Article Blind Faith Articles %e0%b2%aa%e0%b3%81%e0%b2%a3%e0%b3%8d%e0%b2%af %e0%b2%b8%e0%b3%8d%e0%b2%a5%e0%b2%b3 %e0%b2%88 %e0%b2%b8%e0%b3%8d%e0%b2%ae%e0%b2%b6%e0%b2%be%e0%b2%a8 108102000046_1.htm

Select Your Language

Notifications

webdunia
webdunia
webdunia
webdunia

ಪುಣ್ಯ ಸ್ಥಳ ಈ ಸ್ಮಶಾನ!

ನೀವುನಂಬುವಿರಾ
ನಮ್ಮ ಪವಿತ್ರ ಭೂಮಿ ಭಾರತದಲ್ಲಿ ಪುಣ್ಯ ಕ್ಷೇತ್ರಗಳಿಗೇನೂ ಕೊರತೆಯಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ, ಆ ಸ್ಥಳದೊಂದಿಗೆ ಪವಿತ್ರ ಕಥಾನಕವೊಂದು ಥಳುಕು ಹಾಕಿಕೊಂಡೇ ಇರುತ್ತದೆ. ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿರುವ ನಮ್ಮ ಪ್ರಖ್ಯಾತ ಪಟ್ಟಣಗಳೆಲ್ಲವೂ, ಅದು ಮಸೀದಿಯಿರಲಿ, ಮಂದಿರವಿರಲಿ, ದರ್ಗಾ ಅಥವಾ ಚರ್ಚ್ ಇರಲಿ, ಇಲ್ಲವೇ ಬೌದ್ಧ ವಿಹಾರ ಯಾ ಜೈನ ಮಂದಿರ... ಹೀಗೆ ಒಂದಿಲ್ಲೊಂದು ಪವಿತ್ರ ಕ್ಷೇತ್ರದ ಸುತ್ತಮುತ್ತ ವ್ಯಾಪಿಸಿಕೊಂಡಿರುತ್ತದೆ. ಇದೇ ಕಾರಣಕ್ಕೆ ನಮ್ಮ ದೇಶವೊಂದು ಪುಣ್ಯ ಭೂಮಿ ಎಂದೇ ಪರಿಗಣಿಸಲ್ಪಟ್ಟಿರುವುದು. ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ವೈಶಿಷ್ಟ್ಯಗಳಿವೆ.

ಅವುಗಳಲ್ಲೊಂದು ಪ್ರಮುಖವಾದದ್ದು ಗಂಗಾ ನದಿ. ಹಿಂದೂಗಳೆಲ್ಲರೂ ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ತಮ್ಮ ಹಿರಿಯರ ಚಿತಾಭಸ್ಮ ವಿಸರ್ಜನೆಯನ್ನು ಗಂಗಾ ನದಿಯಲ್ಲಿ ಮಾಡಿದ್ದಾರೆ ಮಾತ್ರವೇ ಅಲ್ಲ, ತಮ್ಮ ಚಿತಾಭಸ್ಮವೂ ಈ ಪುಣ್ಯ ನದಿಯಲ್ಲೇ ವಿಸರ್ಜಿಸಬೇಕೆಂಬ ಬಯಕೆ ಹೊಂದಿದ್ದಾರೆ. ಇಲ್ಲಿ ದೇಹ ತ್ಯಾಗ ಮಾಡಿದ ಯಾರೇ ಆದರೂ, ಪಾಪ ಮುಕ್ತರಾಗಿ ಸ್ವರ್ಗ ಸೇರುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಈ ಗಂಗಾ ಮಾತೆಯ ಪಾವಿತ್ರ್ಯ ಅಷ್ಟು ಮೌಲ್ಯ ಹೊಂದಿದೆ.
PTI


ಈಗ ದಕ್ಷಿಣ ಭಾಗಕ್ಕೆ ಬರೋಣ. ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿಗೆ ಹರಿಯುವ ಕಾವೇರಿ ನದಿಯನ್ನೂ ಗಂಗೆಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಕಾವೇರಿ ನದಿಗಿರುವ ವಡವಾರು ಎಂಬ ಉಪನದಿಯೊಂದನ್ನು ತಂಜಾವೂರು ಜನತೆ ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತಾರೆ. ಈ ನದಿ ತಟದಲ್ಲಿರುವ ಸ್ಮಶಾನವನ್ನು ಅವರು ವಾರಣಾಸಿ (ಕಾಶಿ)ಗೆ ಸಮಾನ ಎಂದೇ ಭಾವಿಸುತ್ತಾರೆ. ಈ ಐತಿಹಾಸಿಕ ನಗರಿ ತಂಜಾವೂರು ಮತ್ತು ಸುತ್ತಮುತ್ತಲ ಊರಿನ ಜನರು ವಡವಾರು ನದಿ ತೀರದಲ್ಲಿರುವ ರಾಜಾ ಗೋರಿ ಎಂದು ಕರೆಸಿಕೊಳ್ಳುವ ಸ್ಮಶಾನಭೂಮಿಯನ್ನು ಕಾಶಿಯಂತಹ ಪುಣ್ಯ ಕ್ಷೇತ್ರ ಎಂದು ಪರಿಗಣಿಸುತ್ತಾರೆ.

ತಮ್ಮ ಹಿರಿಯರಲ್ಲಿ ಹೆಚ್ಚಿನವರು, ತಮ್ಮ ಕಾಲವಾದ ನಂತರ ರಾಜಾಗೋರಿಯಲ್ಲೇ ನಮ್ಮನ್ನು ಮಣ್ಣು ಮಾಡಬೇಕು ಮತ್ತು ವಡವಾರು ನದಿಯಲ್ಲೇ ಅಸ್ಥಿ ವಿಸರ್ಜನೆ ಮಾಡಬೇಕು ಅಂತ ತಾಕೀತು ಮಾಡಿದ್ದರು ಎಂದು ಅನೇಕರು ಹೇಳುವುದನ್ನು ನಾವು ಕೇಳಿದ್ದೇವೆ.

webdunia
PTI
ರಾಜಾಗೋರಿ ಎಂಬ ಸ್ಮಶಾನ ಭೂಮಿಯು ತಂಜಾವೂರು ಪಟ್ಟಣದ ಮೂಲೆಯಲ್ಲಿದೆ. ತುಂಬಾ ವಿಶಾಲವಾದದ್ದು ಮತ್ತು ಏಕಕಾಲದಲ್ಲಿ 20 ಪಾರ್ಥಿವ ಶರೀರಗಳ ಅಂತ್ಯಕ್ರಿಯೆಯನ್ನು ಇಲ್ಲಿ ನೆರವೇರಿಸಬಹುದು. ಇಲ್ಲಿ ಅಷ್ಟೊಂದು ಶೆಡ್ಡುಗಳಿವೆ. ಅಂತ್ಯಸಂಸ್ಕಾರ ಮಾಡುವ ಶೆಡ್ಡುಗಳ ಪಕ್ಕದಲ್ಲಿ ಮರಾಠಾ ರಾಜಕುಟುಂಬಿಕರಿಗೆ, ನಾಯಕ್ ಕುಟುಂಬಿಕರಿಗೆ ಮತ್ತು ಬ್ರಾಹ್ಮಣರಿಗೆ ಪ್ರತ್ಯೇಕ ಶೆಡ್ಡುಗಳಿವೆ. ಜಾತಿ ಭೇದವು ತಮಿಳುನಾಡಿನಲ್ಲಿ ಹಳೆಯ ಕಾಲದ್ದಾಗಿದ್ದರೂ, ರಾಜಾ ಗೋರಿಯು ಪುರಾತನ ಕಾಲದಿಂದಲೂ ಇದ್ದ ಜಾತಿಪದ್ಧತಿಯ ಕುರುಹಾಗಿ ನಿಂತಿದೆ.

ಈ ಸ್ಮಶಾನದ ಪಕ್ಕದಲ್ಲೇ ಶಾಂತವಾಗಿ ಹರಿಯುತ್ತಿದೆ ಮಣಿಮುತಾರು ಎಂದೂ ಕರೆಯಲಾಗುವ ವಡವಾರು ನದಿ. ಅಂತ್ಯ ಸಂಸ್ಕಾರ ಮಾಡುವವರು ಈ ನದಿಯಲ್ಲಿ ಶುಚಿರ್ಭೂತರಾಗಬೇಕು. ಮೃತರ ಅಸ್ಥಿಯನ್ನು ಇಲ್ಲಿ ವಿಸರ್ಜಿಸುವುದರಿಂದ ಅವರ ಆತ್ಮವು ಪವಿತ್ರಗೊಂಡು, ಯಾವುದೇ ತೊಂದರೆಯಿಲ್ಲದೆ ಸ್ವರ್ಗ ಸೇರುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಹೊಸ ಪೀಳಿಗೆಯ ಮಂದಿ ಈ ನಂಬಿಕೆಗೆ ಅಷ್ಟೇನೂ ಬೆಲೆ ಕೊಡದಿದ್ದರೂ, ಹಿರಿಯರಂತೂ ಇದರಲ್ಲಿ ಪ್ರಬಲ ನಂಬಿಕೆ ಇರಿಸಿದ್ದಾರೆ ಮತ್ತು ತಮ್ಮ ಸಾವಿನ ಬಳಿಕ ತಾವೂ ಇಲ್ಲೇ ಮಣ್ಣಾಗಬೇಕೆಂಬ ಆಕಾಂಕ್ಷೆ ಹೊತ್ತಿದ್ದಾರೆ.

ಇಂಥ ನಂಬಿಕೆಗಳ ಬಗ್ಗೆ ನಿಮಗೇನನಿಸುತ್ತದೆ? ನಮಗೆ ಬರೆಯಿರಿ.

Share this Story:

Follow Webdunia kannada