ಮುಖಕ್ಕೆ ಜೀವ ಕಳೆ ಬರಬೇಕಾದರೆ ಈ ಸಿಂಪಲ್ ಫೇಸ್ ಪ್ಯಾಕ್ ಟ್ರೈ ಮಾಡಿ

Krishnaveni K
ಶನಿವಾರ, 25 ಮೇ 2024 (13:14 IST)
ಬೆಂಗಳೂರು: ಮುಖದಲ್ಲಿ ಜೀವಂತಿಕೆಯೇ ಇಲ್ಲ ಎನಿಸಿದರೆ ರಾಸಾಯನಿಕ ಕ್ರೀಂಗಳನ್ನು ಬಳಸುವ ಬದಲು ಈ ಹೋಂ ಮೇಡ್ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಬಹುದು. ಇದನ್ನು ಮಾಡುವುದು ಹೇಗೆ ನೋಡೋಣ.
 
ಫೇಸ್ ‍ಪ್ಯಾಕ್ ಗೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ನಾವೇ ತಯಾರಿಸಿಕೊಳ್ಳಬಹುದು. ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತವಾಗಿರುತ್ತದೆ. ಇದೀಗ ನಾವು ಹೇಳಲು ಹೊರಟಿರುವ ಫೇಸ್ ಪ್ಯಾಕ್ ರೆಸಿಪಿಗೆ ಬೇಕಾಗಿರುವುದು ಬೀಟ್ ರೂಟ್ ಪೌಡರ್ ಮತ್ತು ಗುಲಾಬಿ ಎಸಳುಗಳ ಪೌಡರ್ ಹಾಗೂ ಸ್ವಲ್ಪ ಮೊಸರು. ಇಷ್ಟಿದ್ದರೆ ನೀವೇ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು.
 
ಮಾಡುವ ವಿಧಾನ ಇಲ್ಲಿದೆ
ಗುಲಾಬಿ ಎಸಳುಗಳ ಪುಡಿ ಮತ್ತು ಬೀಟ್ ರೂಟ್ ಪುಡಿಯನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಹಿಟ್ಟಿನ ಹದಕ್ಕೆ ತಂದುಕೊಳ್ಳಿ. ಮುಖವನ್ನು ಮೊದಲು ಸಾಮಾನ್ಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ಈ ಫೇಸ್ ಪ್ಯಾಕ್‍ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 
 
ಇದನ್ನು ಹಾಗೆಯೇ 20 ನಿಮಿಷಗಳ ಕಾಲ ಬಿಡಿ. ಬಳಿಕ ಹದ ಬಿಸಿ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಸತ್ತ ಅಂಗಾಶಗಳನ್ನು ಕಿತ್ತು ಹಾಕಿ ಹೊಸ ಕಾಂತಿ ಮೂಡುವಂತೆ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನುಗ್ಗೆ ಸೊಪ್ಪನ್ನು ನಾನ್‌ವೆಜ್ ಪ್ರಿಯರು ಈ ರೀತಿ ಟ್ರೈ ಮಾಡಲೇ ಬೇಕು

ಮಕ್ಕಳಲ್ಲಿನ ಮೊಬೈಲ್ ಗೀಳನ್ನು ಬಿಡಿಸುವ ಸುಲಭ ವಿಧಾನ ಇಲ್ಲಿದೆ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಮುಂದಿನ ಸುದ್ದಿ
Show comments