Article Blind Faith Articles %e0%b2%a4%e0%b3%8d%e0%b2%b0%e0%b2%bf%e0%b2%b6%e0%b3%82%e0%b2%b2 %e0%b2%ac%e0%b2%be%e0%b2%ac%e0%b2%be%e0%b2%a8%e0%b3%82 %e0%b2%ae%e0%b2%a4%e0%b3%8d%e0%b2%a4%e0%b3%81 %e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d%e0%b2%a8%e0%b3%82 107120300030_1.htm

Daily Horoscope

Select Your Language

Notifications

webdunia
webdunia
webdunia
webdunia

ತ್ರಿಶೂಲ ಬಾಬಾನೂ ಮತ್ತು ಆಪರೇಷನ್ನೂ

ತ್ರಿಶೂಲ
WD
ಇದು ನಮ್ಮ ಬ್ಲೆಡ್ ಬಾಬಾನ ಕರಾಮತ್ತಿನಂತೆ ಇದೆ. ಅವನು ಬ್ಲೆಡ್ ಬಳಸುತ್ತಿದ್ದ ಇವನು ತ್ರಿಶೂಲ ಬಳಸುತ್ತಾನೆ. ಕಳೆದ ವಾರ ಕೂಡ ಚೂರಿ ಚಿಕ್ಕಣ್ಣನ ಬಗ್ಗೆ ಬರೆದಿದ್ದೆವು. ಇವರಿಗೆ ಇಂತವರೇ ಸಿಗುತ್ತಿದ್ದಾರಲ್ಲ ಅಂದ್ಕೊಬೇಡಿ. ಲೋಕೊಭಿನ್ನ ರುಚಿ ಮುಂದಿನ ವಾರ ಬೇರೆಯದೇ ಕಥೆ ನಿಮಗಾಗಿ ಸಿಕ್ಕರೂ ಸಿಗಬಹುದು.

ಈ ಬಲೆ ಲಾಲ್ ಶರ್ಮಾನಿಗೆ ಇಂದೋರಿನಲ್ಲೆ ಒಂದು ದೇವಸ್ಥಾನ ಇದೆ. ಇವನ ಪ್ರಕಾರ ತನ್ನ ಮೈಯಲ್ಲಿ ಸಂತನ ಆತ್ಮ ಸೇರಿಕೊಳ್ಳುತ್ತದೆ ಅಂತೆ. ವಿಚಿತ್ರ ನೋಡಿ ಸ್ವಾಮಿ.. ಹೊರಗಿನವರು ಹೋಗಲಿ ಮನೆಯವರೇ ಇವನಿಗೆ ಬುರುಡೆ ಬಾಬಾ ಕಟ್ಟಿದ್ದಾರೆ. ಆದರೂ ಜನ ಬರ್ತಾರೆ ದುಡ್ಡು ಸುರಿತಾರೆ. ಏನೂ ಮಾಡಕ್ಕಾಗಲ್ಲ.

ತ್ರಿಶೂಲದಿಂದ ಆಪರೇಷನ್ ಮಾಡಿ ರೋಗ ಗುಣಪಡಿಸುತ್ತೆನೆ ಎನ್ನುವ ಬಾಬಾನ ಹತ್ತಿರ ನಾವು ಹೋದಾಗ ಅಲ್ಲಿನವರು ಹೇಳಿದ್ದು.... ಸ್ವಾಮಿ ಬಾಬಾನಿಗೆ ದೈವಿಕ ಶಕ್ತಿ ಬಹಳ ದೈವಿಕ ಶಕ್ತಿ ಉಪಯೋಗಿಸಿ ಮೊಳೆಗಳ ಮೇಲೆ ಕುತ್ಕೊಳ್ತಾನೆ ಹಾಗೇ ಹೀಗೆ ಎಂದು ಎಲ್ಲ ಹೇಳಿದ್ದರು. ನೋಡಿದರೆ ಗೊತ್ತಾಯಿತು. ಇವನು ಬುರುಡೆ ಆಸಾಮಿಗಿಂತ ಕಡಿಮೆಯವನು. ಮೊಳೆ ಮೇಲೆ ಕುತ್ಕೊಳ್ಳಬೇಕಾದರೆ ಜೀನ್ಸ್ ಪ್ಯಾಂಟ್ ಬೇಕು. ಅದ್ಯಾಕೆ ಕುರ್ತಾ ಬೇಡ ?

ಎರಡು ನಿಮಿಷ ಹಾಗೆ ಕುಳಿತಾದ ಮೇಲೆ ಅಲುಗಾಡುವುದಕ್ಕೆ ಬಾಬಾ ಶುರು ಮಾಡುತ್ತಾನೆ. ಮೊಳೆ ಒಳಗೆ ಹೋಯಿತು ಎಂದು ಅಲುಗಾಡುವುದಿಲ್ಲ. ಹಾಗೆ ಮೊಳೆ ಒಳಗೆ ಹೋಗಲಿಕ್ಕೆ ಸಾಧ್ಯವಿಲ್ಲ. ಎಕೆಂದರೆ ಜೀನ್ಸ್ ಹಾಕ್ಕೊಂಡಿರ್ತಾನಲ್ಲ.

webdunia
WD
ಮೊದಲು ಕೆಲ ಸಣ್ಣ ತಂತ್ರ ಮಾಡುತ್ತಾನೆ. ಆಮೇಲಿಂದ ಶುರು ನೋಡಿ ನೀಜವಾದ ಕರಾಮತ್ತು.

