Article Blind Faith Articles %e0%b2%b0%e0%b3%8b%e0%b2%97 %e0%b2%92%e0%b2%a6%e0%b3%8d%e0%b2%a6%e0%b3%8b%e0%b2%a1%e0%b2%bf%e0%b2%b8%e0%b3%8a %e0%b2%b5%e0%b3%88%e0%b2%a6%e0%b3%8d%e0%b2%af %e0%b2%87%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%8d%e0%b2%a6%e0%b2%be%e0%b2%a8%e0%b3%86%e2%80%a6 108021100032_1.htm

Daily Horoscope

Select Your Language

Notifications

webdunia
webdunia
webdunia
webdunia

ರೋಗ 'ಒದ್ದೋಡಿಸೊ' ವೈದ್ಯ ಇಲ್ಲಿದ್ದಾನೆ…!

ರೋಗ
WD
ನಂಬಿದ್ರೆ ನಂಬಿ, ಬಿಟ್ರೆ ಬಿಡಿ... ಈ ಸರಣಿಯಲ್ಲಿ ನಾವೀ ಬಾರಿ ವಿಚಿತ್ರ ರೋಗ ಚಿಕಿತ್ಸಾ ಪದ್ಧತಿಯೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಚೆನ್ನಾಗಿ ಬಾರಿಸಿದರೆ ರೋಗ ಓಡಿಹೋಗುತ್ತದೆ ಎಂಬುದು ಈ ಚಿಕಿತ್ಸಾ ಪದ್ಧತಿಯ ಸೂತ್ರ. ಕಾಲಿನಿಂದ, ಕೈಯಿಂದ ಚೆನ್ನಾಗಿ ಥಳಿಸಿದರೆ ರೋಗ ಕಂಗೆಟ್ಟು ಓಡುತ್ತದೆಯಂತೆ!

ಛತ್ತೀಸಗಢದ ಮನ್ಸಾರಾಮ್ ಎಂಬಾತ ರೋಗಿಗಳ ಅಸ್ವಾಸ್ಥ್ಯವನ್ನು ಗುಣಪಡಿಸಲು ಅನುಸರಿಸುವುದು ಈ ಪದ್ಧತಿಯನ್ನೇ.

ಈ ವಿಷಯದ ಬಗ್ಗೆ ನಮಗೆ ತಿಳಿಸಿದಾಗ, ನಾವು ಧಾವಿಸಿದ್ದು ಛತ್ತೀಸಗಢಕ್ಕೆ. ರಾಜಧಾನಿ ರಾಯಪುರದಿಂದ ಸುಮಾರು 75 ಕಿ.ಮೀ. ಹಾಗೂ ಧಾಂತಾರಿ ಎಂಬ ಪಟ್ಟಣದಿಂದ 35 ಕಿ.ಮೀ. ದೂರದಲ್ಲಿದೆ ಲಾಡೆರ್ ಹೆಸರಿನ ಈ ಪುಟ್ಟ ಹಳ್ಳಿ. ರೋಗಗಳನ್ನು ಈ ವ್ಯಕ್ತಿ ಒದ್ದೋಡಿಸುತ್ತಿರೋದು ಈ ಹಳ್ಳಿಯಲ್ಲೇ. ಅಲ್ಲಿ ಹೋದಾಗ ನೂರಾರು ಮಂದಿ ಒಂದು ಮರದ ಸಮೀಪ ಜಮಾಯಿಸಿದ್ದರು. ಅವರೆಲ್ಲಾ ರೋಗವನ್ನು ವಸ್ತುಶಃ ತೊಲಗಿಸಿಕೊಳ್ಳಲು ಬಂದವರು.

ಸ್ವಲ್ಪ ಸಮಯದ ಬಳಿಕ ಮನ್ಸಾರಾಮ್ ಬಂದು ಮರದ ಕೆಳಗೆ
webdunia
WD
ಕುಳಿತುಕೊಳ್ಳುತ್ತಾನೆ. ಮತ್ತು ಅಲ್ಲಿದ್ದವರಿಗೆಲ್ಲಾ ಹೊಡೆಯತೊಡಗುತ್ತಾನೆ. ಅವನಿಂದ ಹೊಡೆಸಿಕೊಳ್ಳಲು, ಒದೆಸಿಕೊಳ್ಳಲು ಉಳಿದ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಾ, ತಮ್ಮ ಸರದಿಗಾಗಿ ಕಾಯುತ್ತಿದ್ದರು.

