Webdunia - Bharat's app for daily news and videos

Install App

ಹುಟ್ಟಿದ ನಕ್ಷತ್ರದಿಂದ ಸ್ವಭಾವ ನಿರ್ಧಾರ

Webdunia
ಸೋಮವಾರ, 6 ಮಾರ್ಚ್ 2017 (10:06 IST)
ಬೆಂಗಳೂರು: ನೀವು ಹೇಗೆ, ನಿಮ್ಮ ಸ್ವಭಾವ ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ನಿಮ್ಮ ಹುಟ್ಟಿದ ನಕ್ಷತ್ರ ಗೊತ್ತಿದ್ದರೆ ಸಾಕು. ನಿಮ್ಮ ಗುಣ ನಡತೆ ಹೇಗೆ ಎಂದು ಹೇಳಬಹುದು.


ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಜಾಸ್ತಿ

ಭರಣಿ- ಸ್ವಾರ್ಥಿ,ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಸಮರ್ಥರು.

ಕೃತ್ತಿಕಾ-ಸಾಹಸಿಗಳು, ಆಕ್ರಮಣಶೀಲತೆ, ಸ್ವ ಕೇಂದ್ರಿತ, ಅಹಂಕಾರಿಗಳು. ಶಸ್ತ್ರಾಸ್ತ್ರ, ಅಗ್ನಿ,  ವಾಹನ ಭಯ.

ರೋಹಿಣಿ- ಪ್ರಸನ್ನ ಭಾವ, ಕಲೆಯಲ್ಲಿ ಆಸಕ್ತಿ, ಉತ್ತಮ ಅಭಿರುಚಿಗಳಿರುತ್ತವೆ.

ಮೃಗಶಿರಾ- ಬುದ್ಧಿವಂತರು ಹಾಗೂ ಭೋಗಪ್ರಿಯರು.

ಆರ್ದ್ರಾ- ಸಂಶಯ ಪಿಶಾಚಿಗಳು, ದ್ವಂಧ ಮನಸ್ಥಿತಿಯವರು.

ಪುನವರ್ಸು- ಆದರ್ಶವಾದಿ, ಆಧ್ಯಾತ್ಮದಲ್ಲಿ ಆಸಕ್ತಿ, ಎಲ್ಲರ ಸಹಯೋಗದೊಂದಿಗೆ ಶಾಂತ ಮನಸ್ಥಿತಿ ಹೊಂದಿರುತ್ತಾರೆ.

ಆಶ್ಲೇಷಾ- ಜಿದ್ದು, ಹಟ ಜಾಸ್ತಿ. ವಿಶ್ವಾಸ ಎಂಬುದು ದೂರದ ಮಾತು. ತಮಗೆ ತಾವೇ ತೊಂದರೆ ತಂದುಕೊಳ್ಳುವರು.

ಮಘಾ- ಸ್ವಾಭಿಮಾನಿ, ಸ್ವಾವಲಂಬಿ, ಮಹತ್ವಾಕಾಂಕ್ಷಿ, ನಾಯಕತ್ವದ ಗುಣದವರು.

ಪೂರ್ವ- ಶ್ರದ್ಧೆ, ಲಲಿತ ಕಲೆಗಳಲ್ಲಿ ಆಸಕ್ತಿ, ರಸಿಕತನ ಹಾಗೂ ಶೋಕಿತನ ಜಾಸ್ತಿ.

ಉತ್ತರಾ- ಸಮತೋಲನ ಮನೋಭಾವ. ವ್ಯವಹಾರ ಚತುರರು ಹಾಗೂ ಪರಿಶ್ರಮಿಗಳು.

ಹಸ್ತಾ- ಕಲ್ಪನಾಶೀಲ, ಸಂವೇದನಾಶೀಲ, ಸುಖೀ ಹಾಗೂ ಸಮಾಧಾನಚಿತ್ತರು. ಒಳ್ಳೆಯ ಹಾದಿಯಲ್ಲಿ ನಡೆಯುತ್ತಾರೆ.

