ಕತ್ರಿನಾ ಕೈಫ್ ಗೆ ತಾಯಿ ಆಗುವ ಆಸೆಯಂತೆ!
, ಸೋಮವಾರ, 17 ಫೆಬ್ರವರಿ 2014 (10:47 IST)
ಯಾರಿಗೆ ಆಗಿರಲಿ ಮದುವೆ ಅನ್ನುವುದು ತುಂಬಾ ಮುಖ್ಯ. ಸಂಗಾತಿಯ ಅಗತ್ಯತೆ ಇದ್ದೆ ಇರುತ್ತದೆ ಪ್ರತಿಯೊಬ್ಬರಿಗೂ. ಆದರೆ ನಾನು ಸದ್ಯಕ್ಕೆ ಮದುವೆ ಆಗಲ್ಲ, ಕನಿಷ್ಠ ಹತ್ತು ವರ್ಷಗಳಾದರೂ ಆಗ ಬೇಕು ಮದುವೆ ಆಗಲು ಎಂದು ಹೇಳಿದ್ದಾರೆ . ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಈಕೆ ಉತ್ತರಿಸಿದ್ದು ಹೀಗೆ. ಅಲ್ಲದೆ, ನೀವು ರಣಬೀರ್ ಕಪೂರ್ ಜೊತೇನೆ ಮದುವೆ ಆಗ್ತೀರ ಎನ್ನುವ ಪ್ರಶ್ನೆಗೆ ಆಕೆ, ನಿಮಗೆ ನಾನು ಆತನ ಜೊತೆ ಮದುವೆ ಆಗ್ತೀನಿ ಎಂದು ಹೇಳಿದ್ದೆನಾ? ಅಥವ ರಣಬೀರ್ ಹೇಳಿದ್ದಾರಾ? ನೀವೆ ಯಾಕೆ ಏನೇನೋ ಊಹೆ ಮಾಡಿ ಕೊಳ್ತಿರಿ ಎನ್ನುವ ಉತ್ತರ ನೀಡಿದ್ದಾಳೆ ಆಕೆ.