ಈ ಬಾರಿಯ ನಂಬಿಕೆಯ ಅಪನಂಬಿಕೆಯ ಪಯಣದಲ್ಲಿ ಸಿಕ್ಕಿದ್ದು ಕರೇಡಿ ಮಾತೆ. ಮಧ್ಯ ಪ್ರದೇಶದ ಶಾಜಪುರ್ ಜಿಲ್ಲೆಯಿಂದ ಕರೇಡಿ ಎಂಬ ಕುಗ್ರಾಮದ ಗ್ರಾಮದೇವತೆ ಈ ಕರೇಡಿ ಮಾತೆ. ಒಂದು ದಿನ ಈ ಮಾತೆಯ ಭುಜಜದಿಂದ ಹರಿದ ನೀರಿನ ಘಟನೆಯ ಸುತ್ತ ನಮ್ಮ ನಂಬಿಕೆ, ಅಪನಂಬಿಕೆ ಪಯಣ ಸಾಗುತ್ತದೆ. ದೇವಿಯ ಭುಜದಿಂದ ಚಿಮ್ಮಿಂದ ನೀರು, ಇಲ್ಲಿನವರಿಗೆ ಅಮೃತಪ್ರಾಯವಾಗಿದೆ.ಹರಿದ ನೀರುವ ಅಮೃತ ಸಮಾನ ಎಲ್ಲ ರೋಗಗಳಿಗೆ ರಾಮಬಾಣ ಎನ್ನುವುದು ಇದೀಗ ಸುತ್ತಲಿನ ಗ್ರಾಮಸ್ಥರಲ್ಲಿ ಹುಟ್ಟಿದ ನಂಬಿಕೆ.
ಕರೇಡಿ ಗ್ರಾಮ ದೇವತೆಯ ಮಂದಿರದತ್ತ ಸಾಗಿದ ನಮ್ಮ ಪಯಣ. ಮೊದಲು ನೋಡಿದ್ದು ಮಂದಿರದ ಪಕ್ಕದಲ್ಲಿನ ಕೊಳ. ಕಲ್ಲಿನ ಮೂರ್ತಿ ಭುಜದಲ್ಲಿ ಇರುವ ಸಣ್ಣ ತೂತು ಈ ನೀರು ಚಿಮ್ಮುವ ತಾಣ. ಮೊದಲೆರಡು ದಿನ ಸತತವಾಗಿ ತೂತಿನಲ್ಲಿ ಅವಿತ ನೀರು ತೆಗೆದ ಪೂಜಾರಿ ನಂತರ ಸತತ ಹರಿದು ಬರುವ ನೀರನ್ನು ನೋಡಿ ಇದು ದೇವಿಯ ಮಹಿಮೆ ಎಂದ. ಅಲ್ಲಿಂದ ಶುರುಗೊಂಡ ಬಾಯಿ ಮಾತಿನ ಪ್ರಚಾರ ಇಂದು ಸಾವಿರಾರು ಜನರನ್ನು ಕರೇಡಿಗೆ ಬರುವಂತೆ ಮಾಡಿದೆ.
ಗ್ರಾಮದ ಸರಪಂಚ್ ಇಂದರ್ ಸಿಂಗ್ ಪ್ರಕಾರ ಮೂರ್ತಿಗೆ ಮಹಾಭಾರತ ಕಾಲದ ಇತಿಹಾಸವಿದೆ. ದಾನಶೂರ ಕರ್ಣನ ಆರಾಧ್ಯದೇವತೆ ಕರ್ಣಾವತಿಯೇ ಇಂದಿನ ಕರೇಡಿ ಮಾತೆ ಎಂದು ವಾದಿಸುತ್ತಾರೆ. ಶಬ್ಧ ವ್ಯುತ್ಪತ್ತಿ ಗಮನಿಸಿದಲ್ಲಿ ಕರೇಡಿ ಮೊದಲು ಕರ್ಣಾವತಿಯಾಗಿರುವುದನ್ನು ತಳ್ಳಿ ಹಾಕುವಂತಿಲ್ಲ. ಕರ್ಣಾವತಿ, ದಾನಶೂರ ಕರ್ಣನಿಗೆ ದಿನನಿತ್ಯ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ನೀಡುತ್ತಿದ್ದಳು. ಆ ಚಿನ್ನವನ್ನು ಕರ್ಣ ಬಡವರಿಗೆ ದೀನರಿಗೆ ದಾನ ಮಾಡುತ್ತಿದ್ದ ಎಂಬ ಪ್ರತೀತಿ ಇದೆ. ಕರ್ಣಾವತಿ ವಿಕ್ರಮಾದಿತ್ಯ ಮಹಾರಾಜನ ಆರಾಧ್ಯ ದೇವತೆಯಾಗಿದ್ದಳು ಎನ್ನುವುದು ಗ್ರಾಮಸ್ಥರ ನಂಬಿಕೆ.ಮೂರ್ತಿಯ ಪ್ರಾಚೀನತೆ ಅದರ ಐತಿಹ್ಯ ಏನೇ ಇದ್ದರೂ ಈಗ ಆಗಿರುವ ಘಟನೆಗಳತ್ತ ಮಾತ್ರ ಗಮನ ಹರಿಸಿದರೂ ವಿಚಿತ್ರ ಎನಿಸುತ್ತದೆ. ಕಲ್ಲಿನಲ್ಲಿ ನೀರು ಬರುವುದು ಕೆಲ ಬಾರಿ ಸಹಜ. ಕಲ್ಲಿನಲ್ಲಿ ಸಣ್ಣ ಬಿರುಕು ಇದ್ದು. ಕಲ್ಲಿನಲ್ಲಿ ಮೇಲ್ಪದರದಲ್ಲಿ ನೀರು ಸಂಗ್ರಹವಾಗಿದ್ದರೆ ಗುರುತ್ವಾಕರ್ಷಣೆ ನಿಯಮದಂತೆ ನೀರು ಕೆಳಮುಖವಾಗಿ ಸಾಗಬೇಕು.
ಇಲ್ಲಿ ಮಾತ್ರ ವಿಚಿತ್ರ ಪಕ್ಕದಲ್ಲಿ ಕೊಳ ಇದೆ ಆದರೆ ಮೂರ್ತಿಗೆ ಸಮಾನಾಂತರವಾಗಿದೆ. ಹೀಗಿರುವಾಗ ನೀರಿನ ಮೂಲ ಯಾವುದು ಎಂದು ವೈಜ್ಞಾನಿಕವಾಗಿ ಪತ್ತೆ ಹಚ್ಚುವುದು ತುಸು ಕಷ್ಟವೇ. ಎರಡನೆಯದಾಗಿ ಸಣ್ಣ ಬಿರುಕು ಇದ್ದರೂ ಸಂಪ್ರದಾಯದ ಪ್ರಕಾರ ಮೂರ್ತಿ ಪೂಜೆ ಮಾಡುವಂತಿಲ್ಲ.
ಅಲ್ಲಿನ ಕೆಲವರ ಪ್ರಕಾರ ಮೂರ್ತಿಯು ಆಳವಾದ ಭೂಮಿಯಲ್ಲಿ ಇರುವುದರಿಂದ ಮತ್ತು ಭೌಗೋಳಿಕ ಕಾರಣದ ಕಾರಣ ನೀರು ಹರಿದು ಬರುತ್ತಿದೆ ಎಂದು ವಾದಿಸುತ್ತಾರೆ. ವಾದ ವಿವಾದಗಳು ಏನೇ ಲೇಖನದ ಕುರಿತ ನಿಮ್ಮ ಅನಿಸಿಕೆ ಸದಾ ಸ್ವಾಗತ.