Article Blind Faith Articles %e0%b2%aa%e0%b2%b5%e0%b2%be%e0%b2%a1 %e0%b2%aa%e0%b3%81%e0%b2%b0%e0%b3%81%e0%b2%b7 %e0%b2%b8%e0%b2%a4%e0%b3%8d%e0%b2%af %e0%b2%b8%e0%b2%be%e0%b2%af%e0%b2%bf%e0%b2%ac%e0%b2%be%e0%b2%ac%e0%b2%be 108030300038_1.htm

Daily Horoscope

Select Your Language

Notifications

webdunia
webdunia
webdunia
webdunia

ಪವಾಡ ಪುರುಷ - ಸತ್ಯ ಸಾಯಿಬಾಬಾ

ಪವಾಡ ಪುರುಷ - ಸತ್ಯ ಸಾಯಿಬಾಬಾ
ಗಾಳಿಯಲ್ಲಿ ಕೈಯಾಡಿಸಿ ಶಿವಲಿಂಗ ಸೃಷ್ಟಿಸುವುದು....
ಖಾಲಿ ಕೈಯಿಂದ ವಿಭೂತಿ ಸೃಷ್ಟಿ ಮಾಡುವುದು...
ಬಾಯಿಯಿಂದಲೇ ಶಿವಲಿಂಗ ಸೃಷ್ಟಿ...
ಶೂನ್ಯದಿಂದ ಚಿನ್ನದ ಸೊತ್ತು ಸೃಷ್ಟಿ...
IFM

ಈ ಎಲ್ಲಾ ಪವಾಡಗಳ ಬಗ್ಗೆ ಕೇಳಿದ್ದೀರಿ. ಹೌದು. ಇವರೇ ಭಗವಾನ್ ಸತ್ಯ ಸಾಯಿಬಾಬಾ. ನಂಬಿಕೆಯುಳ್ಳವರಿಗೆ ದೇವಸಮಾನ. ನಂಬದೇ ಇದ್ದವರಿಗೆ ಅರ್ಥವಾಗದ ಪವಾಡ ಪುರುಷ.

ಅನಂತಪುರದ ಪ್ರಶಾಂತಿ ನಿಲಯಂ ಆಶ್ರಮದಲ್ಲಿ ಇರುವ ಸತ್ಯ ಸಾಯಿಬಾಬಾ ಕುರಿತು ಜನರಲ್ಲಿ ಅವರದ್ದೇ ಆದ ನಂಬಿಕೆ ಮತ್ತು ಅಪನಂಬಿಕೆಗಳಿವೆ. ಅವುಗಳ ಮೇಲೊಂದು ಬೆಳಕು ಚೆಲ್ಲಲಾಗುತ್ತಿದೆ ಈ ಬಾರಿಯ 'ನೀವು ನಂಬುವಿರಾ' ಕಂತಿನಲ್ಲಿ.
webdunia
WD

ಸಾಯಿ ಬಾಬಾ ಮತ್ತು ಪವಾಡಗಳು ಒಂದೇ ಮುಖದ ನಾಣ್ಯಗಳು ಎಂದು ಸಾಯಿ ಭಕ್ತರು ಹೇಳುತ್ತಾರೆ. ಬಾಬಾ ಮಾಡುವ ಪವಾಡಗಳು ಭಕ್ತರನ್ನು ಉದ್ಧಾರ ಮಾಡಿವೆ ಎಂದು ಹೇಳುತ್ತಾರೆ. ಭಕ್ತರ ನೋವುಗಳನ್ನು ತಮಗೆ ವರ್ಗಾಯಿಸಿಕೊಳ್ಳುವ ಅಪಾರ ಅತೀಂದ್ರಿಯ ಶಕ್ತಿ ಅವರಿಗೆ ಇದೆ ಎಂಬುದು ಹಲವರಲ್ಲಿ ನಂಬಿಕೆ ಇದೆ.

ಭಕ್ತರ ನೋವು ನಲಿವುಗಳಿಗೆ ಸ್ಪಂದಿಸಿರುವ ಸಾಯಿ ಬಾಬಾ, ಪವಾಡಗಳಿಂದ ಚಿನ್ನದ ಉಂಗುರ, ಬಳೆಗಳನ್ನು ಗಾಳಿಯಲ್ಲಿ ಕೈಯಾಡಿಸಿ ಭಕ್ತರಿಗೆ ನೀಡಿದ್ದಾರೆ.

webdunia
WD
ಸಾಯಿಬಾಬಾ ಪವಾಡಗಳಲ್ಲಿ ಅತಿ ಹೆಚ್ಚು ಖ್ಯಾತಿ ಗಳಿಸಿದ್ದು ಗಾಳಿಯಲ್ಲಿ ನಿಂತುಕೊಳ್ಳುವುದು, ಅದೃಶ್ಯವಾಗುವುದು, ಎರಡು ಕಡೆ ಕಾಣಿಸಿಕೊಳ್ಳುವುದು, ಗ್ರಾನೈಟನ್ನು ಕಲ್ಲು ಸಕ್ಕರೆಯಾಗಿ ಮಾಡುವುದು. ನೀರನ್ನೇ ಪಾನೀಯವನ್ನಾಗಿ ಪರಿವರ್ತಿಸಿದ ಉದಾಹರಣೆಗಳೂ ಇವೆ. ಇದೆಲ್ಲಕ್ಕಿಂತ ಮಿಗಿಲಾಗಿ ಒಂದೇ ಗಿಡದಲ್ಲಿ ತರಹೇವಾರಿ ಹಣ್ಣುಗಳು ಬಿಡುವಂತೆ ಮಾಡಿರುವುದು ಸಾಯಿಬಾಬಾ ಪವಾಡಗಳಿಗೆ ಸಾಕ್ಷಿ. ಇದಲ್ಲದೆ, ಕೇಳಿದ್ದನ್ನು ಸೃಷ್ಟಿಸಿ ಕೊಡುವುದು, ನಿಂತಲ್ಲೇ ಧರಿಸಿದ ನಿಲುವಂಗಿಯ ಬಣ್ಣ ಬದಲಾಗುವುದು, ಪವಾಡ ಸ್ಪರ್ಶದ ಚಿಕಿತ್ಸೆ... ಮುಂತಾಗಿ ಸಾಯಿಬಾಬಾ ಅವರ ಪವಾಡಗಳ ಪಟ್ಟಿಯೇ ಇದೆ.

ಸಾಯಿ ಬಾಬಾ ಟೀಕಾಕಾರರು ಕೂಡ ಸಾಕಷ್ಟಿದ್ದಾರೆ. ಈ ಪವಾಡಗಳಲ್ಲಿ ಯಾವುದೇ ಅತೀಂದ್ರಿಯ ಶಕ್ತಿಗಳಿಲ್ಲ ಅಂತ ಹೇಳುವವರೂ ಇದ್ದಾರೆ. ಸಾಯಿಬಾಬಾ ಮಾಡುವ ಎಲ್ಲ ಚಮತ್ಕಾರಗಳು ಕೇವಲ ಕೈಯಿಂದ ಮಾತ್ರ ಮಾಡಬಲ್ಲಂತಹವು ಎಂಬುದು ಅವರ ವಾದ.

ಮಾಧ್ಯಮಗಳಲ್ಲಿಯೂ ಸಾಯಿ ಬಾಬಾ ಪವಾಡಗಳು ಚರ್ಚೆಗೆ ಗ್ರಾಸವಾಗಿದ್ದವು. ಅಲ್ಲದೆ, ಕೆಲವು ಮಾಧ್ಯಮಗಳು ತಯಾರಿಸಿದ ಸೀಕ್ರೆಟ್ ಸ್ವಾಮಿ ಎಂಬ ಸಾಕ್ಷ್ಯ ಚಿತ್ರದಲ್ಲಿ ಕೈಚಳಕದ ಚಮತ್ಕಾರವನ್ನು ಮತ್ತೊಬ್ಬ ಸ್ವಾಮಿ ಮಾಡಿರುವುದನ್ನು ದಾಖಲಿಸಿದವು. ಕೈಚಳಕದಿಂದ ಬಾಯಿ ಮತ್ತು ಕೈಗಳಲ್ಲಿ ಶಿವಲಿಂಗ ಸೃಷ್ಟಿ ಮಾಡಿ ತೋರಿಸಬಹುದು ಎಂದು ಅದರಲ್ಲಿ ವಿವರಿಸಲಾಯಿತು. ಅಂತಿಮವಾಗಿ ಕೆಲ ಮಾಧ್ಯಮಗಳು ಸಾಯಿಬಾಬಾ ನಿಜವಾಗಿಯೂ ಕೆಲ ಅತೀಂದ್ರಿಯ ಶಕ್ತಿಗಳನ್ನು ಹೊಂದಿದ್ದಾರೆ ಎಂದು ಒಪ್ಪಿಕೊಂಡವು.
webdunia
WD

ಅದು ಅಕ್ಟೋಬರ್ 2007 ತಿಂಗಳು. ಒಂದು ದಿನ ನನ್ನನ್ನು ನೀವು ಚಂದ್ರನ ಮೇಲೆ ನೋಡಬಹುದು ಎಂದು ಸಾಯಿಬಾಬಾ ಎಂದು ಘೋಷಿಸಿದ್ದೇ ತಡ, ಆ ದಿನ ವೈಟ್‌ಫೀಲ್ಡ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಸಾಯಿ ಬಾಬಾ ಚಂದ್ರಯಾನ ನೋಡುವುದಕ್ಕೆ ಆಗಮಿಸಿದ್ದರು. ಆದರೆ ಆ ದಿನ ಚಂದ್ರನ ಸುತ್ತ ಮುಸುಕಿದ ಮೋಡಗಳು ಸಾಯಿ ಚಂದ್ರಯಾನವನ್ನು ತಡೆದವು. ಆ ದಿನ ಮಾಡಿದ ಆ ಘೋಷಣೆ ಪ್ರಚಾರ ತಂತ್ರವೇ ವಿನಃ ಮತ್ತೇನೂ ಅಲ್ಲ ಎಂದು ಬುದ್ಧಿಜೀವಿಗಳು ಟೀಕಿಸಿದರು.

ಅಂತೂ ಬೆಂಬಲ-ವಿವಾದ ಎರಡನ್ನೂ ಒಟ್ಟಿಗೆ ಪಡೆದ ಸಾಯಿಬಾಬಾ ಹೇಳುವುದು ಒಂದೇ ಮಾತು. "ನಾನು ದೇವರು, ನೀವೂ ದೇವರುಗಳೇ. ನನಗೆ ನನ್ನ ದೈವತ್ವದ ಅರಿವು ಇದೆ. ಅದು ನಿಮ್ಮಲ್ಲಿ ಇಲ್ಲ ಅಷ್ಟೇ ವ್ಯತ್ಯಾಸ." ಇದು ತಮ್ಮ ದೈವತ್ವವನ್ನು, ವ್ಯಕ್ತಿತ್ವವನ್ನು ಪ್ರಶ್ನಿಸುವವರಿಗೆಲ್ಲಾ ಸಾಯಿಬಾಬಾ ನೀಡುವ ಉತ್ತರ.

Share this Story:

Follow Webdunia kannada