Select Your Language

Notifications

webdunia
webdunia
webdunia
webdunia

ಐಶ್ ಜಾಗಕ್ಕೆ ಅಸಿನ್ ಬಂದಿದ್ದಾಳೆ.. ಇದು ಮಣಿರತ್ನಂ ಸಿನಿಮಾ ಕಥೆ!

ಐಶ್ವರ್ಯ ರೈ
, ಗುರುವಾರ, 20 ಮಾರ್ಚ್ 2014 (10:23 IST)
PR
ಕ್ಷಮಿಸಿ ನಾನು ನಟಿಸಲಾರೆ ಎಂದು ನಿರ್ದೇಶಕರಿಗೆ ಹೇಳಿದರು ಆ ನಟಿ.. ಯಾರು ಯಾರಿಗೆ ಹೇಳಿದರು ಎನ್ನುವ ಬಗ್ಗೆ ನಾವು ಹೇಳ್ತಿವಿ. ಎಲ್ಲರಿಗು ತಿಳಿದಿರುವಂತೆ ಈಗ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಪ್ರಾಜೆಕ್ಟ್ಗಳಲ್ಲಿ ಮಣಿರತ್ನಂ ಅವರ ಬಹು ನಿರೀಕ್ಷಿತ ಚಿತ್ರ. ಇದಿನ್ನೂ ಸೆಟ್ಟೆರಿಲ್ಲ.

ಆದರೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಅದರಲ್ಲಿ ನಾಗಾರ್ಜುನ್, ಮಹೇಶ್ ಬಾಬು ನಟಿಸುವುದು ಎಲ್ಲರಿಗು ಗೊತ್ತೇ ಇದೆ. ಈ ಮಲ್ಟಿ ಸ್ಟಾರರ್ ಚಿತ್ರದಲ್ಲಿ ನಾಗಾರ್ಜುನ ಅವರ ಜೋಡಿಯಾಗಿ ಐಶ್ವರ್ಯ ರಾಯ್ ಬಚ್ಚನ್ ನಟಿಸುವುದು ಬಹುತೇಕ ನಿಕ್ಕಿ ಆಗಿತ್ತು.

webdunia
PR
ಆದರೆ ಆ ಪಾತ್ರದಲ್ಲಿ ನಾನು ನಟಿಸಲಾರೆ ಎಂದು ಹೇಳಿ ಕ್ಷಮಿಸಿ ಎಂದು ಮಣಿರತ್ನಂ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಈ ಚೆಲುವೆ. ಅತ್ತೆ ಜಯಾ ಬಚ್ಚನ್ಅವರ ಸಲಹೆಯ ಅನ್ವಯ ತನ್ನ ಮಗಳು ಆರಾಧ್ಯಳ ಆರೈಕೆಗಾಗಿ ಈಕೆ ಸಿನಿಮಾದಲ್ಲಿ ನಟಿಸುವುದಕ್ಕೆ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ತಿದ್ದಾರೆ.

ಈಗ ಆ ಜಾಗಕ್ಕೆ ಅಸಿನ್ ಬಂದಿದ್ದಾಳೆ. ಶಿವಮಣಿ ಚಿತ್ರದಲ್ಲಿ ನಾಗಾರ್ಜುನ ಜೊತೆಯಲ್ಲಿ ಅಸಿನ್ ನಟಿಸಿದ್ದಳು.ಹತ್ತು ವರ್ಷದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ . ಮಹೇಶ್ ಬಾಬು ಜೊತೆಗೆ ಶ್ರುತಿ ಹಾಸನ್ ನಟಿಸುತ್ತಿದ್ದಾಳೆ. ಈ ಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಸದ್ಯದಲ್ಲೇ ಆರಂಭ ಆಗಲಿದೆ ಎನ್ನುವುದು ಸದ್ಯದ ಸುದ್ದಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada