಂದ್ರೆ ಆ ಜೋಡಿ ಇರದ ಚಿತ್ರಗಳೆಂದರೆ ಜನರಿಗೆ ತುಂಬಾ ಬೋರ್. ಅಂತಹ ಜೋಡಿಗಳು ತಮಗೊಂದು ಸ್ಥಾನ ಗಳಿಸಿದ್ದಾರೆ ಬಾಲಿವುಡ್ ನಲ್ಲಿ ತಮಗೊಂದು ಹವಾ ಸೃಷ್ಟಿ ಮಾಡಿರುತ್ತಾರೆ ಇಂತಹ ಜೋಡಿಗಳು. ಈ ಪಟ್ಟಿಗೆ ಸೇರ್ಪಡೆ ಆಗಿರುವವರು ನರ್ಗೀಸ್- ರಾಜ್ ಕಪೂರ್, ರಾಜೇಶ್ ಖನ್ನ-ಡಿಂಪಲ್ ಕಪಾಡಿಯ , ಅಮಿತಾಬ್- ರೇಖಾ ಮುಖ್ಯರಾಗುತ್ತಾರೆ. ಅದೇ ರೀತಿ ಶಾರುಖ್ ಖಾನ್ ಮತ್ತು ಕಾಜೋಲ್ ಸಹ ಇಂತಹದ್ದೇ ಹವಾ ಸೃಷ್ಟಿ ಮಾಡಿದ ಜೋಡಿ. ಕಾಜೋಲ್ ಮದುವೆ ಆಗಿ ತನ್ನ ತಾರ ಬದುಕಿಗೆ ಹೆಚ್ಚಿನ ಗಮನ ನೀಡದೆ ಇದ್ದಾಗ ಶಾರುಖ್ ಜೊತೆಯಾದ ನಟಿ ಪ್ರಿಯಾಂಕ ಚೋಪ್ರ . ಈ ಜೋಡಿ ಡಾನ್ , ಡಾನ್ -2 ಚಿತ್ರಗಳಲ್ಲಿ ಮಾಡಿದ ಹಂಗಾಮ ಮರೆಯಲಾಗದ್ದು. ಇದರ ಬಗ್ಗೆ ಪ್ರಿಯಾಂಕ ಬಳಿ ಇತ್ತೀಚಿಗೆ ನಡೆ ಮಾಧ್ಯಮಗಳ ಸಭೆಯಲ್ಲಿ ಕೇಳಿದಾಗ ಈ ಮಾತನ್ನು ಪಿಂಕಿ ಅಲ್ಲೆಗಲೆದಳು. ತನ್ನ ಕೆಮಿಸ್ಟ್ರಿ ಒಬ್ಬರ ಜೊತೆಗೆ ಬಾನ್ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ, ನಾನು ಎಲ್ಲರ ಜೊತೆಯೂ ಅದೇ ಫೋರ್ಸ್ ನಲ್ಲಿ ನಟಿಸ ಬಲ್ಲೆ ಎಂದು ಹೇಳಿ ಮಾಧ್ಯಮಗಳ ಬಾಯಿ ಮುಚ್ಚಿದ್ದಾಳೆ. ಆದರು ಈ ಜೋಡಿ ಬಗ್ಗೆ ಬಾಲಿವುಡ್ ನಲ್ಲಿ ಗುಸು ಗುಸು ಪಿಸಿಪಿಸಿ ಇದ್ದೆ ಇದೆ.