Select Your Language

Notifications

webdunia
webdunia
webdunia
webdunia

ಅನಿಲ್ ಜಾನ್‌ರನ್ನು ವಿವಾಹವಾದ ಮೋಹಕ ನಟಿ ಮೀರಾ ಜಾಸ್ಮಿನ್

ನಟಿ
ತಿರುವನಂತಪುರಂ , ಗುರುವಾರ, 13 ಫೆಬ್ರವರಿ 2014 (14:01 IST)
PR
ರಾಷ್ಟ್ರಪ್ರಶಸ್ತಿ ವಿಜೇತೆ ಮೋಹಕ ನಟಿ ಮೀರಾ ಜಾಸ್ಮಿನ್ ಇಂದು ನಗರದ ಪ್ರಖ್ಯಾತ ಚರ್ಚ್‌ನಲ್ಲಿ ಇಂಜಿನಿಯರ್ ವೃತ್ತಿಯಲ್ಲಿರುವ ಅನಿಲ್ ಜಾನ್ ಎನ್ನುವವರನ್ನು ವಿವಾಹವಾಗಿದ್ದಾರೆ.



webdunia
PR

webdunia
PR
ಕೊಚ್ಚಿಯ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಫೆಬ್ರವರಿ 9 ರಂದು ವಿವಾಹ ಅಧಿಕೃತವಾಗಿ ನೊಂದಣಿಯಾಗಿದ್ದರೂ ವಿವಾಹ ಸಮಾರಂಭ ಇಂದು ನೆರವೇರಿತು.

webdunia
PR
ಉಭಯರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯವಾಗಿದ್ದು, ನಂತರ ಇಬ್ಬರ ಕುಟುಂಬದ ಸದಸ್ಯರು ಸಮ್ಮತಿ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

webdunia
PR
ಮೀರಾ ಜಾಸ್ಮಿನ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕುಟುಂಬಕ್ಕೆ ಮೊದಲು ಆದ್ಯತೆ ನೀಡುತ್ತೇನೆ. ಉತ್ತಮ ಪಾತ್ರಗಳು ಬಂದಲ್ಲಿ ಮಾತ್ರ ಸಿನೆಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

webdunia
PR
ಅನಿಲ್ ಜಾನ್ ಕಂಪ್ಯೂಟರ್ ಇಂಜಿನಿಯರ್ ಆಗಿ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶೀಘ್ರದಲ್ಲಿ ಹನಿಮೂನ್‌ಗಾಗಿ ತೆರಳಲಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ಮೀರಾ ಜಾಸ್ಮಿನ್ ಮತ್ತು ಅನಿಲ್ ಜಾನ್ ವಿವಾಹ ಸಮಾರಂಭದಲ್ಲಿ ಕೆಲವೇ ಕೆಲ ಗಣ್ಯರ ಉಪಸ್ಥಿತಿಗೆ ಮಾತ್ರ ಅವಕಾಶ ನೀಡಲಾಗಿತ್ತು.

webdunia
PR
ಮೀರಾ ಜಾಸ್ಮಿನ್ 2001ರಲ್ಲಿ ಸೂತ್ರಧಾರನ್ ಚಿತ್ರದಿಂದ ಸಿನೆಮಾ ರಂಗವನ್ನು ಪ್ರವೇಶಿಸಿದ್ದರು. 2004ರಲ್ಲಿ ಪಾದಮ್ ಒನ್ನು ಒಲು ವಿಲಾಪಮ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು.ನಂತರ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದರು.

webdunia
PR
ಜಾಸ್ಮಿನ್ 10 ವರ್ಷಗಳ ಸಿನೆಮಾ ಕ್ಷೇತ್ರದಲ್ಲಿ ಬಹುತೇಕ ಪ್ರಮುಖ ನಟರೊಂದಿಗೆ ನಟಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada