Select Your Language

Notifications

webdunia
webdunia
webdunia
webdunia

ಚಿರು 150ನೇ ಚಿತ್ರ ಸದ್ಯದಲ್ಲೆ?

ಚಿರಂಜೀವಿ
, ಶುಕ್ರವಾರ, 10 ಜನವರಿ 2014 (10:58 IST)
PR
ಟಾಲಿವುಡ್ ನಲ್ಲಿ ಮೆಗಾ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು ಬೇರೆ ಯಾರೂ ಅಲ್ಲ ನಟ ಚಿರಂಜೀವಿ. ಅವರು ತೆಲುಗು ಚಿತ್ರರಸಿಕರ ಆರಾಧ್ಯ ದೈವ. ಅವರ ಬಗ್ಗೆ ತುಂಬಾ ಪ್ರೀತಿಯನ್ನು ಹೊಂದಿದ್ದಾರೆ. ತಮ್ಮ ತಾರ ಬದುಕಲ್ಲಿ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಸುಮಾರು 149 . ಅವರ ಅಭಿಮಾನಿಗಳು ತಮ್ಮ ನಾಯಕನ 150 ನೇ ಚಿತ್ರವನ್ನು ವೀಕ್ಷಿಸುವ ಆಶಯ ಹೊಂದಿದ್ದಾರೆ. ಆದರೇ ಅವರ ಆಸೆಯನ್ನು ಪೂರೈಸುವತ್ತ ಚಿರಂಜೀವಿ ಮನಸ್ಸು ಮಾಡಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ರಾಜಕೀಯ.

ಚಿರು ತಮ್ಮ ತಾರ ಬದುಕಿನಲ್ಲಿ ಉನ್ನತ ಮಟ್ಟದಲ್ಲಿ ಇರುವಾಗಲೇ ಅವರು ರಾಜಕೀಯದತ್ತ ತಮ್ಮ ಗಮನ ನೆಟ್ಟರು. ಅದರ ಪರಿಣಾಮ ಅವರಿಗೆ ಬಿಡುವಿಲ್ಲದಷ್ಟು ಒತ್ತಡ ಮತ್ತು ಕೆಲಸ. ತಮ್ಮ ಪ್ರೀತಿಯ ನಟ ಅಭಿನಯಿಸುತ್ತಾರೆ ಎನ್ನುವ ಆಸೆಯು ಹಾಗೆ ಉಳಿದಿತ್ತು. ಆದರೇ ಈಗ ಚಿರು ತಮ್ಮ 150 ನೇ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ. ಅಂದರೆ ಚಿರಂಜೀವಿ ಖಂಡಿತವಾಗಿ ಈ ಚಿತ್ರವನ್ನು ಅಸೆಂಬ್ಲಿ ಎಲೆಕ್ಷನ್ ಬಳಿಕ ಮಾಡೇ ತೀರುತ್ತಾರೆ ಎನ್ನುವ ಅಮಿತವಾದ ವಿಶ್ವಾಸ ಹೊಂದಿದ್ದಾರೆ ಟಾಲಿವುಡ್ ಮಂದಿ. ತನ್ನ ತಂದೆಯ 150ನೇ ಚಿತ್ರವನ್ನು ತುಂಬಾ ವೆಚ್ಚ ಮಾಡಿ ನಿರ್ಮಿಸುತ್ತಾರಂತೆ ರಾಮ್ ಚರಣ್. ಈ ಸಿನಿಮಾಗೆ ಸಂಬಂಧಪಟ್ಟ ಕೆಲಸಗಳು ಗುಟ್ಟಾಗಿ ನಡೆಯುತ್ತಲಿದೆ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ಇಂತಹ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ತುಂಬಾ ಖುಷಿ ಆಗಿದೆ.

Share this Story:

Follow Webdunia kannada