Webdunia - Bharat's app for daily news and videos

Install App

ಸೌಂದರ್ಯ ವೃದ್ಧಿಗೆ ಬಳಸಿ ಗುಲಾಬಿ

Webdunia
ಶುಕ್ರವಾರ, 10 ಸೆಪ್ಟಂಬರ್ 2021 (14:26 IST)
ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು ತಂದುಕೊಡಬಲ್ಲವು ಎಂಬುದು ನಿಮಗೆ ಗೊತ್ತೇ?

ನಿಸ್ತೇಜ ಮುಖಕ್ಕೆ ಕಳೆ ಕಟ್ಟುವ ಗುಲಾಬಿ ಹೂವಿನ ಎಸಳುಗಳು ಮುಖದ ಮೊಡವೆಗಳನ್ನೂ ನಿವಾರಿಸುತ್ತವೆ. ಗುಲಾಬಿಯ ಹತ್ತು ಎಸಳಿಗೆ ಹಸಿ ಹಾಲು ಹಾಗೂ ಜೇನು ಸೇರಿಸಿ ರುಬ್ಬಿ. ದಪ್ಪನೆಯ ಪೇಸ್ಟ್ ಅನ್ನು ಕುತ್ತಿಗೆ, ಮುಖಕ್ಕೆ ಲೇಪಿಸಿ. ಮೂವತ್ತು ನಿಮಿಷಗಳ ನಂತರ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ.

ಇದು ಮುಖಕ್ಕೆ ನೈಸರ್ಗಿಕ ಕಾಂತಿ ಕೊಟ್ಟು ತ್ವಚೆಯನ್ನು ಮೃದುವಾಗಿಸುತ್ತದೆ. ಸನ್ ಸ್ಕ್ರೀನ್ ನಂತೆಯೂ ಕಾರ್ಯ ನಿರ್ವಹಿಸುವ ಇದು ಮುಖ ಹಾಗೂ ಕುತ್ತಿಗೆಯ ಮೇಲಿನ ಸನ್ ಬರ್ನ್ ಸೇರಿದಂತೆ ಎಲ್ಲಾ ಕಲೆಗಳನ್ನು ತೆಗೆದು ಹಾಕುತ್ತದೆ.
ಗುಲಾಬಿ ಎಸಳನ್ನು ಸ್ನಾನದ ವೇಳೆ ನೀರಿಗೆ ಹಾಕುವುದರಿಂದ ಇಡೀ ದಿನ ನೀವು ತಾಜಾತನದಿಂದಿರುವಿರಿ, ರಾತ್ರಿ ವೇಳೆ ಸ್ನಾನ ಮಾಡಿದರೆ ಉತ್ತಮ ನಿದ್ದೆ ಪಡೆಯಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments