Article Blind Faith Articles %e0%b2%ae%e0%b2%be%e0%b2%b5 %e0%b2%85%e0%b2%b3%e0%b2%bf%e0%b2%af %e0%b2%95%e0%b3%81%e0%b2%b3%e0%b2%bf%e0%b2%a4%e0%b2%b0%e0%b3%86 %e0%b2%ae%e0%b3%81%e0%b2%b3%e0%b3%81%e0%b2%97%e0%b3%81%e0%b2%b5 %e0%b2%a6%e0%b3%8b%e0%b2%a3%e0%b2%bf 108081100048_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾವ-ಅಳಿಯ ಕುಳಿತರೆ ಮುಳುಗುವ ದೋಣಿ !

ನರ್ಮದಾ ನದಿ
WD
ಸೋದರಮಾವ ಮತ್ತು ಅಳಿಯ(ಸಹೋದರಿಯ ಮಗ) ಸಂಬಂಧವು ಪ್ರೀತಿಯ ಅನುಬಂಧವಾಗಿದೆ. ಹಾಗಾದರೆ, ಇವರಿಬ್ಬರನ್ನೂ ಹೊತ್ತ ದೋಣಿಯು ನದಿಯ ಮಧ್ಯದಲ್ಲಿ ಮುಳುಗುತ್ತದೆ ಎಂಬುದು ನಿಜವೇ? ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನಾವು ಇದಕ್ಕೆ ಉತ್ತರ ಕಂಡುಕೊಳ್ಳೋಣ.

ಮಧ್ಯಪ್ರದೇಶದ ನರ್ಮದಾ ನದಿ ದಡದಲ್ಲಿ ನೇಮಾವರ್ ಎಂಬ ಸ್ಥಳವಿದೆ. ನದಿಯಾಳದಲ್ಲಿರುವ ನೈಸರ್ಗಿಕ ಸುರಂಗದಿಂದಾಗಿ ನದಿಯ ಮಧ್ಯ ಭಾಗದಲ್ಲಿ ನೀರು ಸುರುಳಿಯಾಕಾರದಲ್ಲಿ ಹರಿಯುತ್ತದೆ. ನದಿಯ ಈ ಮಧ್ಯಭಾಗವನ್ನು ನಾಭಿ ಕುಂಡ್ ಎಂದು ಕರೆಯುತ್ತಾರೆ. ಈ ಪ್ರದೇಶದ ವೀಕ್ಷಣೆಗೆ ದೂರದೂರುಗಳಿಂದ ಜನಸಾಗರವೇ ಹರಿದುಬರುತ್ತದೆ. ಈ ಸ್ಥಳವನ್ನು ವೀಕ್ಷಿಸಲು ಸೋದರಮಾವ ಮತ್ತು ಅಳಿಯ ಒಂದೇ ದೋಣಿಯಲ್ಲಿ ಸಾಗಿದರೆ, ನದಿಯ ಮಧ್ಯಭಾಗದಲ್ಲಿ ದೋಣಿ ಮುಳುಗುತ್ತದೆ ಎಂಬ ನಂಬಿಕೆಯು ಇಲ್ಲಿ ದಟ್ಟವಾಗಿದೆ.

ಅಂಬಿಗ ಹೇಳುವಂತೆ, ಪ್ರತಿ ಸಮಸ್ಯೆಗೂ ಒಂದು ಪರಿಹಾರವಿರುವಂತೆ, ಈ ಸಮಸ್ಯೆಗೂ ಪರಿಹಾರವಿದೆ. ನಂಬಿಕೆಯ ಪ್ರಕಾರ, ಸೋದರಮಾವ ಮತ್ತು ಅಳಿಯ ಒಂದೇ ದೋಣಿಯಲ್ಲಿ ಸಾಗಬೇಕಾಗಿದ್ದಲ್ಲಿ, ಅದಕ್ಕೆ ಮುನ್ನ ವಿಶೇಷ ಪೂಜೆಯನ್ನು ಮಾಡಿದಲ್ಲಿ ದೋಣಿಯು ಮುಳುಗುವುದಿಲ್ಲ.
webdunia
WD


ತನ್ನ ಅಳಿಯ ಆಯುಶ್‌ನೊಂದಿಗೆ ಈ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ಧರ್ಮೇಂದ್ರ ಅಗರ್ವಾಲ್, ಮುಳುಗುವ ಭಯವಿಲ್ಲದೆ ನಿರ್ಭೀತಿಯಿಂದ ಒಂದೇ ದೋಣಿಯಲ್ಲಿ ಸಾಗುವ ಇಚ್ಚೆಯಿಂದ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದರು.

ಈ ನಂಬಿಕೆಯ ಕುರಿತಾಗಿ ವಿಶೇಷ ಪೂಜೆ ನಡೆಸುವ ಹಿನ್ನೆಲೆಯ ಬಗ್ಗೆ ಪೂಜಾರಿಯನ್ನು ಕೇಳಿದಾಗ ಅವರು ದೀರ್ಘ ಕಥೆಯನ್ನೇ ಹೇಳಿದರು. ಮಥುರಾದ ದೊರೆ ಕಂಸನು ತನ್ನ ಅಳಿಯ ಕೃಷ್ಣನನ್ನು ದೋಣಿಯಲ್ಲಿ ಕರೆತರುತ್ತಿದ್ದಾಗ, ನೀರೊಳಗಿಂದ ಮೇಲೆದ್ದ ಶೇಷನಾಗನು ದೋಣಿಯನ್ನು ಮಗುಚಿಹಾಕಿದ. ಈ ಹಿನ್ನೆಲೆಯಲ್ಲಿ, ನೇಮಾವರದ ಜನರು ಈಗಲೂ ಸೋದರಮಾವ-ಅಳಿಯನಿಗೆ ಒಂದೇ ದೋಣಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದಿಲ್ಲ.

webdunia
WD
ಸೋದರಮಾವ ಮತ್ತು ಅಳಿಯ ಒಂದೇ ದೋಣಿಯಲ್ಲಿ ಪ್ರಯಾಣಿಸಿದರೆ ದೋಣಿ ಮುಳುಗುತ್ತದೆ ಎಂಬ ಭೀತಿಯು ನಿಜವೇ? ಇದು ನಂಬಿಕೆಯೇ ಅಥವಾ ಮೂಢನಂಬಿಕೆಯೇ? ಅದೇನೇ ಆದರೂ, ಇಲ್ಲಿನ ಮಂದಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಾರೆ. ಈ ಬಗ್ಗೆ ನೀವೇನಂತೀರಿ. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.

Share this Story:

Follow Webdunia kannada