Publish Date: Mon, 27 Feb 2017 (09:33 IST)
Updated Date: Mon, 27 Feb 2017 (09:38 IST)
ಬೆಂಗಳೂರು: ದೇವಾಲಯಕ್ಕೆ ಹೋದರೆ ಭಕ್ತಿಯಿಂದ ಮೂರು ಸುತ್ತು ನಮಸ್ಕರಿಸಿ ಪ್ರಸಾದ ಸ್ವೀಕರಿಸಿದ ಮೇಲೆ ಅಲ್ಲೇ ಮಂಟಪದ ಮೇಲೋ, ನೆಲದ ಮೇಲೋ ಅರೆಕ್ಷಣ ಕೂರುತ್ತೇವೆ. ಯಾಕೆ?
ಎಲ್ಲರೂ ಮಾಡುತ್ತೇವೆಂದು ನಾವೂ ಹಿಂಬಾಲಿಸುತ್ತೇವೆ. ಇದಕ್ಕೆ ಕಾರಣವಿದೆ. ಸ್ವಲ್ಪ ಹೊತ್ತಾದರೂ, ದೇವರ ಧ್ಯಾನ ಮಾಡುತ್ತಾ ಕೂರಬೇಕೆಂಬ ಕಾರಣಕ್ಕೆ ಅರೆಕ್ಷಣವಾದರೂ ದೇವಾಲಯದಲ್ಲಿ ಕೂರಬೇಕು ಎನ್ನಲಾಗುತ್ತದೆ. ಆದರೆ ನಾವು ಹೆಚ್ಚಿನವರು ಹೀಗೆ ಕೂತ ಮೇಲೆ ದೇವರ ಧ್ಯಾನ ಮಾಡುವುದಿಲ್ಲ.
ಹರಟೆ ಹೊಡೆಯುತ್ತಾ ಕಾಲ ಹರಣ ಮಾಡುತ್ತೇವೆ. ದೇವರಿಗೆ ನಮಸ್ಕರಿಸಿದ ಮೇಲೆ ಅಲ್ಲಿಯೇ ನೆಲದಲ್ಲಿ ಕೂತು ದೇವರ ಧ್ಯಾನ ಮಾಡಬೇಕು ಎನ್ನುವುದು ಇದರ ಹಿಂದಿರುವ ಉದ್ದೇಶ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.