Publish Date: Fri, 21 Nov 2014 (14:18 IST)
Updated Date: Fri, 21 Nov 2014 (14:19 IST)
ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಅದರಿಂದ ಅಂಗಾಂಗಗಳನ್ನು ತಿಕ್ಕಿ ಸ್ನಾನ ಮಾಡುವುದರಿಂದ ಶರೀರವು ಕಾಂತಿಯುತವಾಗುತ್ತದೆ ಮತ್ತು ಬೆವರಿನ ವಾಸನೆಯಿಂದ ಮುಕ್ತವಾಗುತ್ತದೆ.
ಕೆಸವಿನ ಗಡ್ಡೆಯನ್ನು ನುಣ್ಣಗೆ ಅರೆದು ಕೂದಲು ಬುಡಕ್ಕೆ ಹಚ್ಚುತ್ತಿದ್ದರೆ ಕೂದಲು ಉದುರುವುದು ನಿಲ್ಲುತ್ತದೆ.
ನಿಂಬೆ ಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ ರಾತ್ರಿ ಮಲಗುವಾಗ ಈ ಮಿಶ್ರ ತೈಲವನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿದರೆ ದಿನಕ್ರಮೇಣ ಕೂದಲು ಕಪ್ಪಾಗಿ ಕಾಂತಿಯುತವಾಗುತ್ತವೆ.
ಮೊಡವೆಗಳ ನಿವಾರಣೆಗಾಗಿ ಮುಖದ ಕಾಂತಿ ಹೆಚ್ಚಿಸಲು ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳಬೇಕು.
ಟೊಮೆಟೋ ಹಣ್ಣಿನ ತಿರುಳನ್ನು ಮೊಡವೆಗಳಿಗೆ ಹಚ್ಚಿಕೊಂಡರೆ ಒಂದು ವಾರದಲ್ಲಿ ಮೊಡವೆ ಮಾಯವಾಗುತ್ತವೆ.