ಯಾವುದೇ ರೋಗವನ್ನೂ ಗುಣಪಡಿಸಬಲ್ಲೆ ಎನ್ನುತ್ತಾನಾತ. ಮೂರು ವರ್ಷದ ಹಿಂದೆ ನಾನೊಬ್ಬ ರೈತನಾಗಿದ್ದೆ. ಒಂದು ರಾತ್ರಿ ದೇವರು ಕನಸಿನಲ್ಲಿ ಬಂದು, ಜನರ ರೋಗಗಳನ್ನು ಗುಣಪಡಿಸುವಂತೆ ಆದೇಶಿಸಿದ. ಇದರಿಂದ ಪ್ರೇರಣೆ ಪಡೆದು ಈ ಕೆಲಸಕ್ಕೆ ಇಳಿದೆ ಎಂದು ಆತ ವಿವರಿಸಿದ್ದಾನೆ.

webdunia
WD
ಒಂದು ವರ್ಷದಿಂದ ತಾನು ಏನನ್ನೂ ತಿಂದಿಲ್ಲ ಎಂದಿದ್ದಾನೆ ಮನ್ಸಾರಾಮ್! ಪ್ರತಿಯೊಬ್ಬ ದೇವರೂ ತನಗೆ ಶಕ್ತಿ ಕರುಣಿಸಿದ್ದಾನೆ ಎನ್ನುವುದು ಆತನ ನುಡಿ.

ಹೆಚ್ಚಿನ ರೋಗಿಗಳ ಜತೆಗೆ ಆತ ಚೆನ್ನಾಗಿ ಮಾತನಾಡುತ್ತಾನೆ. ಅವರಲ್ಲಿ ಹೆಚ್ಚಿನವರು ಇಲ್ಲಿಗೆ ಇದೇ ಮೊದಲ ಬಾರಿ ಬರುತ್ತಿದ್ದಾರೆ. ಬಾಯಿಂದ ಬಾಯಿಗೆ ಈತನ ಚಿಕಿತ್ಸೆಯ ಕೈಂಕರ್ಯ ಹರಡುತ್ತಲೇ ಅದನ್ನು ಕೇಳಿ ಬಂದವರಿವರು. ಚಿಕಿತ್ಸೆಗಾಗಿ ಪ್ರತಿಯೊಬ್ಬನೂ ಇಲ್ಲಿಗೆ ಮೂರು ಸಲ ಬರಬೇಕು. ಮೂರು ಹಂತಗಳಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ರೋಗ ಗುಣವಾಗುತ್ತದೆ ಎಂಬುದು ಆತನ ನಂಬಿಕೆ.

ತಮಗೂ ರೋಗ ಗುಣವಾಗಿದೆಯಾದರೂ ಇದು ಆತನ ಪ್ರಚಾರ ತಂತ್ರವೂ ಇರಬಹುದು ಅಂತ ಅಲ್ಲಿಗೆ ಬಂದ ಕೆಲವು ರೋಗಿಗಳು ನಮ್ಮ ಬಳಿ ಹೇಳಿದ್ದಾರೆ.

ಈ ಚಿಕಿತ್ಸೆ ಮಾಡುವುದು ಸಂಪೂರ್ಣವಾಗಿ ಉಚಿತ
webdunia
WD
ಎನ್ನುತ್ತಾನೆ ಮನ್ಸಾರಾಮ್. ಆದರೆ ಅಲ್ಲಿಗೆ ಬಂದ ರೋಗಿಗಳು ಆತನಿಗೆ ಭಾರಿ ಪ್ರಮಾಣದಲ್ಲಿ ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದುದನ್ನು ನಾವು ಕಂಡೆವು. ಅಲ್ಲಿಗೆ ರೋಗಿಯು ಮೂರು ಬಾರಿ ಬರಲೇಬೇಕಲ್ಲ... ಈ ಕಾರಣಕ್ಕೆ ಆತನಿಗೆ ದೊರೆಯುವ ಕಾಣಿಕೆಗಳು ಕೂಡ ಮೂರು ಪಟ್ಟು.

ಹೆಚ್ಚಿನ ಈ ಮುಗ್ಧ ರೋಗಿಗಳು ಬಡವರು ಮತ್ತು ಅನಕ್ಷರಸ್ಥರು ಎಂಬುದು ನಮಗೆ ತಿಳಿಯಿತು. ಅವರಿಗೆ ಆರೋಗ್ಯ ಸೌಲಭ್ಯಗಳ ಕುರಿತು ಸೂಕ್ತ ಅರಿವಿಲ್ಲ. ಈ ಕಾರಣಕ್ಕೆ ಅವರು ಮನ್ಸಾರಾಮ್ ಬಲೆಯಲ್ಲಿ ಬಿದ್ದಿದ್ದರು. ಈ ಬಗ್ಗೆ ನೀವೇನಂತೀರಿ?

Share this Story:

Follow Webdunia kannada