Select Your Language

Notifications

webdunia
webdunia
webdunia
webdunia

ಬಳುಕುವ ಸೊಂಟ ಬೇಕಾ? ಹೀಗೆ ಮಾಡಿ

ಬಳುಕುವ ಸೊಂಟ ಬೇಕಾ? ಹೀಗೆ ಮಾಡಿ
Bangalore , ಶುಕ್ರವಾರ, 31 ಮಾರ್ಚ್ 2017 (11:47 IST)
ಬೆಂಗಳೂರು: ಸಣ್ಣ ನಡು, ನಡೆಯುತ್ತಿದ್ದರೆ, ವೈಯಾರದಿಂದ ಬಳಕುತ್ತಿರಬೇಕು.. ಹೀಗೆ ಆಸೆ ಎಷ್ಟು ಜನರಿಗಿಲ್ಲ? ಹಾಗಿದ್ದರೆ ಸೊಂಟ ಚೆನ್ನಾಗಿರಬೇಕೆಂದರೆ ಏನು ತಿನ್ನಬೇಕು? ಇಲ್ಲಿದೆ ಟಿಪ್ಸ್.

 

ಮೊಟ್ಟೆ

ಬಳುಕುವ ನಡು ಬೇಕೆಂದರೆ ಮೊಟ್ಟೆ ಚೆನ್ನಾಗಿ ತಿನ್ನಿ. ಮೊಟ್ಟೆಯಲ್ಲಿ ಕೊಬ್ಬು ಕರಗಿಸುವ ಪ್ರೊಟೀನ್ ಇದೆ. ಬೆಳಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುವುದರಿಂದ ದಿನವಿಡೀ ಹೊಟ್ಟೆ ಹಸಿವು ನಿಯಂತ್ರಣದಲ್ಲಿರುತ್ತದೆ. ಬೇಕಾ ಬಿಟ್ಟಿ ತಿನ್ನುವುದನ್ನು ಬಿಡುತ್ತೀರಿ.

 
ಮಜ್ಜಿಗೆ

ಮಜ್ಜಿಗೆಯಲ್ಲಿರುವ ಪ್ರೊಟೀನ್ ಅಂಶ ಹೆಚ್ಚು ಹಸಿವಾಗುವುದ್ನು ತಪ್ಪಿಸುತ್ತದೆ. ಹದವಾಗಿ ತಿನ್ನುತ್ತಿದ್ದರೆ, ಅನಗತ್ಯ ಬೊಜ್ಜು ಬೆಳೆಯುವುದು ತಪ್ಪುತ್ತದೆ. ಅಲ್ಲದೆ, ಜೀರ್ಣಕ್ರಿಯೆಯೂ ಇದರಿಂದ ಸುಗಮವಾಗುತ್ತದೆ.

 
ಮೀನು

ಮೀನಿನಲ್ಲಿ ಒಮೆಗಾ ಫ್ಯಾಟಿ ಆಸಿಡ್ ಇದೆ. ಇದು ಕೊಬ್ಬು ಕರಗಿಸುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ ಮತ್ತು ಕೊಬ್ಬು ಕರಗಿಸುತ್ತದೆ.

 
ಸೇಬು

ಸೇಬು ದಿನಾ ತಿನ್ನುತ್ತಿದ್ದರೆ, ವೈದ್ಯರನ್ನು ದೂರವಿಡಬಹುದು ಎಂಬ ಗಾದೆಯೇ ಇದೆ. ಆಪಲ್ ನಲ್ಲಿ ನಾರಿನಂಶ ಮತ್ತು ನೈಸರ್ಗಿಕವಾಗಿ ಕೊಬ್ಬು ಕರಗಿಸುವ ಅಂಶವಿದೆ. ಇಷ್ಟಿದ್ದರೆ, ಸೊಂಟದ ಸುತ್ತ ಬೇಡದ ಬೊಜ್ಜು ಬೆಳೆಯುವುದು ತಪ್ಪುತ್ತದೆ.

 
ನೀರು

ಸಾಕಷ್ಟು ನೀರು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಸೌಂದರ್ಯದ ವಿಷಯದಲ್ಲೂ ನೀರೇ ಪರಿಹಾರ. ಉತ್ತಮ ಚರ್ಮ ನಿಮ್ಮದಾಗಬೇಕಿದ್ದರೂ, ನೀರು ಕುಡಿಯಬೇಕು. ನೀರು ಸಾಕಷ್ಟು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಕರಗುತ್ತದೆ. ಇದು ಹಸಿವು ನೀಗಿಸುತ್ತದೆ. ಸೊಂಟ ಚೆನ್ನಾಗಿರಬೇಕಾದರೆ, ಪ್ರತಿ ದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ತಿನ್ನಲೇಬೇಕಾದ ತರಕಾರಿ