ಸರಿಯಾದ ಸಮಯಕ್ಕೆ ಒಬ್ಬ ಬಂದ ಅವನಿಗೆ ಕಿಡ್ನಿ ಪ್ರಾಬ್ಲಂ. ಬಾಬಾ ಕೂಡ ಹೊಸ ವರಸೆ ತೆಗೆದ ನಿಂಬೆ ಹಣ್ಣಿನಲ್ಲಿ ಗೋದಿ ಸಿಕ್ಕರೆ ಮಾತ್ರ ಆಪರೇಷನ್ ಮಾಡಲಾಗುವುದು ಎಂದು ಘೋಷಿಸಿದ. ಈಗ ಎಗರಿ ಬಿಳೋದು ನಮ್ಮ ಪಾಳಿ. ನಿಂಬೆಯಲ್ಲಿ ಗೋದಿ ಸಿಕ್ಕೆಬಿಟ್ಟಿತು. ಆಪರೇಷನ್ ಮಾಡಲು ಹಸಿರು ನಿಶಾನೆ ಸಿಕ್ಕ ಹಾಗೆ.

webdunia
WD
ಮೊದಲು ರೋಗಿಯ ಮೇಲೆ ಬೆಡ್ ಶೀಟ್ ಹಾಕುತ್ತಾನೆ. ಆಮೇಲೆ ಅಲ್ಲಿಯೇ ಕುಳಿತಿದ್ದ ಯುವತಿಗೆ ಬುಲಾವ್ ಹೋಗುತ್ತದೆ. ಹಾಕು ಅವನ ತಲೆಯಲ್ಲಿ ತ್ರಿಶೂಲ. ಪಾಪ ಹುಡುಗಿ ಏನೂ ಗೊತ್ತಾಗದೆ ರೋಗಿಯ ತಲೆಯಲ್ಲಿ ಅನಾಮತ್ತು ನಾಲ್ಕಿಂಚು ಚೂರಿ ಹಾಕುತ್ತಾಳೆ. ಆದರೂ ಒಂದು ಹನಿ ರಕ್ತ ಹೊರಗೆ ಬೀಳೊದು ಇಲ್ಲ. ಅಲ್ಲಿಗೆ ಆಪರೇಷನ್ ಕಿಡ್ನಿ ಫಿನಿಷ್.

ಇನ್ನೊಬ್ಬ ಬಂದ ಬಾಬಾ ಬಾಬಾ ಎಂದು ಹಲಬುತ್ತ, ಏನಪ್ಪಾ ನಿನ್ನ ಸಮಸ್ಯೆ ದೇವ್ರೂ ನನ್ನ ಕೋರ್ಟ್ ಕೇಸ್ ಅಂದ. ಬಾಬಾ ಕೆಲ ಕಾಳು ಎತ್ತಿ ಅವನ ಕೈಯಲ್ಲಿಟ್ಟು ಸರಿ ನಿನ್ನ ಸಮಸ್ಯೆ ಪರಿಹಾರ ಹೋಗೆಂದ. ಇಲ್ಲಿಗೆ ಬಾಬಾ ಜನತಾದರ್ಶನ ಕಂತು ಮುಗಿಯಿತು. ಈಗ ಬಾಬಾ ಮತ್ತೆ ಡಾಕ್ಟರ್ ರೂಪಕ್ಕೆ ತಿರುಗಿದ ಮತ್ತೊಬ್ಬ ರೋಗಿಗೆ ತ್ರಿಶೂಲಾಘಾತ ಅದೂ ಅದೇ ಹುಡುಗಿಯಿಂದ ಪದೇ ಪದೇ ಅವಳೆ ಏಕೆ ಬರ್ತಾಳೆ ? ಹೀಗೆ ಸಾಗಿದೆ ಬಾಬಾನ ಕಥೆಯಲ್ಲಿ ಕಂಡಿದ್ದು ನಾವಿಷ್ಟು ತಲೆಯಲ್ಲಿ ಅನಾಮತ್ತು ನಾಲ್ಕಿಂಚು ಚೂರಿ ಹೊಕ್ಕರೂ ನರಳದ ಸಾಯದ ಹೋಗಲಿ ಹನಿ ರಕ್ತ ಕೆಳಗೆ ಬೀಳದ ಇದೇನು ಪವಾಡವೊ, ನಾಟಕವೋ ಗೋತ್ತಿಲ್ಲ.

webdunia
WD
ದುಡ್ಡಿಗಾಗಿ ಇದೇಲ್ಲ ಮಾಡುವುದಿಲ್ಲ ಎಂದು ಹೇಳುವವ ಬಾಬಾ. ತನಗೆ ಮಾತ್ರ ಹೂ ಹಣ್ಣುಗಳನ್ನು ಬಂದವರು ಅರ್ಪಿಸಲೇ ಬೇಕು ಎನ್ನುವುದು ಕಡ್ಡಾಯ ನಿಯಮ ಮಾಡಿದ್ದಾನೆ.

ಬಂದವರಲ್ಲಿ ಕೆಲವರು ಬಾಬಾನ ಆಶಿರ್ವಾದದಿಂದ ಸುಖವಾಗಿದ್ದೆವೆ ಎನ್ನುತ್ತಾರೆ. ಈ ಮನುಷ್ಯ ಮಾತ್ರ ಪ್ರತಿದಿನ ಹೊಸತೊಂದು ಏನಾದರೂ ಮಾಡುತ್ತಲೇ ಇರುತ್ತಾನೆ. ಇಂತವರ ಜನರಿಗೆ ಏನು ಅನ್ನಿಸುತ್ತದೆ ?

Share this Story:

Follow Webdunia kannada