Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಚುಂಬನದ ಹಾಟ್ ಚಿತ್ರ ಬಿಡುಗಡೆ

ಐಶ್ವರ್ಯಾ ರೈ ಚುಂಬನದ ಹಾಟ್ ಚಿತ್ರ ಬಿಡುಗಡೆ
ಮುಂಬೈ , ಬುಧವಾರ, 2 ಏಪ್ರಿಲ್ 2014 (15:02 IST)
ಬಾಲಿವುಡ್ನಲ್ಲಿ ಚುಂಬನ ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಸಾರ್ವಜನಿಕ ಸಭೆಯೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯನ್ನು ಬರಸೆಳೆದು ನಟ ರಿಚರ್ಡ್ ಗೇರ್ ಚುಂಬಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಒಂದು ಮಗುವಿನ ತಾಯಿಯಾಗಿರುವ ಐಶ್ವರ್ಯಾ ರೈ ಅವರ ಅಂತಹುದೇ ಒಂದು ಚಿತ್ರ ಬಿಡುಗಡೆಯಾಗಿದೆ. ಐಶ್ವರ್ಯಾ ರೈ ಅವರನ್ನು ಸಖತ್ ಹಾಟ್ ಆಗಿ ಚುಂಬಿಸಿರುವ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ.

ಈ ಚಿತ್ರದಲ್ಲಿರುವುದು ಹಾಲಿವುಡ್ ನಿರ್ದೇಶಕ ಜಿಮ್ ಸಂಜೀರೋ. ಐಶ್ವರ್ಯಾ ರೈ ರಾಯಭಾರಿ ಆಗಿರುವ ಲೋರಿಯಲ್ ಬ್ರ್ಯಾಂಡ್ ಜಾಹೀರಾತಿನ ನಿರ್ದೇಶಕ. ಈ ಜಾಹಿರಾತು ನಿರ್ದೇಶನದ ಸಂದರ್ಭ ಐಶ್ವರ್ಯಾ ರೈ ಅವರನ್ನು ಜಿಮ್ ಚುಂಬಿಸಿದ್ದಾರೆ. ಈ ಫೊಟೋವನ್ನು ಐಶ್ವರ್ಯಾ ರೈ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಚಿತ್ರ ಐಶ್ವರ್ಯಾ ಅವರ ಅಭಿಮಾನಿಗಳಿಗೆ ಭಾರೀ ಕಸಿವಿಸಿ ಉಂಟುಮಾಡಿದೆಯಂತೆ. ಐಶ್ವರ್ಯಾ ಸದ್ಯ ಸಂಜಯ್ ಲೀಲಾ ಬನ್ಸಾಲಿ ಅವರ ರಾಮ್ಲೀಲಾ ಚಿತ್ರದಲ್ಲಿ ಐಟಂ ಸಾಂಗ್ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದೀಗ ಸುಳ್ಳಾಗಿದೆ, ಈ ಸುದ್ದಿಯನ್ನು ಅವರ ಅಭಿಮಾನಿಗಳು ಒಪ್ಪಲು ಸುತಾರಾಂ ತಯಾರಿಲ್ಲವಂತೆ.

Share this Story:

Follow Webdunia kannada