ಚಿತ್ರಾ- ಬರೆಯುವುದು, ಓದುವುದರಲ್ಲಿ ಮುಂದು. ಪ್ರೀತಿಯಲ್ಲಿ ಬೀಳುವುದು ಬೇಗ.

ಸ್ವಾತಿ- ಸಮತೋಲನ ಪ್ರಕೃತಿ,ಮನಸ್ಸಿನ ಮೇಲೆ ನಿಯಂತ್ರಣ ಹಾಗೂ ದುಃಖ ತಾಳಬಲ್ಲರು.

ವಿಶಾಖ- ಸ್ವಾರ್ಥಿ, ಜಿದ್ದಿನ ಸ್ವಭಾವ. ನೆವ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ನಿಪುಣರು.

ಅನುರಾಧ-ಕುಟುಂಬದ ಮೇಲೆ ಪ್ರೀತಿ. ಸನ್ಮಾರ್ಗದಲ್ಲಿ ನಡೆಯುತ್ತಾರೆ. ಶೃಂಗಾರ ಜಾಸ್ತಿ.

ಜ್ಯೇಷ್ಠ- ನಿರ್ಮಲ ಸ್ವಭಾವ, ಶತ್ರುಗಳನ್ನು ಮರೆಯಲಾರರು. ಸೇಡು ತೀರಿಸಿಕೊಳ್ಳುವ ಜಾಯಮಾನ ಜಾಸ್ತಿ.

ಮೂಲ- ಪ್ರಾರಂಭಿಕ ಜೀವನ ಕಷ್ಟ. ಆದರೂ ಕಲಾ ಪ್ರೇಮಿಗಳು. ರಾಜಕಾರಣದಲ್ಲೂ ಯಶಸ್ಸು ಸಿಗುತ್ತದೆ.

ಪೂರ್ವಾಷಢ- ಶಾಂತ, ನಿಧಾನಗತಿಯ,ಸಮಚಿತ್ತರು. ಐಶ್ವರ್ಯ, ಶ್ರೀಮಂತಿಕೆ ಬಯಕೆ ಜಾಸ್ತಿ.

ಉತ್ತಾರಾಷಾಢ- ವಿನಯಶೀಲತ್ವ, ಬುದ್ಧಿವಂತಿಕೆ, ಆಧ್ಯಾತ್ಮದಲ್ಲಿ ಅಪಾರ ನಂಬಿಕೆ.

ಶ್ರವಣ- ಶ್ರದ್ಧೆ, ಪರೋಪಕಾರಿ, ಕೃತಜ್ಞತೆ ಹೊಂದಿರುತ್ತಾರೆ.

ಧನಿಷ್ಠ- ಅಹಂಕಾರಿಗಳು, ಕಟು ಮಾತಿನವರು, ಸಂಯಮ ಕಡಿಮೆ.

ಶತಭಿಷಾ- ರಸಿಕತನ ಹೆಚ್ಚು. ಚಟಗಳಿಗೆ ಬೀಳುತ್ತಾರೆ. ಸಮಯಪಾಲನೆ ಇಲ್ಲ.

ಪುಷ್ಯಾ- ದಯೆ, ಬುದ್ಧಿವಂತಿಕೆ ಜಾಸ್ತಿ. ದಾನಿಗಳು, ಬೇಗನೇ ಸಮಾಜದಲ್ಲಿ ಗುರುತಿಸುತ್ತಾರೆ.

ಪೂರ್ವಾಭದ್ರ- ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿ, ಕೆಲಸದಲ್ಲಿ ನಿಪುಣರು.

ಉತ್ತರಾಭದ್ರ-ಮೋಹಕ ವ್ಯಕ್ತಿತ್ವ, ಮಾತುಗಾರಿಕೆಯಲ್ಲಿ ಚತುರರು. ಚಂಚಲತೆ ಜಾಸ್ತಿ.

ರೇವತಿ- ಸತ್ಯ ಸಂಧರು, ವಿವೇಕಿಗಳು, ನಿರಪೇಕ್ಷಿಗಳು, ಸಮಾಜ ಕಲ್ಯಾಣದಲ್ಲಿ ಆಸಕ್ತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments