Select Your Language

Notifications

webdunia
webdunia
webdunia
webdunia

ಗುಲಾಬಿ ಗ್ಯಾಂಗ್ ಗಾಗಿ ಗ್ಲಾಮಿ ಮಾಧುರಿ ಕುಂಗ್ ಫು ಕಲಿಕೆ !

ಮಾಧುರಿ ದೀಕ್ಷಿತ್
, ಗುರುವಾರ, 30 ಜನವರಿ 2014 (09:31 IST)
PR
ಸಾಮಾನ್ಯವಾಗಿ ಸಿನಿ ಪ್ರಿಯರಿಗೆ ಮಾಧುರಿ ದೀಕ್ಷಿತ್ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಆಕೆಯ ನರ್ತನ. ಅದರಲ್ಲೂ 1990 ರ ದಶಕದಲ್ಲಿ ಆಕೆ ಬಾಲಿವುಡ್ ರಾಣಿ ಆಗಿದ್ದರು.

ಈಗ ಅವರು ಮದುವೆ ಆಗಿ ಎರಡು ಮಕ್ಕಳ ತಾಯಿ. ಆದರು ಅವರ ಹೊಳಪು ಮಾಸಿಲ್ಲ. ಅಂದಂಗೆ ಈಕೆ ತಮ್ಮ ಹೊಸ ಚಿತ್ರ ಗುಲಾಬಿ ಗ್ಯಾಂಗ್ ಗೆಂದು ಕತ್ತಿವರಸೆ ಮತ್ತು ಕುಂಗ್ ಫೂ ಗಳನ್ನು ಕಲಿತಿದ್ದಾರೆ.

webdunia
PR
ಈ ಮುಖಾಂತರ ಆ ಚಿತ್ರಕ್ಕೆ ವಿಶೇಷವಾದ ಗಮನ ನೀಡುತ್ತಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟ.
ಹಿಂದೆ ಈಕೆಯ ಜೊತೆ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ನಟಿ ಜೂಹಿ ಚಾವ್ಲ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಖಳನಟಿಯಾಗಿ ಈ ಚಿತ್ರದಲ್ಲಿ ಕಾಣ ಸಿಗುತ್ತಿದ್ದಾರೆ.

ಈ ಚಿತ್ರದ ವಿಶೇಷತೆಗಳಲ್ಲಿ ಇದು ಸಹ ಒಂದಾಗಿದೆ ಎಂದೇ ಹೇಳ ಬಹುದಾಗಿದೆ. ಬುಂದೇಲ್-ಖಂಡ್ ಪ್ರಾಂತ್ಯದಲ್ಲಿ ಇರುವ ಕೆಲವು ಮಂದಿ ಮಹಿಳೆಯರನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನೆಮಾ ಸಿದ್ಧ ಮಾಡಲಾಗಿದೆ.

Share this Story:

Follow Webdunia kannada