ಇಲಿಯಾನ -ವರುಣ್ ಧವನ್ ಬೆಂಗಳೂರಿನ ನೈಟ್ ಕ್ಲಬ್ ನಲ್ಲಿ ಲವ್ವಿ ಡವ್ವಿಯಲ್ಲಿ ಬ್ಯುಸಿ ಆಗಿದ್ದು ಎಂದು ಗೊತ್ತೇ!
, ಬುಧವಾರ, 2 ಏಪ್ರಿಲ್ 2014 (10:14 IST)
ಅರ್ಧ ರಾತ್ರಿ ತನಕ ನಟಿ ಇಲಿಯಾನ ಬಾಲಿವುಡ್ ನಟನ ಜೊತೆ ಹಾಯಾಗಿ ಓಡಾಡಿಕೊಂಡಿರುವ ಬಗ್ಗೆ ಈಗ ಬಿ ಟೌನ್ ನಲ್ಲಿ ಸುದ್ದಿ ಆಗಿದೆ. ಇಲಿಯಾನ ಇತ್ತೀಚಿನವರೆಗೂ ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ತನ್ನನ್ನು ತೊಡಗಿಸಿಕೊಂಡ ನಟಿ ಅಲ್ಲದೆ ಕಾಲಿವುಡ್ ನಲ್ಲಿ ವಿಜಯ್ ಜೊತೆ ನನ್ಬೇನ್ ಅನ್ನುವ ಸಿನಿಮಾದಲ್ಲಿ ಸಹ ತನ್ನ ಪ್ರತಿಭೆ ತೋರಿದ್ದಳು.ಈಗ ಆಕೆ ಚಿತ್ತ ಬಾಲಿವುಡ್ ನಟ್ಟ. ಅದಕ್ಕೆ ಪೂರಕವಾದ ತಾಲೀಮು ಮಾಡಿ ಅಲ್ಲಿಗೆ ಹೊಂದುವಂತೆ ಸಿದ್ಧ ಆಗಿದ್ದಾಳೆ ಈ ಗೋವಾ ಚೆಲುವೆ.ಇಲಿಯಾನ ಈಗ ಹೆಚ್ಚಾಗಿ ವರುಣ್ ಧವನ್ ಜೊತೆಯ ಡೇಟಿಂಗ್ ನಲ್ಲಿ ಇರ್ತಾಳೆ. ಆಕೆ ಮತ್ತು ವರುಣ್ ನಟಿಸಿರುವ ಮೈ ತೇರಾ ಹೀರೋ ಚಿತ್ರದ ಪ್ರಮೋಶನ್ ಗೆಂದು ಆಕೆ ಬೆಂಗಳೂರಿಗೆ ಬಂದಿದ್ದಳು.
ಇಲ್ಲಿನ ಸ್ಟಾರ್ ಹೋಟಲೊಂದರಲ್ಲಿ ಉಳಿದಿದ್ದ ಈ ಚೆಲುವೆ ಜೊತೆಯಲ್ಲಿ ವರುಣ್ ಧವನ್ ಸಹ ಇದ್ದುದ್ದು ಎಲ್ಲರ ಗಮನ ಸೆಳೆದಿದೆ. ಆಟ ಆ ಚಿತ್ರದ ಹೀರೋ ಅಲ್ವೇ ತಪ್ಪೇನು ಎಂದು ಕೇಳುವುದು ಸಹಜ! ಆದರೆ ಚಿತ್ರದ ಪ್ರಮೋಶನ್ ಬೆಳಿಗ್ಗೆ, ಮಧ್ಯಾನ್ಹ ಇಲ್ಲವೆ ಸಂಜೆ ಆಗುತ್ತೆ.ಆದರೆ ಮಧ್ಯರಾತ್ರಿಯಲ್ಲಿ ಇವರಿಬ್ಬರಿಗೇನು ಕೆಲಸ ಎನ್ನುವ ಸುದ್ದಿ ಹರಡಿದೆ. ಚಿತ್ರದ ಪ್ರಚಾರ ಪೂರ್ಣ ಆದ ಬಳಿಕ ಅವರಿಬ್ಬರೂ ನೈಟ್ ಕ್ಲಬ್ ಗೆ ಹೊರಟರಂತೆ. ಅಲ್ಲಿ ಅರ್ಧ ರಾತ್ರಿ ಒಂದು ಗಂಟೆಯ ವರೆಗೂ ವರುಣ್ ಧವನ್ ಜೊತೆ ಇಲಿ ರೋಮಾನ್ಸ್ ಮಾಡುತ್ತಿದ್ದಳಂತೆ.. ಆಕೆಯ ಈ ಪ್ರಣಯ ನೋಡಿ ಸುತ್ತಮುತ್ತಲಿನವರು ದಂಗಾಗಿ ಹೋದರಂತೆ. ಈ ಮಧ್ಯೆ ವರುಣ್ ಧವನ್ ಅತ್ಯಂತ ಗೌರವಾನ್ವಿತ ವ್ಯಕ್ತಿ , ಸ್ತ್ರೀಯರ ಬಗ್ಗೆ ಹೆಚ್ಚು ಗೌರವ ಆತನಿಗೆ. ನಾನೇನಾದರು ಮದುವೆ ಆದರೆ ಅಂತಹ ವ್ಯಕ್ತಿ ಜೊತೆ ಆಗ್ತೀನಿ ಎನ್ನುವ ಸ್ಟೇಟ್ಮೆಂಟ್ ನೀಡಿದ್ದಾಳೆ . ಈಗ ಬಿ ಟೌನ್ ನ ಸುದ್ದಿಗಳಲ್ಲಿ ಇದು ಸಹ ಹೆಚ್ಚು ಪ್ರಚಾರ ಗಿಟ್ಟಿಸುತ್ತಿದೆ..