Select Your Language

Notifications

webdunia
webdunia
webdunia
webdunia

ಕೊಚ್ಚಾಡಿಯನ್ ಮಾಡಿರುವ ದಾಖಲೆ ವಿವರಗಳು ಇಲ್ಲಿವೆ!

ಕೊಚ್ಚಾಡಿಯನ್ ಮಾಡಿರುವ ದಾಖಲೆ ವಿವರಗಳು ಇಲ್ಲಿವೆ!
, ಶನಿವಾರ, 8 ಮಾರ್ಚ್ 2014 (10:15 IST)
PR
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಕೊಚ್ಚಾಡಿಯನ್ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸಂಚಲನ ಉಂಟು ಮಾಡಿದೆ. ಅತಿ ಹೆಚ್ಚಿನ ಬಜೆಟ್ ನಿಂದ ತೆರೆ ಕಾಣುತ್ತಿರುವ ಈ ಚಿತ್ರವನ್ನು ಪ್ರಮೋಟ್ ಮಾಡಲು ಸಹ ನಿರ್ಮಾಪಕರು 15 ಕೋಟಿ ರೂಪಾಯಿಗಷ್ಟು ಮೊತ್ತವನ್ನು ಖರ್ಚು ಮಾಡುತ್ತಿದ್ದಾರೆ ಎನ್ನುವುದು ಈಗ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದೆ.

ತಮಿಳು , ಹಿಂದಿ ಅಲ್ಲದೆ ಪಂಜಾಬಿ, ಬೋಜ್ಪುರಿ, ಮರಾಠಿ ಭಾಷೆಗಳಲ್ಲೂ ಬಿಡುಗಡೆ ಆಗುತ್ತಿರುವ ಕೊಚ್ಚಾದಿಯನ್ ಚಿತ್ರ ಭಾರತದ ಸಿನಿಮಾಗಳಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡುವುದಕ್ಕೆ ಪೂರಕವಾಗುವಂತೆ ಪ್ರಚಾರ ಮಾಡಲಾಗುತ್ತಿದೆ. ಚೆನ್ನೈ ಸಿಟಿಯಲ್ಲೇ ನಾಲ್ಕು ಸಾವಿರ ಹೋರ್ಡಿಂಗ್ ಗಳನ್ನೂ ಹಾಕುತ್ತಿದ್ದಾರೆ. ತೆಲುಗಿನಲ್ಲಿ ಈ ಚಿತ್ರ ವಿಕ್ರಮಸಿಂಹ ಹೆಸರಿನಿಂದ ಬಿಡುಗಡೆ ಆಗುತ್ತಿದೆ.

webdunia
PR
ಈ ಚಿತ್ರದ ಆಡಿಯೋ ಬಿಡುಗಡೆ ನಾಳೆ ಅಂದರೆ ಮಾರ್ಚ್ 9 ರಂದು ನೆರವೇರಲಿದೆ. ಇದು ಸತ್ಯಂ ಸಿನಿಮಾಸ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಬಂದು ಸೀಡಿ ಬಿಡುಗಡೆ ಮಾಡಲಿದ್ದಾರೆ. ಆದರೆ ಎಪ್ರಿಲ್ 11 ಕ್ಕೆ ಚಿತ್ರ ಬಿಡುಗಡೆ ಆಗುತ್ತದೆ ಎಂದು ನಂಬಿದ್ದ ಸಿನಿ ಪ್ರಿಯರು ಮೇ ತನಕ ಕಾಯ ಬೇಕಿದೆ.

ತಮಿಳು ನಾಡಿನಲ್ಲಿ ಎಪ್ರಿಲ್ 24 ರಂದು ಚುನಾವಣಾ ಇರುವುದರಿಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಈ ಚಿತ್ರವೂ ಒಟ್ಟು ೬ ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆಯಂತೆ. ಒಟ್ಟಾರೆ ಕೊಚ್ಚಾಡಿಯನ್ ಸಂಚಳನದಿಂದ ಭಾರತಿಯ ಚಿತ್ರರಂಗ ಹೊಸ ಅಧ್ಯಾಯ ತೆರೆಯುವುದರಲ್ಲಿ ಸಂಶಯವೇ ಇಲ್ಲ.

Share this Story:

Follow Webdunia kannada