Select Your Language

Notifications

webdunia
webdunia
webdunia
webdunia

ಮೊಬೈಲ್‌ನಲ್ಲಿ ಭಕ್ತರ ಮೊರೆ ಆಲಿಸುವ ಗಣೇಶ

ಮೊಬೈಲ್‌ನಲ್ಲಿ ಭಕ್ತರ ಮೊರೆ ಆಲಿಸುವ ಗಣೇಶ

ಭೀಕಾ ಶರ್ಮಾ

WD
ನೀವು ನಂಬುವಿರಾ… ಭಗವಂತನೂ ಮೊಬೈಲ್ ಬಳಸುತ್ತಾನೆ! ಇದು ಅಚ್ಚರಿಯಲ್ಲವೇ? ನಿಮಗೆ ನಂಬಿಕೆ ಇಲ್ಲವೆಂದಾದಲ್ಲಿ ನಾವು ನಿಮ್ಮನ್ನು 1200 ವರ್ಷಗಳ ಹಳೆಯದಾದ ದೇವಾಲಯವೊಂದಕ್ಕೆ ಕರೆದೊಯ್ಯುತ್ತೇವೆ. ಈ ದೇವಾಲಯದಲ್ಲಿ ಭಗವಾನ್ ಗಣೇಶ ತಮ್ಮ ಭಕ್ತಾದಿಗಳೊಂದಿಗೆ ಮೊಬೈಲ್ ಫೋನ್ ನಲ್ಲಿ ಸಂವಹನ ನಡೆಸುತ್ತಾನೆ.

ಇಂದಿನ ಧಾವಂತದ ಜಮಾನದಲ್ಲಿ ಜನತೆಗೆ ದೇವಾಸ್ಥಾನಕ್ಕೆ ತೆರಳಲು ಸಹ ಸಮಯವಿಲ್ಲದಾಗಿದೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇಂದೋರ್‌ನ ಜುನಾ ಚಿಂತಾಮಣ್ ಗಣೇಶ ನಿಮ್ಮ ಪ್ರಾರ್ಥನೆಗಳನ್ನು, ಆಕಾಂಕ್ಷೆಗಳನ್ನು ಮೊಬೈಲ್ ಫೋನಿನಲ್ಲಿಯೇ ಆಲಿಸಿ ನಿಮ್ಮ ಇಷ್ಟಾರ್ಥಗಳನ್ನು ನೇರವೇರಿಸುತ್ತಾನೆ.

webdunia
WD
ಜುನಾ ಚಿಂತಾಮಣ್ ಗಣೇಶ ದೇವಾಲಯ 1200 ವರ್ಷಗಳಷ್ಟು ಪುರಾತನವಾದುದು. ದೇವಾಲಯದ ಪೂಜಾರಿಯೊಬ್ಬರು ತಿಳಿಸುವಂತೆ ಕಳೆದ 22 ವರ್ಷಗಳಿಂದ ಜನರು ಅಸಂಖ್ಯಾತ ಪತ್ರಗಳನ್ನು ಜುನಾ ಗಣೇಶನಿಗೆ ಕಳುಹಿಸಿಕೊಡುತ್ತಿದ್ದಾರಂತೆ. ದೇವರಿಗೆ ಹರಕೆ ಹೇಳಿಕೊಳ್ಳಲು ಮತ್ತು ತಮ್ಮ ಇಷ್ಟ ದೇವನಿಗೆ ವಂದನೆ ಸಲ್ಲಿಸಲು ಜನ ಪತ್ರ ಬರೆಯುತ್ತಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್ ಗಳು ವ್ಯಾಪಕವಾಗಿರುವುದರಿಂದ ಭಗವಾನ್ ಗಣೇಶನಿಗೆ ಪತ್ರಗಳ ಜೊತೆಗೆ ಫೋನ್ ಕರೆಗಳು ಸಹ ಬರತೊಡಗಿವೆ. ಭಕ್ತಾದಿಗಳು ಕರೆ ಮಾಡಿದಾಗ ದೇವಾಲಯದ ಪೂಜಾರಿ ಕರೆಯನ್ನು ಸ್ವೀಕರಿಸಿ ದೇವರ ಕಿವಿಯ ಬಳಿ ಹಿಡಿಯುತ್ತಾರೆ. ಭಕ್ತ ನೇರವಾಗಿ ತನ್ನ ಕಷ್ಟ ಕಾರ್ಪಣ್ಯಗಳನ್ನು ದೇವರಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾನೆ.

ಈ ದೇವಾಸ್ಥಾನಕ್ಕೆ ಖುದ್ದಾಗಿ ಆಗಮಿಸುವ ಭಕ್ತಾದಿಗಳು ಸಹ ಜುನಾ ಚಿಂತಾಮಣ್ ಗಣೇಶ ನಿಜವಾಗಿಯೂ ಮೊಬೈಲ್ ಕರೆಗಳ ಮೂಲಕ ಭಕ್ತಾದಿಗಳ ಮೊರೆಯನ್ನು ಆಲಿಸುತ್ತಾನೆಂದೇ ನಂಬುತ್ತಾರೆ. ಪತ್ರಗಳ ಮೂಲಕ ಅಥನಾ ಫೋನ್ ಮೂಲಕ ತನ್ನನ್ನು ತಲುಪುವ ಕೋರಿಕೆಗಳನ್ನು ಸಹ ಈಡೇರಿಸುತ್ತಾನೆ ಎಂದು ಹೇಳುತ್ತಾರೆ. ಅಂತೆಯೇ ಭಗವಾನ್ ಗಣೇಶನ ಭಕ್ತ ಮನೀಶ್ ಮೋದಿ ಅವರೂ ಈ ಮಾತನ್ನು ಬೆಂಬಲಿಸುತ್ತಾರೆ.

webdunia
WD
ಜುನಾ ಗಣೇಶನಿಗೆ ಕೇವಲ ಭಾರತಾದ್ಯಂತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಕರೆಗಳು ಬರುತ್ತವೆ. ಕೋರಿಕೆಯ ಉದ್ದನೆ ಪಟ್ಟಿ ಇರುವ ಭಕ್ತರು ಪತ್ರದ ಮೂಲಕ ಅವುಗಳನ್ನು ದೇವರಿಗೆ ಮುಟ್ಟಿಸುತ್ತಾರೆ. ಈ ಮಾಧ್ಯಮಗಳ ಮೂಲಕ ದೇವರು ತಮ್ಮ ಹರಕೆಯನ್ನು ಆಲಿಸುತ್ತಾನೆ ಮತ್ತು ಅವುಗಳನ್ನು ಈಡೇರಿಸುತ್ತಾನೆ ಎಂಬುದಾಗಿ ಮನೀಶ್ ಹೇಳುತ್ತಾರೆ.

ಗಣೇಶ ದೇವ ನಿಜವಾಗಿಯೂ ಫೋನ್ ಕರೆಗಳು ಮತ್ತು ಪತ್ರಗಳಿಗೆ ಸ್ಪಂದಿಸುತ್ತಾನೆ ಎಂದು ನಿಮಗನಿಸುತ್ತದೆಯೇ ಅಥವಾ ಇದೊಂದು ಮೂಢನಂಬಿಕೆಯೇ? ಈ ಬಗ್ಗೆ ನಿಮಗೇನನಿಸುತ್ತದೆ. ನಾವು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಯ ಬಯಸುತ್ತೇವೆ... ಈ ಕಥನದ ಬಗ್ಗೆ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ನೀಡುವಿರಾ.....

Share this Story:

Follow Webdunia kannada