Select Your Language

Notifications

webdunia
webdunia
webdunia
webdunia

ಕೂದಲು ಉದುರಲು ಟೆಫ್ಲಾನ್ ಕೋಟೆಡ್ ಪಾತ್ರೆ ಬಳಕೆ ಕಾರಣ!

ಕೂದಲು ಉದುರಲು ಟೆಫ್ಲಾನ್ ಕೋಟೆಡ್ ಪಾತ್ರೆ ಬಳಕೆ ಕಾರಣ!
Bangalore , ಶುಕ್ರವಾರ, 16 ಡಿಸೆಂಬರ್ 2016 (11:07 IST)
ನಿಮ್ಮ ಅಡುಗೆ ಮನೆ ನಾನ್‍ಸ್ಟಿಕ್ ಅಥವಾ ಟೆಫ್ಲಾನ್ ಕೋಟೆಡ್ ಪಾತ್ರೆಗಳಿಂದ ಕೂಡಿದೆಯೇ? ಈ ನಿಮ್ಮ ಸ್ಮಾರ್ಟ್ ಜೀವನಶೈಲಿಯ ನಿರ್ಧಾರ ನಿಮ್ಮ ವಿರುದ್ಧವಾಗಿದೆ ಎಂಬುದರ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲೊಂದು ನಿಮ್ಮನ್ನು ಬೆಚ್ಚಿಬೀಳಿಸುವ ಸಂಗತಿ ಇದೆ! ಹೇರ್‍ಲೈನ್ ಇಂಟರ್‍ನ್ಯಾಷನಲ್ ರೀಸರ್ಚ್ ಅಂಡ್ ಟ್ರೀಟ್‍ಮೆಂಟ್ ಸೆಂಟರ್ ನಡೆಸಿದ ಅಧ್ಯಯನದ ಪ್ರಕಾರ ಈ 
ಟೆಫ್ಲಾನ್ ಕೋಟೆಡ್ ಪಾತ್ರೆಗಳಿಂದಾಗಿ ನಿಮ್ಮ ತಲೆ ಕೂದಲು ಉದುರುತ್ತದೆ. 
 
ಹೌದು. ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನದ ವರದಿ ಪ್ರಕಾರ ಈ ಪಾತ್ರೆಗಳಲ್ಲಿರುವ ಪರ್‍ಫ್ಲೂರೋಟ್ಯಾನಿಕ್ ಆ್ಯಸಿಡ್(ಪಿಎಫ್‍ಒಎ) ಕೂದಲು ಉದುರಲು ಪ್ರಮುಖ ಕಾರಣ. ಕೂದಲು ಉದುರುವ ಸಮಸ್ಯೆ ಹೊತ್ತು ಕ್ಲಿನಿಕ್‍ಗೆ ಆಗಮಿಸಿದ ಜನರ ಪೈಕಿ ಶೇ.80 ರಷ್ಟು ಜನರಲ್ಲಿ ತಲೆ ಕೂದಲು ಉದರುತ್ತಿರುವುದು ಈ ಪಿಎಫ್‍ಒಎ ಅಂಶದಿಂದಲೇ ಎಂದು 
ದೃಢಪಟ್ಟಿದೆ ಎಂದು ಅಧ್ಯಯನ ವರದಿ ಹೇಳಿದೆ. 
 
ಈ ಪ್ರಕರಣಗಳಲ್ಲಿ ಶೇ. 65 ರಷ್ಟು ಜನರಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತಿರುವುದು ಎಚ್ಚರಿಕೆ ಗಂಟೆಯಾಗಿದೆ. ಇದರ ಜತೆಗೆ ಶೇ. 27 ರಷ್ಟು ಜನರಲ್ಲಿ ಬ್ಲಡ್‍ಶುಗರ್ ಪ್ರಮಾಣ ಹೆಚ್ಚಿರುವುದು, 
ಶೇ.70 ರಷ್ಟು ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್(ಪಿಸಿಒಡಿ) ಕಂಡುಬಂದಿದ್ದರೆ, ಶೇ. 65 ರಷ್ಟು ಪುರುಷರಲ್ಲಿ ಥೈರಾಯ್ಡ್ ಸಮಸ್ಯೆ ಕಂಡುಬಂದಿದ್ದು, ತಲೆಗೂದಲು ಉದುರಲು ಕಾರಣವಾಗಿದೆ. 
 
ಈ ಹಿನ್ನೆಲೆಯಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಹೇರ್‍ಲೈನ್ ಇಂಟರ್‍ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‍ಗೆ ಈ ಅಧ್ಯಯನ 
ವರದಿ ನೆರವಾಗಿದೆ. ಈ ಅಧ್ಯಯನದ ಬಗ್ಗೆ ಮಾತನಾಡಿದ ಹೇರ್‍ಲೈನ್ ಇಂಟರ್‍ನ್ಯಾಷನಲ್‍ನ ಡರ್ಮಟಾಲಾಜಿಸ್ಟ್ ಡಾ.ದಿನೇಶ್‍ಗೌಡ ಅವರು, ``ಒಂದು ಬಾರಿ ಪಿಎಫ್‍ಒಎ ಅಂಶ ದೇಹದೊಳಗೆ ಸೇರಿತೆಂದರೆ ಅವರು ಮೂತ್ರಪಿಂಡ ಮತ್ತು ಯಕೃತ್‍ಗೆ ಹಾನಿ ಉಂಟು ಮಾಡುತ್ತದೆ. 
 
ಈ ಅಂಗಾಂಗಗಳು ಅಲ್ಲದೇ, ಇತರೆ ಅಂಗಾಂಗಗಳಿಗೂ ಹಾನಿ ಮಾಡಿ ಥೈರಾಯ್ಡ್ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಥೈರಾಯ್ಡ್ ಸಮಸ್ಯೆ ಬಂದಾಗ ಕೂದಲು ಉದುರಲು ಆರಂಭವಾಗುತ್ತದೆ’’ ಎಂದು ಎಚ್ಚರಿಕೆ ನೀಡಿದರು. ಹೇರ್‍ಲೈನ್ ಇಂಟರ್‍ನ್ಯಾಷನಲ್‍ನ ಡರ್ಮಟೋಸರ್ಜನ್ ಡಾ.ಪ್ರೇಮಲತಾ ಅವರು ಮಾತನಾಡಿ, ``ರೋಗಿಗಳಲ್ಲಿ ಕೂದಲು 
ಉದುರುವುದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ನಾವು ನಿರಂತರವಾಗಿ ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದೇವೆ. 
 
ಈ ಸಂಶೋಧನೆ ಪ್ರಕಾರ ಮನೆಯ ಪಾತ್ರೆಗಳು ಮತ್ತು ನೀರಿನಲ್ಲೂ ಸಹ ಇರುವ ಟೆಫ್ಲಾನ್(ಪಿಎಫ್‍ಒಎ) ಅಂಶವೂ ಸಹ ಕೂದಲು ಉದುರಲು ಕಾರಣ ಎಂಬುದು ದೃಢಪಟ್ಟಿದೆ. ಈ 
ಹಿನ್ನೆಲೆಯಲ್ಲಿ ಕೂದಲು ಉದುರಲು ಇದೂ ಒಂದು ಪ್ರಮುಖ ಕಾರಣ ಎಂಬುದನ್ನು ಖಾತರಿಪಡಿಸಿದ್ದೇವೆ. ಪಿಎಫ್‍ಒಎದಿಂದ ಕೂದಲು ಉದುರುತ್ತಿರುವುದರಿಂದ ಇದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ನಾವು ಮುಂದಡಿ ಇಟ್ಟಿದ್ದೇವೆ’’ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಮನೆಯ ವಾಸನೆ ದೂರ ಮಾಡಲು ಹೀಗೆ ಮಾಡಬಹುದು