ಅಲ್ಲಿಯೇ ಇದ್ದ ಟ್ರಕ್ ಡ್ರೈವರ್ ಪಪ್ಪು ಮಾಲವೀಯನನ್ನು ಕರೆದು ಏನಿದು ಮಾನ್ಪುರ್ ಘಾಟ್ ಕಥೆ ಎಂದು ಕೇಳಿದೇವು. ಹಲವಾರು ವರುಷಗಳಿಂದ ಇದೇ ರಸ್ತೆಯಲ್ಲಿ ಸಾಗಿದ್ದೇನೆ. ಕಣ್ಣಾರೇ ಸಾವುಗಳನ್ನು ನೋಡಿದ್ದೇನೆ. ಈ ರಸ್ತೆಯ ತುಂಬ ಅತೃಪ್ತ ಆತ್ಮಗಳು ಅಡ್ಡಾಡುತ್ತಿರುತ್ತವೆ ಆದ್ದರಿಂದಲೇ ಇಲ್ಲಿನ ಭೈರವನಿಗೆ ಶರಣು ಹೇಳುವುದು ಎಂದು ಹೇಳಿದ.ಸರಕಾರ ಕೂಡ ಇಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತದೆ. ಘಾಟ್ ಪ್ರವೇಶಕ್ಕೆ ಮುನ್ನ ನಿಮ್ಮ ವಾಹನದ ಬ್ರೆಕ್ ಪರೀಕ್ಷಿಸಿ ಎನ್ನುವುದು ಕೂಡ ಒಂದು.ಇಲ್ಲಿ ನಾವು ಒಂದು ಅಂಶ ಗಮನಿಸಿದ್ದು ಅಂದರೆ ಟ್ರಕ್ ಡ್ರೈವರ್‌ಗಳು ನಿರ್ಲಕ್ಷ್ಯದ ಪರಮಾವಧಿಯಲ್ಲಿ ವಾಹನ ಚಾಲನೆ ಮಾಡುತ್ತಿರುವುದು. ಹೀಗಾಗಿಯೇ ಅಪಘಾತಗಳು ಇಲ್ಲಿ ಆಗುವುದು ಸಹಜ ಅಲ್ಲವೇ?
ಕೆಲವರಿಗೆ ಇಲ್ಲಿ ಆಗುತ್ತಿರುವ ಅವಘಡಗಳತ್ತ ಗಮನ ಇಲ್ಲ ಆದರೂ ಅವರಿಗೆ ದೆವ್ವಗಳ ಭಯವೂ ಇಲ್ಲ. ಆದರೂ ಅವರು ಇಲ್ಲಿನ ಭೈರವನಿಗೆ ಕೈಮುಗಿಯುತ್ತಾರೆ. ಪೊಲೀಸರಿಗಂತೂ ಇಲ್ಲಿ ಆಗುವ ಅಪಘಾತಗಳು ಅವುಗಳಿಂದ ಆಗುವ ಸಾವುಗಳು ನಿತ್ಯ ನಿರಂತರ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಅಲ್ಲವೇ ?