ಈ ಸರಣಿ ಅಪಘಾತಗಳಿಗೆ ನೂರಾರು ಜನರು ಜೀವ ಬಿಡಲು ಪ್ರಾರಂಭಿಸಿದರು. ಟ್ರ್ಯಾಕಿನ ಮೇಲೆ ಜೀವ ಬಿಟ್ಟ ತಾಂತ್ಯಾ. ಅಲ್ಲಿಯೇ ದೆವ್ವದ ರೂಪದಲ್ಲಿ ಇರಲು ಪ್ರಾರಂಭಿಸಿ ಹೋಗಿ ಬರುವ ರೈಲುಗಳು ಅಪಘಾತಕ್ಕೆ ಈಡಾಗುವಂತೆ ಮಾಡಲು ಪ್ರಾರಂಭಿಸಿದ ಎಂದು ಅಲ್ಲಿನವರಲ್ಲಿ ಒಂದು ನಂಬಿಕೆಯೋ, ಮೂಢನಂಬಿಕೆಯೋ ಬೆಳೆಯಲು ಪ್ರಾರಂಭಿಸಿತು. ರೈಲ್ವೆ ಇಲಾಖೆ ಸಿಬ್ಬಂದಿಯ ಅಭಿಪ್ರಾಯವೇ ಬೇರೆ. ಪಾತಾಳ ಪಾನಿ-ಕಾಲಕೂಡ್ ರೈಲು ಮಾರ್ಗ ಕಡಿದಾದ ಕಣಿವೆಯಲ್ಲಿ ಇರುವ ಕಾರಣ ರೈಲಿನ ವೇಗ ನಿಯಂತ್ರಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಟ್ರ್ಯಾಕ್ ಬದಲಾಯಿಸಬೇಕಾಯಿತು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಟ್ರ್ಯಾಕ್ ತಾಂತ್ಯಾನ ಗುಡಿಯ ಹತ್ತಿರವೇ ಸಾಗಿ ಹೋಯಿತು.
ಗುಡಿ ಹತ್ತಿರ ಇರುವುದರಿಂದ ರೈಲಿನ ಚಾಲಕರ ಸಮೇತ ಎಲ್ಲರೂ ನಮಸ್ಕರಿಸುತ್ತಾರೆ ಅಷ್ಟೇ ಎಂದು ಹೇಳಿತು.
ಅಭಿಪ್ರಾಯ ಏನೇ ಇರಲಿ. ರೈಲು ಇಲ್ಲಿ ನಿಲ್ಲುತ್ತದೆ ಮತ್ತು ರೈಲಿನ ಚಾಲಕರು ತಾಂತ್ಯಾನಿಗೆ ನಮಸ್ಕರಿಸುತ್ತಾರೆ ಅಷ್ಟೇ. ಕಾಲಕೂಡ- ಪಾತಾಳ ಪಾನಿ ಮಾರ್ಗವಾಗಿ ಪಯಣಿಸುವ ಎಲ್ಲರಿಗೂ ಇದು ಗೊತ್ತಿರುವ ವಿಚಾರ. ಸ್ಥಳೀಯರ ಪ್ರಕಾರ ಇಲ್ಲಿ ನಿಲ್ಲದ ರೈಲು ಅಪಘಾತಕ್ಕೆ ಈಡಾಗುವುದು ಖಚಿತ. ಈ ನಂಬಿಕೆಗೆ ನಿಮ್ಮ ಅನಿಸಿಕೆಗೆ ನಮ್ಮ ಸ್ವಾಗತವಿದೆ.