Publish Date: Mon, 17 Nov 2014 (17:23 IST)
Updated Date: Mon, 17 Nov 2014 (17:24 IST)
ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.
ನೈಸರ್ಗಿಕವಾಗಿ ಪಿಂಕ್ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್‌ರೂಟ್‌ನ್ನು ಲೇಪಿಸಿ ಮಲಗಿ.
ಹೆಚ್ಚು ಹಸಿ ಹಣ್ಣು ತರಕಾರಿಗಳನ್ನು ಸೇವಿಸುತ್ತಿರಿ. ಹಾಗೂ ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ.
ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತದೆ. ಹಾಗಾಗಿ ಇಂಥ ಅಬ್ಯಾಸ ಕಡಿಮೆ ಮಾಡಿ.
ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನಿ. ಇದು ನಿಮ್ಮ ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯವಂತೆ ಮಾಡುತ್ತದೆ.
ತೆಂಗಿನಕಾಯಿಯನ್ನು ತುರಿದು ಹಾಲು ತೆಗೆದು ತುಟಿಗಳಿಗೆ ಸವರಿದರೆ ತುಟಿಗಳು ಮೃದುವಾಗಿ ಹೊಳೆಯುತ್ತವೆ.