ನಯನತಾರ ಮದುವೆ ಆಗೋ ಸುದ್ದಿ ನಿಜಾನಾ !
, ಸೋಮವಾರ, 31 ಮಾರ್ಚ್ 2014 (10:43 IST)
ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ನಯನತಾರ ಇತ್ತೀಚಿಗೆ ಸನ್ಯಾಸತ್ವ ಸ್ವೀಕರಿಸಿದ್ದಾರೆನೋ ಎನ್ನುವಂತಹ ಒಂದು ಸುದ್ದಿ ಹೇಳಿದ್ದೆವು.. ಈಗ ಈ ಸುಂದರಿ ಬಗ್ಗೆ ಮತ್ತೊಂದು ಸಂಗತಿ ಹೊರ ಬಂದಿದೆ.ಅಂದಂಗೆ ಈಕೆ ಪ್ರಭುದೇವ, ಶಿಂಬು ಮತ್ತು ರಾಣ ಇವರ ಜೊತೆ ಪ್ರೇಮದಾಟ ಆಡಿದ್ದಾ ಚೆಲುವೆ. ಅದರಲ್ಲೂ ಪ್ರಭುದೇವ ಜೊತೆ ಮದುವೆ ಆಗಿ ಹೋಗಿದೆ ಎನ್ನುವಷ್ಟು ಸುದ್ದಿ ಹರಡಿತ್ತು. ಆದರೆ ಅದ್ಯಾಕೋ ಈ ಸಂಬಂಧ ಹೆಚ್ಚು ದಿನ ಬಾಳಿಕೆ ಬರದ ಕಾರಣ, ಇಬ್ಬರು ಸೂಪ ಸ್ಟಾರ್ ರಜನಿಕಾಂತ್ ಅವರ ಮಧ್ಯಸ್ಥಿಕೆಯಲ್ಲಿ ಬೇರೆಬೇರೆಯಾದರು.
ಅದಾದ ಸ್ವಲ್ಪ ಕಾಲ ಆಕೆ ಸಿನಿಮಾದಿಂದ ಸ್ವಲ್ಪ ದೂರ ಸರಿದರು. ಇನ್ನೇನು ನಯನತಾರ ಸಿನಿಮಾಗಳಲ್ಲಿ ನಟಿಸುವುದೇ ಇಲ್ಲ ಎಂದು ತಿಳಿದಾಗ ಆಕೆ ಇದ್ದಕ್ಕಿದ್ದಂತೆ ಅತ್ಯಂತ ಮಾದಕ ರೂಪದ ಮುಖಾಂತರ ಜನರ ಮುಂದೆ ಬಂದು ಸೂಪರ್ ಹಿಟ್ ಚಿತ್ರಗಳನ್ನು ನೀಡಿ, ತಾವಿನ್ನು ಟಾಲಿವುಡ್ ಚಾಲ್ತಿ ನಟಿ ಎಂದು ತೋರಿಸಿಕೊಟ್ಟರು.ಈಗ ಹೇಳುವ ಸುದ್ದಿ ಏನು ಅಂದರೆ ನಯನತಾರ ಮದುವೆ ಆಗುತ್ತಿದ್ದಾರೆ.. ಇದೆಷ್ಟು ಸತ್ಯ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಇದ್ದರು, ಸದ್ಯಕ್ಕೆ ದಕ್ಷಿಣದ ಸಿನಿಮಾ ಟೌನ್ ಗಳಲ್ಲಿ ಮಾತ್ರ ಇದರ ಬಗ್ಗೆ ಸಣ್ಣ ಪ್ರಮಾಣದ ಸುದ್ದಿ ಹರಡಿದೆ. ಆಕೆ ಮದುವೆ ಆಗ್ತಾ ಇದ್ದಾರೆ. ಚೆನ್ನೈನ ಬ್ಯುಸಿನೆಸ್ ಮ್ಯಾನ್ ಜೊತೆಯಲ್ಲಿ ನಯನತಾರ ಬದುಕು ಹಂಚಿಕೊಳ್ಳಲು ನಿಶ್ಚಯ ಮಾಡಿದ್ದಾರೆ..ಹಾಗೆ ಆಗಲಿ ಎನ್ನುವ ಶುಭ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ..