Select Your Language

Notifications

webdunia
webdunia
webdunia
webdunia

ಈ ಸ್ಟಾರ್ ಹೀರೋ ನಟ ಗೋವಿಂದ ಅವರ ಬಿಗ್ ಫ್ಯಾನ್ ಅಂತೆ..!

ಗೋವಿಂದ
, ಮಂಗಳವಾರ, 18 ಫೆಬ್ರವರಿ 2014 (10:21 IST)
PR
ನಟ ಗೋವಿಂದಾ ಅವರಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ. ಅದಕ್ಕೆ ಕಾರಣಗಳು ಏನಿರ ಬಹುದು ಎನ್ನುವುದನ್ನು ನಿಮಗೆ ತಿಳಿಸುವ ಮುನ್ನ ಗೋವಿಂದ ಅವರ ಬಗ್ಗೆ ಸ್ವಲ್ಪ ನೆನಪಿಸಿ ಕೊಳ್ಳುವ. ಬಾಂಬೆಯ ಮಧ್ಯಮವರ್ಗದ ಗೋವಿಂದ ಪ್ರತಿಭೆಯಲ್ಲಿ ಮಾತ್ರ ಅಸಾಧಾರಣ. ಒಮ್ಮೆ ಹೀಗೆ ಗಣೇಶ ಉತ್ಸವದಲ್ಲಿ ಗೋವಿಂದ ಅವರ ಡ್ಯಾನ್ಸ್ ಕಂಡ ನಿರ್ದೇಶಕರಿಗೆ ಈ ಹುಡುಗನಿಗೊಂದು ಅವಕಾಶ ಕಲ್ಪಿಸುವ ಎಂದು ಬಾಲಿವುಡ್ ಬಾಗಿಲ ಬಳಿ ಕರೆದೊಯ್ದರು .

ಅಲ್ಲಿಂದ ತನ್ನ ನೃತ್ಯ ಹಾಗು ಅಭಿನಯದ ಮುಖಾಂತರ ಹಂತ ಹಂತವಾಗಿ ಮೇಲೆ ಬಂದ ಈ ಯುವಕ ಬಾಲಿವುಡ್ ಘಟಾನುಘಟಿಗಳ ಎದುರು ಗೆದ್ದರು. ಈ ಮೇರು ನಟ ಅನೇಕರ ಅನುಕರಣೀಯ ಪ್ರತಿಭೆ. ಅವರಲ್ಲಿ ಈಗಿನ ನಟ ರಣವೀರ್ ಸಿಂಗ್ ಸಹ ಸೇರ್ಪಡೆ ಆಗಿದ್ದಾರೆ.ಬಾಲಿವುಡ್ ನಲ್ಲಿ ಸ್ವಲ್ಪ ಹೆಚ್ಚಿನ ಜನಪ್ರಿಯತೆ ಪಡೆದಿರುವ ಈ ನಟ ಈಗ ಒಂದರ್ಥದಲ್ಲಿ ಓಡುತ್ತಿರುವ ಕುದುರೆ.

webdunia
PR
ಇಂತಹ ನಟ ತನ್ನ ಬಗ್ಗೆ ಅಭಿಮಾನ ಹೊಂದಿರುವುದು ಮತ್ತುಆತನ ಅನೇಕ ಚಿತ್ರಗಳಲ್ಲಿ ತನ್ನನ್ನು ಅನುಕರಿಸಿರುವ ಸಂಗಗತಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಸಾಲದು ಎಂದು ಥ್ಯಾಂಕ್ಸ್ ಹೇಳಿದ್ದಾರೆ ಈ ನಟ. ಅಂದಂಗೆ ಈ ಜೋಡಿ ಒಟ್ಟಾಗಿ ಶಾದ್ ಅಲಿ ನಿರ್ದೇಶನದ ಕಿಲ್ ದಿಲ್ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಗಲಿಯೊಂಕಿ ರಾಸ್ ಲೀಲಾ ರಾಮ್ ಲೀಲಾ ಚಿತ್ರದಲ್ಲಿ ಥೇಟ್ ಗೋವಿಂದ ಅವರಂತೆ ಡ್ಯಾನ್ಸ್ ಮಾಡಿ ರಣವೀರ್ ಎಲ್ಲರ ಗಮನ ಸೆಳೆದಿದ್ದರು.

ರಾಮಲೀಲಾ ಚಿತ್ರದಲ್ಲಿ ಇಷ್ಕಿಯ ದಿಷ್ಕಿಯ ಹಾದಲ್ಲೊಇ ಥೇಟ್ ನನ್ನ ಡ್ಯಾನ್ಸ್ ಶೈಲಿ ಅನುಕರಿಸಿದ್ದಾರೆ ರಣವೀರ್. ಅದನ್ನು ಖುಷಿ ಅನ್ನಿಸಿತು. ನನ್ನ ಡ್ಯಾನ್ಸ್ ಶೈಲಿ ಅನುಕರಿಸಿದ್ದಕ್ಕೆ ನಾನು ಕೃತಜ್ಞ ತೆಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಗೋವಿಂದ !

Share this Story:

Follow Webdunia kannada