ಜೂನಿಯರ್ ಎನ್ಟಿಆರ್ ತಂದೆಯಾದ ಸೂಪರ್ ಸ್ತಾರ್ ಯಾರೆಂದರೆ...
, ಶನಿವಾರ, 1 ಮಾರ್ಚ್ 2014 (11:04 IST)
ಜೂನಿಯರ್ ಎನ್ಟಿಆರ್ ಅವರ ಹೊಸ ಚಿತ್ರ ರಭಸದ ಚಿತ್ರೀಕರಣ ರಭಸದಿಂದ ಸಾಗಿದೆ ಎಂದೇ ಹೇಳ ಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅವರ ಚಿತ್ರಗಳು ಹೇಳಿಕೊಳ್ಳುವಂತಹ ಗೆಲುವನ್ನು ಪಡೆದಿಲ್ಲ. ಆದ್ದರಿಂದ ಜೂನಿಯರ್ ಎನ್ಟಿಆರ್ ಅವರು ತಮ್ಮ ಚಿತ್ರದ ಗೆಲುವಿಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ರಭಸ ಚಿತ್ರದ ಬಗ್ಗೆ ಅಪಾರ ಆಸೆ ಹೊಂದಿದ್ದಾರೆ ಜೂನಿಯರ್ .ಅಂದಂಗೆ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಂಗತಿ ಇದೆ. ಅದೇನೆಂದರೆ ಆ ಚಿತ್ರದಲ್ಲಿ ಜೂನಿಯರ್ ಅವರ ತಂದೆಯ ಪಾತ್ರದಲ್ಲಿ ಮಲೆಯಾಳಂ ಸ್ಟಾರ್ ನಟ ನಟಿಸುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಮೋಹನ್ ಲಾಲ್.