ಬೆಂಗಳೂರು : ಕೆಲವು ಹುಡುಗರ ಮುಖದಲ್ಲಿ ಗಡ್ಡ ಮೀಸೆ ಬೆಳೆದರೆ ಮಾತ್ರ ಅವರ ಮುಖದ ಕಳೆ ಹೆಚ್ಚುತ್ತದೆ. ಆದರೆ ಕೆಲವು ಹುಡುಗರಿಗೆ ಗಡ್ಡ ಮೀಸೆ ಹುಟ್ಟುವುದಿಲ್ಲ. ಅಂತವರು ಈ ಮನೆಮದ್ದು ಬಳಸಿದರೆ ಬೇಗ ಗಡ್ಡ ಮೀಸೆ ಬೆಳೆಯುತ್ತದೆ.
ಹರಳೆಣ್ಣೆ 2 ಟೀ ಚಮಚ, ಬಾದಾಮಿ ಎಣ್ಣೆ 1 ಟೀ ಚಮಚ, ನೀಲಗಿರಿ ಎಣ್ಣೆ ½ ಟೀ ಚಮಚ, ರೋಸ್ಮರಿ ಆಯಿಲ್ ½ ಟೀ ಚಮಚ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಲಗುವ ಮುಂಚೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ. ನಂತರ ಬೆಳಿಗ್ಗೆ ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ಗಡ್ಡ ಬೇಗ ಬೆಳೆಯುತ್ತದೆ.
ಕೊಬ್ಬರಿ ಎಣ್ಣೆ 5 ಟೀ ಚಮಚ, ಕರಿಬೇವು ಸೊಪ್ಪು 8-10 ಎಲೆ ಈವೆರಡನ್ನು ಹಾಕಿ ಒಂದು ಬಾಣಲೆಯಲ್ಲಿ 10 ನಿಮಿಷ ಬಿಸಿ ಮಾಡಿ. ನಂತರ ಅದು ತಣ್ಣಗಾದ ಮೇಲೆ ಅದಕ್ಕೆ 3 ಟೀ ಚಮಚ ಹರಳೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಹಚ್ಚಿ 5 ನಿಮಿಷ ಮಸಾಜ್ ಮಾಡಿ. ನಂತರ 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ಗಡ್ಡ ಬೇಗ ಬೆಳೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.