Article Blind Faith Articles %e0%b2%b0%e0%b2%be%e0%b2%95%e0%b3%8d%e0%b2%b7%e0%b2%b8%e0%b2%a8%e0%b3%87 %e0%b2%87%e0%b2%b2%e0%b3%8d%e0%b2%b2%e0%b2%bf %e0%b2%97%e0%b3%8d%e0%b2%b0%e0%b2%be%e0%b2%ae%e0%b2%a6%e0%b3%87%e0%b2%b5%e0%b2%a4%e0%b3%86 108062300047_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಕ್ಷಸನೇ ಇಲ್ಲಿ ಗ್ರಾಮದೇವತೆ!

ನಿಂಬದೈತ್ಯ
ದೀಪಕ್ ಖಂಗದಾಳೆ
WD
ಇಷ್ಟಾರ್ಥ ನೆರವೇರಲು ರಾಕ್ಷಸನನ್ನೂ ದೇವರೆಂದು ಆರಾಧಿಸಬೇಕೇ? ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ ಈ ದೈತ್ಯಾರಾಧನೆಯನ್ನು ನಿಮಗೆ ತೋರಿಸಲಿದ್ದೇವೆ. ಹೆಚ್ಚಿನವರು ಈ ರಾಕ್ಷಸನನ್ನು ತಮ್ಮ ಕುಟುಂಬದ ಅಧಿದೇವತೆ ಎಂದು ಆರಾಧಿಸುತ್ತಾರೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ನಂದೂರು ನಿಂಬದೈತ್ಯ ಎಂಬ ಊರಿದೆ. ದೈತ್ಯ ಮಂದಿರ ಇಲ್ಲೇ ಇರುವುದು. ಇಲ್ಲಿನ ವಿಶೇಷತೆಯೆಂದರೆ, ಈ ಸ್ಥಳದ ನಿವಾಸಿಗಳ್ಯಾರೂ ಹನುಮಂತನ ಹೆಸರು ಸ್ಮರಿಸುವುದೇ ಇಲ್ಲ. ಈ ಪ್ರದೇಶದಲ್ಲೆಲ್ಲೂ ಹನುಮಾನ್ ದೇವಾಲಯವೂ ಕಂಡುಬರುವುದಿಲ್ಲ.

ನಂಬಿಕೆಯ ಪ್ರಕಾರ, ಸೀತಾನ್ವೇಷಣೆ ಕಾಲದಲ್ಲಿ ಶ್ರೀರಾಮನು ಕೇದಾರೇಶ್ವರದಲ್ಲಿ ವಾಲ್ಮೀಕಿ ಋಷಿ ಆಶ್ರಮದಲ್ಲಿ ಕೆಲ ಕಾಲ ತಂಗಿರುತ್ತಾನೆ. ಆ ಸಮಯದಲ್ಲಿ ನಿಂಬದೈತ್ಯ ಎಂಬಾತ ಶ್ರೀರಾಮನ ಸೇವೆ ಮಾಡಿ ಅವನ ಭಕ್ತನಾಗಿ ಪರಿವರ್ತನೆಗೊಂಡ. ಆ ಸಮಯದಲ್ಲಿ ಸಂಪ್ರೀತನಾದ ಶ್ರೀರಾಮನು, ಈ ಸ್ಥಳದ ಜನರು ಇನ್ನು ಮುಂದೆ ನಿನ್ನನ್ನೇ ಕುಟುಂಬ
webdunia
WD
ದೇವರಾಗಿ ಪರಿಗಣಿಸುವರು. ಅವರೆಂದಿಗೂ ಹನುಮಂತನನ್ನು ಪ್ರಾರ್ಥಿಸುವುದಿಲ್ಲ. ಇದರಿಂದ ನಿನ್ನ ಹೆಸರು ಚಿರಸ್ಥಾಯಿಯಾಗುತ್ತದೆ ಎಂದು ವರ ನೀಡಿದನಂತೆ. ಅಂದಿನಿಂದ ಇಲ್ಲಿ ಹನುಮ ಹೆಸರು ಇಲ್ಲ. ಹೊರಗಿನಿಂದ ಬಂದವರ್ಯಾರಿಗಾದರೂ ಹನುಮಂತನ ಹೆಸರಿದ್ದವರಿದ್ದರೆ ಈ ಹಳ್ಳಿಯೊಳಗೆ ಕಾಲಿಡಬೇಕಿದ್ದರೆ ಅವರು ಮೊದಲು ತಮ್ಮ ಹೆಸರು ಬದಲಾಯಿಸಿಕೊಳ್ಳಬೇಕಾಗುತ್ತದೆಯಂತೆ.

ಎಲ್ಲಿವರೆಗೆ ಈ ನಂಬಿಕೆ ಇದೆಯೆಂದರೆ ಈ ಹಳ್ಳಿಯ ಜನರು ಹನುಮಂತನ ಹೆಸರಿರುವ ಕಂಪನಿಯ ಚತುಶ್ಚಕ್ರ ವಾಹನಗಳನ್ನೂ ಬಳಸುತ್ತಿಲ್ಲವಂತೆ. ಶಿಕ್ಷಕರಾಗಿರುವ ಏಕನಾಥ ಜನಾರ್ದನ ಪಾಲ್ವೆ ಅವರು ಇದನ್ನೇ ಹೇಳುತ್ತಾರೆ.

webdunia
WD
ಹೆಚ್ಚಿನ ಹಳ್ಳಿಗರು ಕೆಲಸಕ್ಕಾಗಿ ಬೇರೆ ಕಡೆ ವಲಸೆ ಹೋಗುತ್ತಾರಾದರೂ, ಇಲ್ಲಿ ನಡೆಯುವ ನಿಂಬದೈತ್ಯ ಮೆರವಣಿಗೆ ದಿನದಂದು ಮಾತ್ರ ಹಳ್ಳಿಗೆ ಮರಳುತ್ತಾರೆ.

ಅದೊಮ್ಮೆ, ಕಬ್ಬಿನ ರಾಶಿ ಹೊತ್ತ ಟ್ರಕ್ಕೊಂದು ಕೆಸರಿನಲ್ಲಿ ಹೂತು ಹೋಯಿತು. ಏನೆಲ್ಲಾ ಪ್ರಯತ್ನ ಮಾಡಿದರೂ ಅದನ್ನು ಕೆಸರಿನಿಂದ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಆ ಬಳಿಕ, ಟ್ರಕ್‌ನ ಕ್ಯಾಬಿನ್‌ನಲ್ಲಿರುವ ಹನುಮಾನ್ ಫೋಟೋವನ್ನು ತೆಗೆದುಹಾಕುವಂತೆ ಯಾರೋ ಸೂಚಿಸಿದರು. ಆ ನಂತರವೇ ಟ್ರಕ್ಕು ಕೆಸರಿನಿಂದ ಹೊರಬಂತು ಎನ್ನುತ್ತಾರೆ ಸ್ಥಳೀಯರು.

ಕಾನ್‌ಸ್ಟೇಬಲ್ ಅವಿನಾಶ್ ಗರ್ಜೆ ಹೇಳುವ ಪ್ರಕಾರ, ನಿಂಬದೈತ್ಯ ಮಂದಿರದ ಶಿಲ್ಪವಿನ್ಯಾಸವು ಹೇಮಂದಪತಿ ಶೈಲಿಯದಾಗಿದ್ದು, ಈ ಹಳ್ಳಿಯಲ್ಲಿ ನಿಂಬದೈತ್ಯ ಮಂದಿರದ
webdunia
WD
ಹೊರತಾಗಿ ಬೇರೆ ಯಾವುದೇ ಎರಡು ಮಹಡಿಗಳ ಕಟ್ಟಡವಿಲ್ಲ. ನಿಂಬಾಸುರನ ಗೌರವಾರ್ಥವಾಗಿ ಯಾರು ಕೂಡ ಎರಡು ಮಹಡಿ ಕಟ್ಟಡವನ್ನು ಕಟ್ಟುವುದಕ್ಕೇ ಹೋಗಿಲ್ಲವಂತೆ.

ಮನೆಗಳಲ್ಲಿ, ಬೈಕುಗಳಲ್ಲಿ, ಅಂಗಡಿಗಳಲ್ಲಿ... ಹೀಗೆ ಎಲ್ಲೆಲ್ಲೂ ನಿಂಬದೈತ್ಯ ಹೆಸರನ್ನು, ನಿಂಬದೈತ್ಯ ಪ್ರಸಾದ ಅಥವಾ ನಿಂಬದೈತ್ಯ ಆಶೀರ್ವಾದ ಎಂಬ ಉಲ್ಲೇಖವನ್ನು ನೀವಿಲ್ಲಿ ಕಾಣಬಹುದು.

webdunia
WD
ಹನುಮಾನ್ ದೇವರನ್ನು ಇಲ್ಲಿ ‘ಅಪಶಕುನಿ’ ಎಂದು ಭಾವಿಸಲಾಗುತ್ತಿದ್ದು, ಇಲ್ಲಿ ನಿಂಬದೈತ್ಯನೇ ಕುಲದೇವತೆ.

ದೈತ್ಯನನ್ನು ಇಲ್ಲಿನ ಜನ ಆರಾಧಿಸುವುದು ವಿಚಿತ್ರ ಸಂಗತಿ. ಇದನ್ನೇ ಹೇಳೋದು ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಅಂತ. ಇಂಥದ್ದೇ ಸಂಗತಿಗಳು ನಿಮಗೆಲ್ಲಾದರೂ ಕಂಡು ಬಂದಿದೆಯೇ? ನಮಗೆ ಬರೆದು ತಿಳಿಸಿ.

Share this Story:

Follow Webdunia kannada