Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?

ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?
ಭೋಪಾಲ್ , ಶುಕ್ರವಾರ, 26 ಮೇ 2017 (18:27 IST)
ಮಳೆಗಾಲ ಆರಂಭವಾಯಿತೆಂದರೆ ಶೀತ, ಉಸಿರಾಟದ  ತೊಂದರೆ, ಚರ್ಮದ ಸೋಂಕು ಹೆಚ್ಚಾಗುತ್ತದೆ. ಋತುವಿನ ಬದಲಾವಣೆಗೆ ತಕ್ಕಂತೆ ಆಹಾರ, ಉಡುಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಹಾಗಾಗಿ ಮಳೆಗಾಲದಲ್ಲಿ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
 
* ಮಳೆಗಾಲದಲ್ಲಿ ಕೇವಲ ಶೀತವಲ್ಲದೆ ಚರ್ಮಕ್ಕೆ ಸೋಂಕು ತಗುಲುವುದು ಹೆಚ್ಚು. ಅದಕ್ಕಾಗಿ ಮುಖದ ಜತೆಗೆ ಕೈ, ಕಾಲು ಹಾಗೂ ಚರ್ಮದ ಆರೈಕೆಯೂ ಅತ್ಯಗತ್ಯ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಸ್ವಲ್ಪ ಆಲೀವ್‌ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಲಗಬೇಕು. ಇದು ದೇಹದಲ್ಲಿನ ಶಾಖವನ್ನು ಕಾಪಾಡುತ್ತದೆ.
 
* ಕಡಲೆಹಿಟ್ಟು ಸೋಪಿನಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಬೆಚ್ಚಗಿನ ಅಥವಾ ತಣ್ಣನೆಯ ನೀರಿನಲ್ಲಿ ತೊಳೆಯಬಹುದು. ರೋಗ ನಿರೋಧಕ ಶಕ್ತಿಗಾಗಿ ಕಡಲೆ ಹಿಟ್ಟಿನೊಂದಿಗೆ ತುಳಸಿ ದಳದ ಪುಡಿಯನ್ನು ಬಳಸಬಹುದು.
 
* ಮಳೆಯಲ್ಲಿ ನೆನೆದಾಗ ಸ್ನಾನ ಮಾಡುವ ಮುನ್ನ ಒಂದು ಮಗ್‌ ನೀರಿಗೆ ಕೊಂಚ ಆಲಿವ್ ಆಯಿಲ್‌ ಬೆರೆಸಿ ಬಳಸಬೇಕು. ಇದರಿಂದ ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.
 
* ಹೆಬ್ಬೆರಳು ಮತ್ತು ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಅರಿಶಿಣ ಬೆರೆಸಿ ಹಚ್ಚಿದರೆ ಶೀತ ಆಗುವುದಿಲ್ಲ. ಅಲ್ಲದೇ ಪಾದವು ಒಡೆಯುವುದಿಲ್ಲ. 
 
* ಜಾಜಿ ಮಲ್ಲಿಗೆ ಎಲೆ, ಚಿಟಿಕೆ ಅರಿಶಿಣ ಮತ್ತು ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಬೆರಳುಗಳ ಮಧ್ಯೆ ಆಗುವ ಕೆಸರು ಹುಣ್ಣು ಕಡಿಮೆಯಾಗುತ್ತದೆ. 
 
* ಪುದಿನ, ತುಳಸಿ ಎಳೆಯ ಪುಡಿಯನ್ನು ಕಡಲೆಹಿಟ್ಟಿನ ಜತೆ ಬೆರೆಸಿ ಬಳಸುವುದರಿಂದ ಸೊಳ್ಳೆ ಕಡಿತದಿಂದ ಆಗುವ ಗುಳ್ಳೆ ಮತ್ತು ಕಲೆ ಮಾಯವಾಗುತ್ತದೆ. 
 
* ಒಣ ಚರ್ಮವಿರುವವರು ಬಾದಾಮಿ ಪೇಸ್ಟ್ ಅಥವಾ ಜೇನುತುಪ್ಪವನ್ನು ಕ್ಲೇನ್ಸರ್ ಆಗಿ ಬಳಸಬಹುದು. ಇದರಿಂದ ಮುಖ ಒಣಗದಂತೆ ನೋಡಿಕೊಳ್ಳಬಹುದು.
 
* ಎಣ್ಣೆ ಚರ್ಮದವರಾಗಿದ್ದರೆ ಸೌತೆಕಾಯಿ ರಸಕ್ಕೆ ರೋಸ್ ವಾಟರ್ ನ್ನು ಮಿಶ್ರಣ ಮಾಡಿ ಟೋನರ್ ಆಗಿ ಬಳಸಿಕೊಳ್ಳಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿನ ಜತೆ ಇವೆರಡನ್ನು ಸೇರಿಸಿದರೆ ನಡೆಯುವ ಮ್ಯಾಜಿಕೇ ಬೇರೆ!