ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಬಾತ್ ಪೌಡರ್ ಬಳಸಿ

ಗುರುವಾರ, 6 ಡಿಸೆಂಬರ್ 2018 (07:24 IST)
ಬೆಂಗಳೂರು : ಹೆಣ್ಣು ಮಕ್ಕಳು ತಮ್ಮ ಸ್ಕೀನ್ ಹೊಳೆಯುವಂತೆ ಮಾಡಲು ಅನೇಕ ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅವರ ಮುಖ ಹೊಳೆಯುವ ಬದಲು ಹಾಳಾಗುವುದೇ ಹೆಚ್ಚು. ಆದರಿಂದ ಮನೆಯಲ್ಲೇ ತಯಾರಿಸಿದ 100% ನೈಸರ್ಗಿಕವಾದ ಈ ಬಾತ್ ಪೌಡರ್ ನ್ನು ಬಳಸುವುದರಿಂದ ಯಾವುದೇ ಎಫೆಕ್ಟ್ ಆಗದೇ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.


ಮೊದಲಿಗೆ ಹುರಿದು ಪುಡಿ ಮಾಡಿದ ಉದ್ದಿನ ಬೇಳೆ ಪೌಡರ್ 50 ಗ್ರಾಂ, ಹುರಿದು ಪುಡಿ ಮಾಡಿದ ಅಗಸೆ ಬೀಜ ಪೌಡರ್ 50 ಗ್ರಾಂ, ಹುರಿದು ಪುಡಿ ಮಾಡಿದ ಪಿಪ್ಪಲಿ ಪೌಡರ್ 50 ಗ್ರಾಂ, ಗೋಧಿಹಿಟ್ಟು 50ಗ್ರಾಂ ಇವಿಷ್ಟನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಈ ಮಿಕ್ಸ್ ಪುಡಿಯನ್ನು ತೆಗೆದುಕೊಂಡು ಹಸುವಿನ ತುಪ್ಪದ ಜೊತೆ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ದೇಹಕ್ಕೆ ಹಚ್ಚಿಕೊಳ್ಳಿ. ನಂತರ ಅರ್ಧಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನಮಾಡಿ.


ಆದರೆ ಸ್ನಾನಕ್ಕೆ ಸೋಪ್ ಬದಲು ಕಡಲೆಹಿಟ್ಟನ್ನು ಬಳಸಿ. ಕಡಲೆಹಿಟ್ಟು ಬಳಸಲು ಇಷ್ಟವಿಲ್ಲದವರು ಮೈಲ್ಡ್ ಗ್ರೇಡ್ ಒನ್ ಸೋಪ್ ಮಾತ್ರವೇ ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನರಹುಲಿ(ನೀರುಳಿ) ಸಮಸ್ಯೆಗೆ ಇಲ್ಲಿದೆ ಮನೆಮದ್ದು