ಇಲ್ಲಿನ ಜನಗಳ ಪ್ರಕಾರ ಗಂಧರ್ವಭಿಲ್ ಎಂದು ಹೆಸರು ಪಡೆದಿದ್ದ ಮಾಳವದ ಗಂಧರ್ವಸೇನನು ಕಲ್ಲಾಗಿ ಹೋಗಲಿ ಎಂದು ಈ ಹಳ್ಳಿಗೆ ಶಾಪ ನೀಡಿದನು ಎಂಬ ನಂಬಿಕೆ ಇದೆ. ಶಾಪದ ಕಾರಣವೋ ಅಥವಾ ಮತ್ತಾವ ಕಾರಣದಿಂದಲೋ ಈಗಿರುವ ಗಂಧರ್ವಪುರಿಯ ಭೂಗರ್ಭದಲ್ಲಿ ಮೂರ್ತಿಗಳು ಇವೆ. ಮತ್ತು ಹಲವಾರು ಬಾರಿ ಇಲ್ಲಿನ ಗ್ರಾಮಸ್ಥರಿಗೆ ಶಿಲಾ ಮೂರ್ತಿಗಳು ಭೂಮಿಯನ್ನು ಅಗಿಯುವ ಸಂದರ್ಭದಲ್ಲಿ ದೊರೆತಿವೆ.
ನಂಬಿಕೆಯ ಪ್ರಕಾರ ಗಂಧರ್ವಸೇನನಿಗೆ ನಾಲ್ಕು ಬಾರಿ ವಿವಾಹವಾಗಿತ್ತಂತೆ. ಅವನ ನಾಲ್ವರು ಹೆಂಡಂದಿರು ನಾಲ್ಕು ವರ್ಣಗಳ ಹಿನ್ನೆಲೆಯಿಂದ ಬಂದವರಾಗಿದ್ದರು.ಶತ್ರಾನಿ ಎನ್ನುವವಳಿಂದ ಅವನಿಗೆ ಶಂಖ, ರಾಜಾ ವಿಕ್ರಮಾದಿತ್ಯ ಮತ್ತು ಭತೃಹರಿ ಎಂಬ ಮೂವರು ಗಂಡು ಮಕ್ಕಳು ಜನಿಸಿದರು.
ಗ್ರಾಮದ ಹಿರಿಯ ವಿಕ್ರಮ ಸಿಂಗ್ ಕುಶ್ವಾಹ್ ಅವರ ಪ್ರಕಾರ ಇಲ್ಲಿನ ರಾಜಕುಮಾರಿಯು ತಂದೆಯ ಇಚ್ಚೆಗೆ ವಿರುದ್ಧವಾಗಿ ಗಂಧರ್ವಸೇನನನ್ನು ವಿವಾಹ ಮಾಡಿಕೊಂಡಳು.ತನ್ನ ಪತ್ನಿಯನ್ನು ಭೇಟಿಯಾಗಲು ಗಂಧರ್ವಸೇನನು ಪ್ರತಿದಿನ ರಾತ್ರಿ ಕತ್ತೆಯ ರೂಪದಲ್ಲಿ ಬಂದು ನಂತರ ಸುಂದರ ರಾಜಕುಮಾರ ರೂಪ ತಾಳಿ ರಾಜಕುಮಾರಿಯ ಬಳಿ ಹೋಗುತ್ತಿದ್ದನು. ಇದನ್ನು ತಿಳಿದ ರಾಜನು, ಗಂಧರ್ವನು ಬಿಡುವ ಕತ್ತೆಯ ಚರ್ಮವನ್ನು ಕೆಳಗೆ ಹಾಕಿದ ತಕ್ಷಣ ಆತನನ್ನು ಸುಟ್ಟು ಹಾಕುವಂತೆ ಆದೇಶಿಸಿದನು. ಸೈನಿಕರಿಂದ ಬೆಂಕಿಗೆ ಆಹುತಿಯಾಗುವ ಸಂದರ್ಭದಲ್ಲಿ ಗಂಧರ್ವಸೇನನು ಇಡೀ ಗ್ರಾಮವೇ ಕಲ್ಲಾಗಿ ಹೋಗಲಿ ಎಂದು ಶಾಪವಿತ್ತನು.ಸಾಕಷ್ಟು ಶಿಲಾಮೂರ್ತಿಗಳು ದೊರೆಯುತ್ತಿರುವ ಕಾರಣ 1996ರಲ್ಲಿ ಇಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ರಾಮ ಪ್ರಸಾದ್
ಕುಂಡಲಿಯಾ ಪ್ರಕಾರ ಇಲ್ಲಿ ಅಂದಾಜು ಮುನ್ನೂರು ಮೂರ್ತಿಗಳನ್ನು ಇವರೆಗೆ ಸಂಗ್ರಹಿಸಲಾಗಿದೆ. ಕೆಲವೇ ಮೂರ್ತಿಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲ ಮೂರ್ತಿಗಳು ಗಂಧರ್ವಸೇನ ಮಂದಿರದಲ್ಲಿ ದೊರೆತಿವೆ.
ಇಲ್ಲಿ ದೊರೆತಿರುವ ಮೂರ್ತಿಗಳಲ್ಲಿ ಬುದ್ಧ, ಮಹಾವೀರ ಮತ್ತು ವಿಷ್ಣುವಿನ ದೇವತಾ ಮೂರ್ತಿಗಳ ಸಂಖ್ಯೆ ಹೆಚ್ಚಿದೆ. ಇಲ್ಲಿನ ನಿವಾಸಿಗಳ ಪ್ರಕಾರ ಕಳೆದು ಹೋಗಿರುವ ಮೂರ್ತಿಗಳ ಸಂಖ್ಯೆ ಮೀರಬಹುದು,.ಶಾಪದಿಂದಾಗಿ ಇಡೀ ಗ್ರಾಮವೇ ಕಲ್ಲಾಗಿ ಹೋಗಬಹುದೇ..ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತ.