ಚೀನಿಯರಿಗೆ ಬಾಲಿವುಡ್ ಸಿನಿಮಾ ಅಂದ್ರೆ ಪಂಚ ಪ್ರಾಣವಂತೆ !
, ಮಂಗಳವಾರ, 21 ಜನವರಿ 2014 (12:08 IST)
ಚೈನಾ ದೇಶದ ಸೈನಿಕರು ನಮ್ಮ ದೇಶದ ಮೇಲೆ ಯುದ್ಧ ಸಾರುತ್ತಲೇ ಇದ್ದಾರೆ. ದ್ವೇಷ ಬೆಳಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಅಲ್ಲಿನ ಚಿತ್ರಪ್ರೇಮಿಗಳು ಮಾತ್ರ ಭಾರತದ ಚಿತ್ರದ ಬಗ್ಗೆ ವಿಶೇಷವಾದ ಪ್ರೀತಿಯನ್ನು ತೋರುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಚಿತ್ರಗಳು ಚೀನಾ ಭಾಷೆಗೆ ಡಬ್ ಆಗುತ್ತಿದೆ. ಅದು ಅಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಾಲಿವುಡ್ ಚಿತ್ರಗಳಲ್ಲಿರುವ ಪ್ರಣಯ, ಕಥೆ, ಹಾಸ್ಯ , ಭಾವನೆಗಳು ಅದು ಇದು ಎಲ್ಲವು ಅಲ್ಲಿನ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಿದೆಯಂತೆ. ಕೆಲವು ಬಾಲಿವುಡ್ ಹಾಡುಗಳನ್ನು ಹಾಡಲು ಚೀನಿಯರು ಪ್ರಯತ್ನ ಸಹ ಮಾಡುತ್ತಿದ್ದಾರಂತೆ. ಅದರಲ್ಲೂ ಅವರಿಗೆ ರಾಜ್ ಕುಮಾರ್ ಹಿರಾನಿ ಅವರ ತ್ರಿಈಡಿಯೆಟ್ ಚಿತ್ರವೂ ತುಂಬಾ ಮನ ಸೆಳೆದಿದೆಯಂತೆ. ಹೆಚ್ಚು ಬಾರಿ ಆ ಸಿನಿಮಾ ನೋಡಲು ಜನರು ಇಷ್ಟ ಪಡುತ್ತಿದ್ದಾರೆ ಎನ್ನುವುದೇ ಸದ್ಯದ ಸುದ್ದಿ.ಮುಖ್ಯವಾಗಿ ಅಮೀರ್ ಖಾನ್ ಚಿತ್ರಗಳಿಗೆ ಚೀನಾದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆಯಂತೆ. ಜಾನ್ ಅಬ್ರಹಂ ಧನ ಧನಾ ಧನ್ ಗೋಲ್ , ಸಂಜಯ್ ದತ್ ಮುನ್ನಾ ಭಾಯ್ ಎಂಬಿಬಿಎಸ್, ಸೇರಿದಂತೆ ಹಲವಾರು ಚಿತ್ರಗಳು ಚೀನಾದವರ ಪ್ರೀತಿ ಗಳಿಸಿದೆ.