ನಾಗ ಮಂದಿರದಲ್ಲಿ ಅದರದ್ದೇ ಆದ ನಂಬಿಕೆಯ ವಾತಾವರಣವೊಂದು ಸೃಷ್ಟಿಯಾಯಿತು ಮತ್ತು ಜನ ದೂರದೂರುಗಳಿಂದ ಇಲ್ಲಿಗೆ ಬರಲಾರಂಭಿಸಿದರು. ವ್ಯವಹಾರದಲ್ಲಿ ಯಶಸ್ಸು, ಸಂಪತ್ಸಮೃದ್ಧಿ ಮತ್ತು ಸಂತಾನಭಾಗ್ಯಕ್ಕಾಗಿ ನಾಗದೇವತೆಯ ಮೊರೆ ಹೋಗಲಾರಂಭಿಸಿದರು.ಈ ದೇಶದಲ್ಲಿ ನಾವು ಇಂತಹ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಂಥಹ ಕಥೆಗಳೆಲ್ಲಾ, ವಿಶೇಷವಾಗಿ ನಂಬಿಕೆ, ಧರ್ಮದೊಂದಿಗೆ ಬೆರೆತುಕೊಂಡಿರುವಾಗ ಸತ್ಯಾಂಶವೆಷ್ಟು ಎಂಬುದನ್ನು ಅರಿಯುವುದು ತ್ರಾಸದಾಯಕ ಸಂಗತಿ.
ಕೆಲವರು ಮುಗ್ಧ ಜನರ ಧಾರ್ಮಿಕ ಭಾವನೆಯನ್ನೇ ಬಂಡವಾಳವಾಗಿಟ್ಟುಕೊಂಡು ಹಣ ಮಾಡುತ್ತಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಹಲವು ಬಾರಿ ಸಾಮಾನ್ಯ ಕಥೆಯೊಂದನ್ನು ಅಸಾಮಾನ್ಯ ಎಂಬಂತೆ ರಂಗು ರಂಗಿನ ಕಥೆ ಕಟ್ಟಿ ಬಿಂಬಿಸಿದ ಉದಾಹರಣೆಗಳೂ ಇವೆ. ಇದು ಅವರವರ ನಂಬಿಕೆಯ ವಿಷಯವೂ ಹೌದು. ನೀವೇನಂತೀರಿ?